ಮೈಸೂರು: ಕೊರೊನಾ ಸಾವಿನ ಸರಣಿ ಮೈಸೂರಿನಲ್ಲಿ ಮುಂದುವರಿದಿದ್ದು, ವಾರದ ಅಂತರದಲ್ಲಿ ಇಬ್ಬರು ಸಹೋದರರು ಸೋಂಕಿಗೆ ಬಲಿಯಾಗಿದ್ದಾರೆ.

ಮೈಸೂರಿನ ಬಂಡೀಪಾಳ್ಯ ನಿವಾಸಿಗಳಾದ ರಾಘವೇಂದ್ರ (33), ಪ್ರಸಾದ್ (31) ಸಾವನ್ನಪ್ಪಿದ ಸಹೋದರರಾಗಿದ್ದು, ಒಂದು ವಾರದ ಅಂತರದಲ್ಲಿ ಅಣ್ಣ ತಮ್ಮ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಸೋಂಕಿಗೆ ಒಳಗಾಗಿದ್ದ ಪ್ರಸಾದ್ ಕಳೆದ ವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಇಂದು ರಾಘವೇಂದ್ರ ಸಾವನ್ನಪ್ಪಿದ್ದಾರೆ.

ಸಾವಿಗೂ ಮುನ್ನ ದಿನ ರಾಘವೇಂದ್ರ ವಿಡಿಯೋ ಕಾಲ್​ ಮಾಡಿ ಪತ್ನಿ ಹಾಗೂ ತಮ್ಮನೊಂದಿಗೆ ಮಾತನಾಡಿದ್ದು, ನಾನು ಬೇಗ ಗುಣಮುಖನಾಗಿ ಬರುತ್ತೇನೆ ಎಂದು ಹೇಳಿದ್ದಾರೆ. ಆದರೆ ವಿಡಿಯೋ ಕಾಲ್​ ಮಾಡಿದ ಮರು ದಿನವೇ ರಾಘವೇಂದ್ರ ಸಾವನ್ನಪ್ಪಿದ್ದಾರೆ. ಸದ್ಯ ತನ್ನ ಇಬ್ಬರು ಸಹೋದರರನ್ನು ಕಳೆದು ಕೊಂಡ ನವೀನ್, ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದು, ಇಬ್ಬರು ಅಣ್ಣಂದಿರ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದಿದ್ದಾರೆ. ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಲಭಿಸದಿರುವುದೇ ಸಹೋದರರ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.

The post ಕರುಣೆ ಇಲ್ಲದ ಕೊರೊನಾ; ವಾರದ ಅಂತರದಲ್ಲಿ ಸಹೋದರರನ್ನು ಬಲಿ ಪಡೆದ ಮಹಾಮಾರಿ appeared first on News First Kannada.

Source: newsfirstlive.com

Source link