ಭಾರತೀಯ ಚಿತ್ರರಂಗದಲ್ಲಿ ಬಾಹುಬಲಿ ಸಿನಿಮಾದ ನಂತರ ನಟ ಪ್ರಭಾಸ್​​ ಓಡುವ ರೇಸ್​ ಕುದುರೆ ಅಂದ್ರೆ ತಪ್ಪಾಗಲ್ಲ. ಬಾಹುಬಲಿ ಎರಡು ಭಾಗಗಳ ರಿಲೀಸ್​ ಬಳಿಕೆ ಸಿಕ್ಕಾಪಟ್ಟೆ ಬ್ಯುಸಿಯಾದ ನಟ ಪ್ರಭಾಸ್​. ಬ್ಯಾಕ್​ ಟು ಬ್ಯಾಕ್​ ಪ್ಯಾನ್​ ಇಂಡಿಯಾ ಸಿನಿಮಾಗಳಿಗೆ ಸಹಿ ಮಾಡಿರುವ ಪ್ರಭಾಸ್​​ ಪ್ಯಾನ್​ ಇಂಡಿಯಾ ಸ್ಟಾರ್​ ಅಂತಾರೆ ಗುರುತಿಸಿಕೊಂಡಿದ್ದಾರೆ. ಸಾಲು ಸಾಲು ಸಿನಿಮಾಗಳನ್ನ ಕೈಗೆತ್ತಿಕೊಂಡಿರುವ ಪ್ರಭಾಸ್, ಬಾಲಿವುಡ್​ ಬ್ಯೂಟಿಯನ್ನ ರೊಮ್ಯಾನ್ಸ್​​ ಮಾಡಲು ಫುಲ್​ ಆನ್​ ರೆಡಿಯಾಗಿದ್ದಾರೆ. ಸೋ ಬ್ಯಾಚುಲರ್​ ಪ್ರಭಾಸ್​ ಕೊನೆಗೂ ಕಮಿಟ್​ ಆಗ್ತಿದ್ದಾರೆ ಅಂದುಕೊಳ್ಳಬೇಡಿ. ನಾವು ಹೇಳ್ತಿರೋದು ರಿಯಲ್​ ಲೈಫ್​ನಲ್ಲಿ ಅಲ್ಲ..ರೀಲ್​ ಲೈಫ್​ನಲ್ಲಿ.

ಹೌದು.. ತಮ್ಮ ಡ್ಯಾನ್ಸ್​​ ಮೂವ್ಸ್​​ ಮೂಲಕವೇ ಅದೆಷ್ಟೂ ಸಿನಿ ಪ್ರೇಕ್ಷಕರ ನಿದ್ದೆಗೆಡಿಸಿರುವ ಕತ್ರಿನಾ ಕೈಫ್​ (ಕ್ಯಾಟ್​) ಪ್ರಭಾಸ್​ ಮುಂದಿನ ಸಿನಿಮಾ ನಾಯಕಿ. ನಿರ್ದೇಶಕ ಸಿದ್ಧಾರ್ಥ್​ ಆನಂದ್​ ಈ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಲಿದ್ದು, ಈಗಾಗಲೇ ಸಿನಿಮಾದ ಪ್ರೀ-ಪ್ರೊಡಕ್ಷನ್ಸ್​​ ಶುರು ಮಾಡಿಕೊಂಡಿದ್ದಾರೆ ಅನ್ನೋ ಸುದ್ದಿ ಹಬ್ಬಿದೆ. ಈ ಹಿಂದೆ ಸಿದ್ಧಾರ್ಥ್​ ಆನಂದ್​, ಕತ್ರಿನಾ ಕೈಫ್​ ನಟನೆಯ ‘ಬ್ಯಾಂಗ್​ ಬ್ಯಾಂಗ್’​ ಹಾಗೂ ಹೃತಿಕ್ ​- ಟೈಗರ್​ ಶ್ರಾಫ್​ ಅಭಿನಯದ ‘ವಾರ್’​ ಸಿನಿಮಾ ನಿರ್ದೇಶಿಸಿದ್ದರು.

ಇದೊಂದು ಮೆಗಾ ಬಜೆಟ್ ಆ್ಯಕ್ಷನ್​ ಥ್ರಿಲ್ಲರ್​​ ಸಿನಿಮಾ ಆಗಿದ್ದು, ಪ್ರಭಾಸ್​ ಜೊತೆ ರೊಮ್ಯಾನ್ಸ್​​ ಮಾಡೋದಕ್ಕೆ ಕ್ಯಾಟ್​ ಓಕೆ ಅಂದಿದ್ದಾರೆ ಎನ್ನಲಾಗ್ತಿದೆ. ಇನ್ನುಳಿದಂತೆ ‘ಆದಿಪುರುಷ’ ಸಿನಿಮಾದ ಕೆಲಸ ಶುರು ಮಾಡಿರುವ ಪ್ರಭಾಸ್​​, ಇನ್ನೊಂದೆಡೆ ಪ್ರಶಾಂತ್​ ನೀಲ್​ ನಿರ್ದೇಶನದ ‘ಸಲಾರ್’​ನಲ್ಲೂ ಬ್ಯುಸಿಯಾಗಿದ್ದಾರೆ. ಮತ್ತೊಂದೆಡೆ ನಾಗ್​ ಅಶ್ವಿನ್​ ನಿರ್ದೇಶನದ ಸಿನಿಮಾದಲ್ಲಿ, ದೀಪಿಕಾ ಪಡುಕೋಣೆ ಜೊತೆ ರೊಮ್ಯಾನ್ಸ್​ ಮಾಡೋಕೂ ಪ್ರಭಾಸ್​ ಸಜ್ಜಾಗಿದ್ದಾರೆ. ಸದ್ಯ ಕತ್ರಿನಾ ಕೈಫ್,​​ ಪ್ರಭಾಸ್​ ಈ ಸಿನಿಮಾಗೆ ನಾಯಕಿಯಾಗಿರುವ ಬಗ್ಗೆ ಅಧಿಕೃತ ಮಾಹಿತಿಯಷ್ಟೇ ಹೊರ ಬೀಳಬೇಕಿದೆ.

 

The post ಕಮಿಂಗು ಡಾರ್ಲಿಂಗ್ ಅಂದ್ರು ಕತ್ರಿನಾ; ಇನ್ನೇನು ಕೆಲಸ ನಂಗೂ ನಿಂಗೂ ಡೇಲಿ ಡಿಂಗು ಡಾಂಗು ಡಿಂಗು ಅಂದ್ರು ಪ್ರಭಾಸ್ appeared first on News First Kannada.

Source: newsfirstlive.com

Source link