ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಸಿರಿಗನ್ನಡದ ಸ್ಯಾಂಡಲ್​​ವುಡ್​​ನಲ್ಲಿ ಎಷ್ಟು ಡಿಮಾಂಡ್ ಇದ್ಯೋ ಅಷ್ಟೇ ಡಿಮ್ಯಾಂಡ್​​ ಅನ್ಯ ಭಾಷೆಯ ಸಿನಿ ರಂಗದಲ್ಲೂ ಇದೆ. ಟಾಲಿವುಡ್​ ಅಂಗಳದಿಂದ ಆಗಾಗ ನಮ್ಮ ಆಲ್​​ ಇಂಡಿಯಾ ಕಟೌಟ್​​ಗೆ ಕರೆಗಳು ಬರೋ ಹಾಗೆ ಪಕ್ಕದ ತಮಿಳು ಸಿನಿರಂಗದಿಂದಲೂ ಆಗಾಗ ‘‘ವಾಂಗ ವಾಂಗ ಸುದೀಪ್ ಅಣೈ’’ ಅಂತ ಸ್ವಾಗತದ ಸಿನಿಯೋಲೆಗಳು ಬರ್ತಾನೇ ಇರ್ತಾವೆ. ಈಗ ಕಾಲಿವುಡ್​​ನ ಮಲ್ಟಿ ಟ್ಯಾಲೆಂಟೆಡ್ ಉಳಗನಾಯಗನ್ ಕಮಲ್ ಹಾಸನ್ ಸಿನಿಮಾವೊಂದಕ್ಕೆ ‘‘ಕಿಚ್ಚ ಸುದೀಪ್ ಅವರೇ ನೀವು ಬಂದು ನಟಿಸಿದ್ರೆ ತುಂಬಾ ಚೆನ್ನಾಗಿರುತ್ತೆ’’ ಅನ್ನೋ ಆಫರ್ ಬಂದಿದೆಯಂತೆ.

ಕಮಲ್ ಹಾಸನ್ ಮಲ್ಟಿಟ್ಯಾಲೆಂಟೆಡ್ ಎಕ್ಸ್​​ಲೆಂಟ್ ಆ್ಯಕ್ಟರ್. ಕಿಚ್ಚ ಸುದೀಪ್ ಕೂಡ ಬಹುಮುಖ ಪ್ರತಿಭೆಯ ಪ್ರಭಾವಳಿ. ಅವರು ಬಿಗ್ ಬಾಸು, ಇವ್ರು ಬಿಗ್ ಬಾಸ್​.. ಇಬ್ಬರೂ ಒಟ್ಟಿಗೆ ಕ್ಲಾಸ್ ಪ್ಲಸ್ ಮಾಸ್. ಈ ಕಾರಣಕ್ಕೆ ತಮಿಳಿನ ನಿರ್ದೇಶಕರೊಬ್ಬರು ಹೊಸ ಕಥೆಯೊಂದ ಹೆಣೆದು ಸುದೀಪ್ ಅವರನ್ನ ಅಪ್ರೌಚ್ ಮಾಡಿದ್ದಾರೆ. ಹಾಗಾದ್ರೆ ಯಾರು ಆ ಡೈರೆಕ್ಟರ್ ಅನ್ನೋ ಪ್ರಶ್ನೆಗೆ ಉತ್ತರ ಲೋಕೇಶ್ ಕನಗರಾಜ್​​​​​​​.

ಕಮಲ್ ಹಾಸನ್​​​ಗೆ ಗೆಲುವಿಗೆ ಸಾಥ್ ನೀಡ್ತಾರಾ ಕಿಚ್ಚ..?
‘ವಿಕ್ರಂ’ ಚಿತ್ರತಂಡದಿಂದ ಕಿಚ್ಚನಿಗೆ ಬಂದಿದ್ಯಾ ಬುಲಾವ್..?
ಲೋಕೇಶ್​​​ ಕನಗರಾಜ್​. ತಮಿಳು ಸಿನಿ ರಂಗದ ಯುವ ನಿರ್ದೇಶಕ. ಕಾರ್ತಿ ನಟನೆಯ ಕೈದಿ ಸಿನಿಮಾದಿಂದ ಮೊಲದ ಪ್ರಯತ್ನದಲ್ಲೇ ಸೂಪರ್ ಸಕ್ಸಸ್ ಕಂಡ ಪ್ರತಿಭಾವಂತ. ಇನ್ನು ವಿಜಯ್ ದಳಪತಿ ಹಾಗೂ ವಿಜಯ್ ಸೇತುಪತಿ ನಟನೆಯ ಮಾಸ್ಟರ್ ಸಿನಿಮಾದ ಮೂಲಕ ಮೋಡಿ ಮಾಡಿದ ನಿರ್ದೇಶಕ ಕೂಡ ಇವ್ರೇ ಲೋಕೇಶ್ ಕನಗರಾಜ್​. ಈಗ ಕಮಲ್ ಹಾಸನ್ ಅವರ ವಿಕ್ರಂ ಚಿತ್ರದ ಸೂತ್ರಧಾರನಾಗಿದ್ದಾರೆ. ಲೋಕೇಶ್ ಕನಗರಾಜ್ ಅವರಿಗೆ ಕಿಚ್ಚ ಸುದೀಪ್ ಅವ್ರ ಅಭಿನಯವಂದ್ರೆ ಭಾರೀ ಇಷ್ಟವಂತೆ. ಹೀಗಾಗಿ ಕಮಲ್ ಅವರ ವಿಕ್ರಂ ಚಿತ್ರದಲ್ಲಿ ಸುದೀಪ್ ಅವರಿದ್ದರೆ ಸೂಪರ್ ಆಗಿರುತ್ತೆ ಎಂದು ಚಿಂತಿಸಲು ಶುರು ಹಚ್ಚಿಕೊಂಡಿದ್ದಾರಂತೆ.

ಕಾಲಿವುಡ್ ಸಿನಿ ಲೋಕದ ಉಳಗನಾಯಗನ್ ಕಮಲ್ ಹಾಸನ್ ಅವ್ರಿಗೆ ಇತ್ತೀಚಿನ ದಿನಗಳಲ್ಲಿ ಗೆಲುವು ಅನ್ನೋದೆ ಮರೀಚಿಕೆಯಾಗಿದೆ. ಸಿನಿಮಾ ಮತ್ತು ರಾಜಕೀಯ ಎರಡು ಸಮುದ್ರದಲ್ಲೂ ಈಜಾಡುತ್ತಿರೋ ಪದ್ಮಭೂಷಣ ಕಮಲ್ ಹಾಸನ್ ದೊಡ್ಡದೊಂದು ಗೆಲುವಿನ ನಿರೀಕ್ಷೆಯಲ್ಲಿ ಆಕಾಶ ನೋಡ್ತಿದ್ದಾರೆ. ಈಗಾಗಲೇ ವಿಕ್ರಂ ಚಿತ್ರದ ಟೀಸರ್ ಝಲಕ್ ಹೊರ ಬಂದಿದ್ದು ಚಿತ್ರ ಪ್ರೇಮಿಗಳನ್ನ ಇಂಪ್ರೆಸ್ ಮಾಡಿದೆ.

ನಿರ್ದೇಶಕ ಲೋಕೇಶ್ ಕನಗರಾಜ್ ಪ್ರಕಾರ ಈ ವಿಕ್ರಂ ಚಿತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟರನ್ನ ಒಟ್ಟು ಗೂಡಿಸಿ ಕಮಲ್ ಹಾಸನ್ ಮುಂದೆ ನಟಿಸಬೇಕು ಅನ್ನೋ ಕನಸಿನಲ್ಲಿದ್ದಾರೆ. ಇದು ಸಕ್ಸಸ್ ಫಾರ್ಮುಲಾ ಕೂಡ ಹೌದು. ಪ್ಯಾನ್ ಇಂಡಿಯನ್ ಲೆವೆಲ್​ನಲ್ಲಿ ಬಹುಭಾಷೆಗಳಲ್ಲಿ ಸಿನಿಮಾವನ್ನ ನಿರ್ಮಾಣ ಮಾಡಬೇಕೆನ್ನುವ ಉದ್ದೇಶದಿಂದ ಈ ಥೇರಿಗೆ ಮುಂದಾಗಿರಬಹುದು.

ಕಮಲ್ ಹಾಸನ್ ಸಿನಿಮಾದಲ್ಲಿ ನಮ್ಮ ಕಿಚ್ಚ ಸುದೀಪ್ ಅಭಿನಯಿಸುತ್ತಾರಾ ಅಭಿನಯಿಸೋದಿಲ್ವಾ ಅನ್ನೋದು ಸದ್ಯಕ್ಕೆ ಹೇಳೋಕೆ ಆಗಲ್ಲ. ಕಿಚ್ಚ ಸೀಕ್ರೆಟ್ ಸಿನಿ ಅಕೌಂಟ್​​​ನಲ್ಲಿ ಸಾಲು ಸಾಲು ಸಿನಿಮಾಗಳ ಆಫರ್​​ಗಳು ಬೆಚ್ಚಗಿವೆ. ಯಾವ ಸಿನಿಮಾ ಯಾವ ಟೈಮ್​​ಗೆ ಹೊರಗೆ ಬರುತ್ತೆ ಅನ್ನೋದನ್ನ ಈಗ್ಲೇ ಹೇಳೋದು ಕಷ್ಟ; ಯಾಕೆಂದ್ರೆ ಸುದೀಪ್ ಅಭಿನಯ ಅಂದ್ರರೆ ಎಲ್ಲರಿಗೂ ಇಷ್ಟ.

The post ಕಮಲ್ ಹಾಸನ್​​​ ಗೆಲುವಿಗೆ ಸಾಥ್ ನೀಡ್ತಾರಾ ಕಿಚ್ಚ? appeared first on News First Kannada.

Source: newsfirstlive.com

Source link