ಬೆಂಗಳೂರು: ಟ್ರಾಫಿಕ್ ಸಿಗ್ನಲ್ ಗಳಲ್ಲಿ ಮಕ್ಕಳು ವಸ್ತುಗಳ ಮಾರಾಟ & ಭಿಕ್ಷೆ ವಿಚಾರಕ್ಕೆ ಸಂಬಂಧಿಸಿದಂತೆ ಮಕ್ಕಳಿಂದ ವಸ್ತುಗಳ ಮಾರಾಟ ನಿಷೇಧಿಸಲು ಕೋರಿದ್ದ ಪಿಐಎಲ್ ವಿಚಾರಣೆ ಇಂದು ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠದಲ್ಲಿ ನಡೆಯಿತು.

ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಕೋರ್ಟ್ ನಗರ ಪೊಲೀಸ್ ಆಯುಕ್ತರಾದ ಕಮಲ್​ಪಂತ್​ಗೆ ಜೂನ್ 18 ರಂದು ಖುದ್ದು ಹಾಜರಾಗುವಂತೆ ಸೂಚನೆ ನೀಡಿದೆ. ಬಲವಂತದ ಬಾಲಕಾರ್ಮಿಕ ಪದ್ದತಿ & ಮಕ್ಕಳ ಸಾಗಣೆ ನಿಯಂತ್ರಣಕ್ಕೆ ನಿರ್ವಹಣೆ ಸರಿಯಿಲ್ಲ. ಇಂತಹ ಕೇಸ್​ಗಳನ್ನ ನಿಭಾಯಿಸುವಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ತಾಳಿದೆ. ಈ ಬಗ್ಗೆ ಕೇವಲ ಸರ್ಕಾರ ಚರ್ಚೆಯಲ್ಲೇ ಇರ್ತಿರಾ..? ಇಲ್ಲಾ ಇಂತಹ ಘಟನೆಗಳ ಬಗ್ಗೆ ಎಫ್ಐಆರ್ ದಾಖಲಿಸ್ತಿರಾ.‌? ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠ ತರಾಟೆ ತೆಗೆದುಕೊಂಡಿದೆ.

ಕೇವಲ ಸಭೆಯ ನಡೆಸುವುದರಲ್ಲಿಯೇ ಮಗ್ನರಾಗಿರುತ್ತಾರೋ..?

ನಗರ ಪೊಲೀಸರು ಕೇವಲ ಸಭೆ ಕರೆಯುತ್ತಿದ್ದಾರಾ..? ಕೇವಲ ಅದರಲ್ಲಿಯೇ ಮಗ್ನರಾಗಿರುತ್ತಾರೋ.. ಇಲ್ಲಾ ಈ ಸಂಬಂಧ ಎಫ್ಐಆರ್ ದಾಖಲಿಸಿಕೊಳ್ಳುತ್ತಾರೋ? ಎಂದು ಬೆಂಗಳೂರು ನಗರ ಪೊಲೀಸರ ವಿರುದ್ಧವೂ ಹೈಕೋರ್ಟ್ ಗರಂ ಆಗಿದೆ. ಕೇಸ್ ಸಂಬಂಧ ಕೈಗೊಂಡ ಕ್ರಮದ ವರದಿ ಸಲ್ಲಿಸುವಂತೆ ಕಮಿಷನರ್ ಗೆ ಸೂಚನೆ ನೀಡಿದೆ.

ಸಿಜೆ ಅಭಯ್ ಶ್ರೀನಿವಾಸ್ ಓಕಾ & ನ್ಯಾ. ಸೂರಜ್ ಗೋವಿಂದರಾಜ್ ಪೀಠ ಈ ಆದೇಶ ಹೊರಡಿಸಿದೆ. ಟ್ರಾಫಿಕ್ ಜಂಕ್ಷನ್‌ಗಳಲ್ಲಿ ಮಕ್ಕಳು ಕೆಲ ಸಾಮಾಗ್ರಿಗಳ‌ ಮಾರಾಟ ಮಾಡ್ತಿದ್ದಾರೆ.. ಅದನ್ನ ನಿಷೇಧಿಸಿ ಮಕ್ಕಳ ರಕ್ಷಣೆ ಕೋರಿ ಲೆಟ್ಜ್‌ಕಿಟ್‌ ಪಿಐಎಲ್ ಹಾಕಿತ್ತು. ಸದ್ಯ ಅರ್ಜಿ ವಿಚಾರಣೆಯನ್ನು ಜೂನ್ 18ಕ್ಕೆ ಮುಂದೂಡಿಕೆ ಮಾಡಿ ಹೈಕೋರ್ಟ್ ಆದೇಶಿಸಿದೆ.

The post ಕಮಿಷನರ್ ಕಮಲ್​ಪಂತ್ ಖುದ್ದಾಗಿ ಕೋರ್ಟ್​ ಮುಂದೆ ಹಾಜರಾಗ್ಬೇಕು- ಹೈಕೋರ್ಟ್ ಹೀಗಂದಿದ್ದೇಕೆ..? appeared first on News First Kannada.

Source: newsfirstlive.com

Source link