ಕಮಿಷನ್​ ಬಗ್ಗೆ ದಾಖಲೆ ಬಿಡುಗಡೆ ಮಾಡಿದರೆ ಗೌರವ ಬರುತ್ತದೆ; ಇಲ್ಲದಿದ್ರೆ ಕಾಂಗ್ರೆಸ್ ಏಜೆಂಟ್​ ಎಂಬ ಭಾವನೆ ಬರುತ್ತದೆ: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ | KS Eshwarappa reacts to 40 % commission by contractors association president allegation


ಇನ್ನು, ವಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸಕ್ಕೆ ಗುತ್ತಿಗೆದಾರರ ಅಧ್ಯಕ್ಷ ಕೆಂಪಣ್ಣ ಭೇಟಿ ನಿಡುವುದು ಬೇಡ ಅನ್ನಲ್ಲ. ಕೊನೆಯ ಪಕ್ಷ ಅವರ ಮೂಲಕವಾದರೂ ದಾಖಲೆ ಬಿಡುಗಡೆ ಮಾಡಿಸಿ – ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ

ಕಮಿಷನ್​ ಬಗ್ಗೆ ದಾಖಲೆ ಬಿಡುಗಡೆ ಮಾಡಿದರೆ ಗೌರವ ಬರುತ್ತದೆ; ಇಲ್ಲದಿದ್ರೆ ಕಾಂಗ್ರೆಸ್ ಏಜೆಂಟ್​ ಎಂಬ ಭಾವನೆ ಬರುತ್ತದೆ: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ

ಕೆ ಎಸ್ ಈಶ್ವರಪ್ಪ

TV9kannada Web Team

| Edited By: sadhu srinath

Aug 24, 2022 | 6:54 PM
ಶಿವಮೊಗ್ಗ: ರಾಜ್ಯ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ದಾಖಲೆ ಬಿಡುಗಡೆ ಮಾಡಲಿ (contractors association president allegation). ಕಮಿಷನ್​ ಬಗ್ಗೆ ದಾಖಲೆ ಬಿಡುಗಡೆ ಮಾಡಿದರೆ ಗೌರವ ಬರುತ್ತದೆ. ಇಲ್ಲದಿದ್ರೆ ಕಾಂಗ್ರೆಸ್ ಏಜೆಂಟ್​ ಎನ್ನುವ ಭಾವನೆ ಬರುವುದು ಸ್ವಾಭಾವಿಕ. ನೀವು ಒಬ್ಬರು ಹಿರಿಯರು.. ಗುತ್ತಿಗೆದಾರರ ಸಂಘದ ಅಧ್ಯಕ್ಷರೂ ಆಗಿದ್ದೀರಿ.. ನಿಮಗೆ ಗೌರವ ಕೊಟ್ಟು ಹೇಳುತ್ತೇನೆ.. ಯಾವುದೇ ಕಾರಣಕ್ಕೂ ಗಾಳಿಯಲ್ಲಿ ಗುಂಡು.. ಗಾಳಿಯಲ್ಲಿ ಬಾಣ ಬಿಡುವುದು ಬೇಡ… ನಿಮ್ಮ ಬಳಿ ದಾಖಲೆ ಇದ್ದರೆ ನೇರವಾಗಿ ಮಾಧ್ಯಮ .. ನ್ಯಾಯವಾದಿ.. ಪತ್ರಿಕಾಗೋಷ್ಠಿ ಮೂಲಕ ಬಿಡುಗೆ ಮಾಡಿ. ನಿಮಗೆ ಯಾರ ಮೇಲೆ ನಂಬಿಕೆ ಇಲ್ಲ ಅಂದ್ರೆ.. ರಾಜ್ಯದ ಜನರು ನಿಮ್ಮನ್ನು ಕ್ಷಮಿಸಿಸುವುದಿಲ್ಲ.. ಇನ್ಮುಂದೆ ಸಚಿವರು, ಶಾಸಕರ ವಿರುದ್ಧ ಆರೋಪ ಮಾಡಿದರೆ ನಂಬಲ್ಲ ಎಂದು ಶಿವಮೊಗ್ಗ ನಗರದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ (KS Eshwarappa) ಹೇಳಿದ್ದಾರೆ.

ಇನ್ನು, ವಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸಕ್ಕೆ ಗುತ್ತಿಗೆದಾರರ ಅಧ್ಯಕ್ಷ ಕೆಂಪಣ್ಣ ಭೇಟಿ ನಿಡುವುದು ಬೇಡ ಅನ್ನಲ್ಲ. ಕೊನೆಯ ಪಕ್ಷ ಅವರ ಮೂಲಕವಾದರೂ ದಾಖಲೆ ಬಿಡುಗಡೆ ಮಾಡಿಸಿ. ಪ್ರಧಾನಿಗೆ ಪತ್ರ ಬರೆಯುವ ಸಮಯದಲ್ಲಿ ದಾಖಲೆ ಕೊಡಬೇಕು. ದಾಖಲೆ ನೀಡಿದರೆ ಪ್ರಧಾನಿ ಖಂಡಿತವಾಗಿಯೂ ಕ್ರಮಕೈಗೊಳ್ಳುತ್ತಾರೆ. ದಾಖಲೆ ನೀಡದೆ ಕೇವಲ ಹೇಳಿಕೆ ನೀಡಿದರೆ ಯಾವುದೇ ಪ್ರಯೋಜನವಿಲ್ಲ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.