ಈತ ತಂಡಕ್ಕೆ ಕಾಲಿಟ್ಟಾಗ ಗೇಮ್​ ಚೇಂಜರ್​ ಆಗಿದ್ದ. ರಾಷ್ಟ್ರೀಯ ತಂಡದಲ್ಲಿ ಅಲ್ಪ ಅವಧಿಯಲ್ಲೇ ಮಾಡಿದ ಸಾಧನೆ ಅಸಾಧಾರಣ. ಈ ಎಲ್ಲಕ್ಕಿಂತ ವಿಶೇಷವಾಗಿ ಗಮನ ಸೆಳೆದಿದ್ದು, ಆತನ ವಿಭಿನ್ನ ಬೌಲಿಂಗ್​ನಿಂದ. ಆದರೀಗ ಈತನಿಗೆ ತಂಡದಲ್ಲಿ ಸ್ಥಾನವಿಲ್ಲದಂತಾಗಿದೆ.!

ಟೀಮ್​ ಇಂಡಿಯಾ ಅಪರೂಪದ ಸ್ಪಿನ್ನರ್ ಕುಲ್ದೀಪ್​ ಯಾದವ್. ಲೆಫ್ಟ್ ಆರ್ಮ್​​​ ರಿಸ್ಟ್​ ಸ್ಪಿನ್​​​ ಮೂಲಕ​ ಬ್ಯಾಟ್ಸ್​​​ಮನ್​​​ಗಳ ಪಾಲಿಗೆ ದುಸ್ವಪ್ನವಾಗಿದ್ದ​. ಹಾಗೇ ಗೂಗ್ಲಿ, ಫ್ಲಿಪರ್ ಬೌಲಿಂಗ್​ನಿಂದ ಎದುರಾಳಿಗಳಿಗೆ ಕಂಟಕವಾಗಿದ್ದ ಚೈನಾಮೆನ್​, ಅಂತಾರಾಷ್ಟ್ರೀಯ ಕ್ರಿಕೆಟ್​ ಕರಿಯರ್​​​ನಲ್ಲಿ ಮಾಡಿರೋ ಸಾಧನೆ ಅಸಾಧಾರಣ. ಆದರೆ ವಿಭಿನ್ನ ಕೌಶಲ್ಯಯುತ ಸ್ಪಿನ್ನರ್​​ಗೆ, ತಂಡದಲ್ಲಿ ಜಾಗವೇ ಇಲ್ಲದಂತಾಗಿದೆ.

2019ರ ಏಕದಿನ ವಿಶ್ವಕಪ್​​​ ನಂತರ ಸೀಮಿತ ಓವರ್​ಗಳಲ್ಲಿ ವೈಫಲ್ಯ ಅನುಭವಿಸಿದ ಕುಲ್ದೀಪ್​​​ಗೆ, ಅವಕಾಶದ ಬರ ಎದುರಾಗಿದೆ. ತಂಡಕ್ಕೆ ಕಾಲಿಟ್ಟಾಗಿನಿಂದ ಉತ್ತಮ ಟ್ರ್ಯಾಕ್​ ರೆಕಾರ್ಡ್​​ ಹೊಂದಿದ್ದ ಚೈನಾಮೆನ್, ಅವಕಾಶಕ್ಕಾಗಿ ಈಗ ಚಾತಕ ಪಕ್ಷಿಯಂತೆ ಕಾಯ್ತಿರೋದು ಅಚ್ಚರಿ ಮೂಡಿಸಿದೆ. ಕುಲ್ದೀಪ್​​ರ ಒಂದೆರಡು ವೈಫಲ್ಯ ಪರಿಗಣಿಸಿ, ತಂಡದಿಂದ ದೂರ ಇಟ್ಟಿರುವುದು, ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆ ಎದ್ದಿವೆ.

ರಕ್ಷಿಸಬೇಕಿದೆ ಯೂನಿಕ್​ ಟ್ಯಾಲೆಂಟೆಡ್​​ ಕುಲ್ದೀಪ್​ ಸ್ಪಿನ್​​
ಕುಲ್ದೀಪ್​​​ ಯೂನಿಕ್​​ ಟ್ಯಾಲೆಂಟ್​ ಹೊಂದಿದ್ದಾರೆ. ತಂಡದಲ್ಲಿ ಈತನಿಗೆ ಪ್ರಮುಖ ಸ್ಥಾನ ನೀಡಬೇಕಿದೆ. ಆದರೆ ಇಂತಹ ಸ್ಪಿನ್ನರ್​​ ಉಳಿಸಿಕೊಳ್ಳಬೇಕಿದ್ದ​ ಟೀಮ್ ಇಂಡಿಯಾ ಮ್ಯಾನೇಜ್​ಮೆಂಟ್​, ನಿರ್ಲಕ್ಷಿಸಿ ಬೆಂಚ್​ಗೆ ಸೀಮಿತ ಮಾಡಿದ್ದು ಸರಿಯಲ್ಲ ಅನ್ನೋದು, ಮಾಜಿ ಕ್ರಿಕೆಟಿಗರ ವಾದ. ತಂಡದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿರುವ ಕುಲ್ದೀಪ್​​ರನ್ನ, ಪ್ರಮೋಟ್ ಮಾಡಬೇಕಿರುವ ಜವಾಬ್ದಾರಿ ಮ್ಯಾನೇಜ್​ಮೆಂಟ್​​ಗಿದೆ. ಆದರೆ ಈ ಕಾರ್ಯಕ್ಕೆ ಮುಂದಾಗದ ಮ್ಯಾನೇಜ್​ಮೆಂಟ್, ಕುಲ್ದೀಪ್​​ರನ್ನ ತಂಡದಿಂದ ಕೈಬಿಟ್ಟರೆ ನಮಗೆ ನಷ್ಟ ಅನ್ನೋದನ್ನ ಅರಿಯಬೇಕಿದೆ.

ಈ ಹಿಂದಿನ ಆಸಿಸ್​​-ಇಂಗ್ಲೆಂಡ್ ಸರಣಿಯಲ್ಲಿ ಬೆಂಚ್​ ಬಿಸಿ ಮಾಡಿದ್ದ ಕುಲ್ದೀಪ್​, ಇದೀಗ ಲಂಕನ್ನರ ಬೇಟೆಗೆ ಅಣಿಯಾಗಿದ್ದಾರೆ. ಈ ಪ್ರವಾಸದಲ್ಲಿ ಕುಲ್ದೀಪ್​ ಮ್ಯಾಜಿಕ್​ ಮಾಡಿದ್ದೇ ಆದರೆ, ಸೀನಿಯರ್​​ ತಂಡಕ್ಕೆ ಕಮ್​ಬ್ಯಾಕ್​ ಮಾಡೋದ್ರಲ್ಲಿ, ಅನುಮಾನವೇ ಇಲ್ಲ..! ಇಲ್ದಿದ್ರೆ ಟೀಮ್ ಇಂಡಿಯಾಕ್ಕೆ ಮತ್ತೆ ರಿಟರ್ನ್ ಆಗೋದು, ಡೌಟ್​ಫುಲ್ ಆಗಿದೆ.

The post ಕಮ್​​ಬ್ಯಾಕ್​​ಗೆ ರಿಸ್ಟ್​​ ಸ್ಪಿನ್ನರ್​ ಪರದಾಟ- ಕುಲ್ದೀಪ್​​ರನ್ನ ನಿರ್ಲಕ್ಷಿಸಿರೋದೇಕೆ ಮ್ಯಾನೇಜ್​ಮೆಂಟ್? appeared first on News First Kannada.

Source: newsfirstlive.com

Source link