ಕರಣ್ ಜೋಹರ್ ಪಾರ್ಟಿ ಎಫೆಕ್ಟ್​; ಶಾರುಖ್​, ಕತ್ರಿನಾಗೆ ಕೊರೊನಾ ಪಾಸಿಟಿವ್ | Shah Rukh Khan And Katrina Kaif Tested Covid Positive After Karan Johar Party


ಕರಣ್ ಜೋಹರ್ ಪಾರ್ಟಿ ಎಫೆಕ್ಟ್​; ಶಾರುಖ್​, ಕತ್ರಿನಾಗೆ ಕೊರೊನಾ ಪಾಸಿಟಿವ್

ಶಾರುಖ್​-ಕತ್ರಿನಾ

ಪಾರ್ಟಿಗೆ ಬಂದ ಸೆಲೆಬ್ರಿಟಿಗಳು ಒಟ್ಟಾಗಿ ಕುಣಿದು ಕುಪ್ಪಳಿಸಿದ್ದರು. ಶಾರುಖ್ ಖಾನ್ ಹಾಗೂ ಗೌರಿ ಖಾನ್ ಒಟ್ಟಾಗಿ ಕಾಣಿಸಿಕೊಂಡರೆ, ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಈ ಪಾರ್ಟಿಯಲ್ಲಿ ಮಿಂಚಿದ್ದರು.

ಕರಣ್ ಜೋಹರ್​ ಅವರು (Karan Johar) ಕಳೆದ ತಿಂಗಳು ಗ್ರ್ಯಾಂಡ್ ಆಗಿ ಬರ್ತ್​ಡೇ ಪಾರ್ಟಿ ಆಯೋಜನೆ ಮಾಡಿದ್ದರು. ಈ ಪಾರ್ಟಿಗೆ ಬಾಲಿವುಡ್​ ಸೆಲೆಬ್ರಿಟಿಗಳ ದಂಡೇ ನೆರೆದಿತ್ತು. ಈ ಪೈಕಿ 55 ಸೆಲೆಬ್ರಿಟಿಗಳಿಗೆ ಕೊವಿಡ್ ಪಾಸಿಟಿವ್ ಆಗಿದೆ ಎಂದು ವರದಿ ಆಗಿದೆ. ಈ ಮೂಲಕ ಕರಣ್​ ಜೋಹರ್ ಏರ್ಪಡಿಸಿದ್ದ ಪಾರ್ಟಿ ಕೊರೊನಾದ ಹಾಟ್​ಸ್ಪಾಟ್ ಆಗಿದೆ. ಕೆಲ ವರದಿಗಳ ಪ್ರಕಾರ ಶಾರುಖ್ ಖಾನ್ (Shah Rukh Khan) ಹಾಗೂ ಕತ್ರಿನಾ ಕೈಫ್​ಗೆ ಕೊವಿಡ್ ಪಾಸಿಟಿವ್ ಆಗಿದೆ. ಇವರಿಬ್ಬರೂ ಬರ್ತ್​ಡೇ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು.

ಕರಣ್ ಜೋಹರ್ ಅವರು ಯಶ್​ ರಾಜ್ ಫಿಲ್ಮ್​ ಸ್ಟುಡಿಯೋದಲ್ಲಿ ಬರ್ತ್​ಡೇ ಪಾರ್ಟಿ ಆಯೋಜನೆ ಮಾಡಿದ್ದರು. ಇದು ಅವರ 50ನೇ ವರ್ಷದ ಬರ್ತ್​ಡೇ ಆಗಿತ್ತು. ಹೀಗಾಗಿ, ಅದ್ದೂರಿತನ ಕೊಂಚ ಹೆಚ್ಚೇ ಇತ್ತು. ಪಾರ್ಟಿಗೆ ಬಂದ ಸೆಲೆಬ್ರಿಟಿಗಳು ಒಟ್ಟಾಗಿ ಕುಣಿದು ಕುಪ್ಪಳಿಸಿದ್ದರು. ಶಾರುಖ್ ಖಾನ್ ಹಾಗೂ ಗೌರಿ ಖಾನ್ ಒಟ್ಟಾಗಿ ಕಾಣಿಸಿಕೊಂಡರೆ, ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಈ ಪಾರ್ಟಿಯಲ್ಲಿ ಮಿಂಚಿದ್ದರು.

ಕತ್ರಿನಾ ಕೈಫ್ ಅವರಿಗೆ ಏಪ್ರಿಲ್​ 2021ರಲ್ಲಿ ಕೊವಿಡ್ ಸೋಂಕು ಅಂಟಿತ್ತು​ . ಈಗ ಮತ್ತೊಮ್ಮೆ ಅವರಿಗೆ ಕೊವಿಡ್ ಅಂಟಿದೆ. ಕತ್ರಿನಾ ಹಾಗೂ ಶಾರುಖ್ ಖಾನ್ ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಪಾರ್ಟಿ ಬಳಿಕ ಚಿತ್ರದ ಸೆಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರಿಂದ ಸಿನಿಮಾದ ತಾಂತ್ರಿಕ ವರ್ಗದವರಿಗೆ ಕೊವಿಡ್ ಅಂಟಿರುವ ಭಯ ಕಾಡುತ್ತಿದೆ.

‘ನಮ್ಮ ಬ್ರಾಂಡ್ ಅಂಬಾಸಿಡರ್ ಶಾರುಖ್ ಖಾನ್ ಅವರಿಗೆ ಕೋವಿಡ್ ಪಾಸಿಟಿವ್ ಆಗಿದೆ ಎಂಬುದು ತಿಳಿಯಿತು. ಅವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿ. ಶಾರುಖ್ ಅವರೇ ಗುಣಮುಖರಾಗಿ. ಆದಷ್ಟು ಬೇಗ ಹಿಂತಿರುಗಿ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ. 2020ರಲ್ಲಿ ಶಾರುಖ್ ಖಾನ್ ಅವರನ್ನು ರಾಜ್ಯದ ರಾಯಭಾರಿಯಾಗಿ ಮಮತಾ ಬ್ಯಾನರ್ಜಿ ನೇಮಕ ಮಾಡಿದ್ದರು.

TV9 Kannada


Leave a Reply

Your email address will not be published.