
ಕಮಲ್ ಹಾಸನ್, ಪ್ರಶಾಂತ್ ನೀಲ್, ಜ್ಯೂ. ಎನ್ಟಿಆರ್
Kamal Haasan | Prashanth Neel: ಈ ಬಗ್ಗೆ ಕಮಲ್ ಹಾಸನ್, ಜ್ಯೂ. ಎನ್ಟಿಆರ್ ಅಥವಾ ಪ್ರಶಾಂತ್ ನೀಲ್ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಆದರೆ ಅನೇಕ ಕಡೆಗಳಲ್ಲಿ ಹೀಗೊಂದು ವರದಿ ಪ್ರಕಟ ಆಗಿದೆ.
ಯಾವಾಗ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಯಿತೋ ಆಗಲೇ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಅವರ ಖ್ಯಾತಿ ಕೂಡ ರಾಷ್ಟ್ರಮಟ್ಟದಲ್ಲಿ ಹೆಚ್ಚಿತು. ಎಲ್ಲ ಸೂಪರ್ ಸ್ಟಾರ್ ನಟರು ಕೂಡ ಪ್ರಶಾಂತ್ ನೀಲ್ ಜೊತೆ ಕೆಲಸ ಮಾಡಲು ಹಾತೊರೆಯುತ್ತಿದ್ದಾರೆ. ದೊಡ್ಡ ದೊಡ್ಡ ಪ್ರೊಡಕ್ಷನ್ ಹೌಸ್ಗಳು ಕೂಡ ಅವರ ಚಿತ್ರಕ್ಕೆ ಬಂಡವಾಳ ಹೂಡಲು ಮುಂದೆ ಬಂದಿವೆ. ಆದರೆ ಈ ಸಂದರ್ಭದಲ್ಲಿ ಪ್ರಶಾಂತ್ ನೀಲ್ ಅವರು ಯಾರ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡ್ತಾರೆ ಅನ್ನೋದು ಮುಖ್ಯ. ಜ್ಯೂ. ಎನ್ಟಿಆರ್ ಜೊತೆ ಅವರು ಸಿನಿಮಾ ಮಾಡ್ತಾರೆ ಎನ್ನುವ ಮಾತು ಮೊದಲಿನಿಂದಲೂ ಕೇಳಿಬರುತ್ತಿತ್ತು. ಅದು ನಿಜವಾಗಿದೆ. ಮೇ 20ರಂದು ಜ್ಯೂ. ಎನ್ಟಿಆರ್ (Jr NTR) ಜನ್ಮದಿನದ ಪ್ರಯುಕ್ತ ಹೊಸ ಸಿನಿಮಾ ಅನೌನ್ಸ್ ಆಯಿತು. ಈ ಚಿತ್ರದ ಬಗ್ಗೆ ಇನ್ನಷ್ಟು ಅಪ್ಡೇಟ್ ಕೇಳಿಬರುತ್ತಿದೆ. ಅಚ್ಚರಿಯ ವಿಷಯ ಏನೆಂದರೆ, ಇದೇ ಸಿನಿಮಾದಲ್ಲಿ ಖ್ಯಾತ ನಟ ಕಮಲ್ ಹಾಸನ್ (Kamal Haasan) ಕೂಡ ಅಭಿನಯಿಸಲಿದ್ದಾರೆ ಎಂಬ ಬಗ್ಗೆ ಈಗ ಗಾಸಿಪ್ ಹರಡಿದೆ. ಈ ವಿಷಯ ಕೇಳಿ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ.
ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾದಲ್ಲಿ ಎಲ್ಲ ಪಾತ್ರಗಳೂ ಸ್ಟ್ರಾಂಗ್ ಆಗಿರುತ್ತವೆ. ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದಲ್ಲಿ ಅದು ಸಾಬೀತಾಗಿದೆ. ಈಗ ಅವರ ಮುಂಬರುವ ಚಿತ್ರಕ್ಕೆ ಹೀರೋ ಯಾರು ಎಂಬುದನ್ನು ಕೇಳುವಷ್ಟೇ ಕುತೂಹಲದಲ್ಲಿ ವಿಲನ್ ಯಾರು ಎಂದು ಕೇಳುತ್ತಾರೆ ಅಭಿಮಾನಿಗಳು. ಜ್ಯೂ. ಎನ್ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ನ ಸಿನಿಮಾದಲ್ಲಿ ಕಮಲ್ ಹಾಸನ್ ವಿಲನ್ ಪಾತ್ರ ಮಾಡುತ್ತಾರೆ ಎಂಬ ಗುಸುಗುಸು ಕೇಳಿಬರುತ್ತಿದೆ.