ಕರುನಾಡ ‘ರಾಜಕುಮಾರ’ನಿಗಾಗಿ ಒಂದಾದ ರಾಜಕೀಯ ನಾಯಕರು; ಪಕ್ಷಬೇಧ ಮರೆತು ಅದೊಂದೇ ಧ್ವನಿ..!


ಮರೆಯಾದ ಮಾಣಿಕ್ಯ ಚಂದನವನದ ರಾಜಕುಮಾರ ಅಪ್ಪುವಿಗೆ ಪದ್ಮಶ್ರೀ ನೀಡುವಂತೆ ರಾಜ್ಯದಲ್ಲಿ ಒಕ್ಕೊರಲ ಧ್ವನಿ ಎದ್ದಿದೆ. ರಾಜಕೀಯ ಸನಿಹಕ್ಕೂ ಹೋಗದ ಅಪ್ಪುಗಾಗಿ ರಾಜಕೀಯ ನೇತಾರರು ಒಂದಾಗಿದ್ದಾರೆ. ದೇಶದ ಉನ್ನತ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂಬ ಒಮ್ಮತದ ಮಾತುಗಳನ್ನಾಡ್ತಿದ್ದಾರೆ. ಈ ಮೂಲಕ ಪುನೀತ ಶಕ್ತಿ ರಾಜಕೀಯ ನಾಯಕರ ಧ್ವನಿ ಒಗ್ಗೂಡಿಸಿದೆ.

ರಾಜಕೀಯ ನಾಯಕರ ಧ್ವನಿ ಒಗ್ಗೂಡಿಸಿದ ರಾಜಕುಮಾರ
ಪುನೀತ್​ಗೆ ಪದ್ಮಶ್ರೀ ಪ್ರಶಸ್ತಿ ಬೇಡಿಕೆ ವಿಚಾರದಲ್ಲಿ ಏಕಸ್ವರ!

ಮರೆಯಾದ ಮಾಣಿಕ್ಯ, ಚಂದನವನದ ರಾಜಕುಮಾರ ಅಪ್ಪು.. ಮರೆಯಾಗಿ 11 ದಿನಗಳು ಕಳೆದರೂ ಅಪ್ಪುವನ್ನ ಕಳೆದುಕೊಂಡ ಶೋಕವಾಗಲೀ, ನೋವಾಗಲೀ ಇನ್ನೂ ಕೊಂಚವೂ ಕಡಿಮೆಯಾಗಿಲ್ಲ. ಅಷ್ಟರಮಟ್ಟಿಗೆ ಅಪ್ಪು ನಾಡಿನ ಜನಮಾನಸದಲ್ಲಿ ನೆಲೆಸಿದ್ದಾರೆ.. ಅದ್ರಲ್ಲೂ ವಿಶೇಷ ಎಂಬಂತೆ ಅದೊಂದು ವಿಚಾರದಲ್ಲಿ ಅಪ್ಪು ಶಕ್ತಿ ರಾಜಕೀಯ ನಾಯಕರ ಧ್ವನಿಯನ್ನೂ ಒಗ್ಗೂಡಿಸಿದೆ. ಪುನೀತ್​ಗೆ ಪದ್ಮಶ್ರೀ ಪ್ರಶಸ್ತಿ ಬೇಡಿಕೆ ವಿಚಾರದಲ್ಲಿ ರಾಜಕೀಯ ನಾಯಕರ ಏಕಸ್ವರ ಮೊಳಗಿದೆ.

 ಪದ್ಮಶ್ರೀಗಾಗಿ ಏಕಧ್ವನಿ
ಪ್ರತಿ ವಿಚಾರಕ್ಕೂ ಅಪಸ್ವರ ತೆಗೆಯುತ್ತಿದ್ದ ರಾಜಕೀಯ ನಾಯಕರು, ರಾಜಕೀಯ-ರಾಜಕೀಯೇತರ ವಿಚಾರಗಳ ಬಗ್ಗೆ ಕೆಸರೆರಚಾಟ ನಡೆಸ್ತಿದ್ರು. ಅಷ್ಟೇ ಏಕೆ ನೆಲ, ಜಲ, ಭಾಷೆಯ ವಿಚಾರವಾಗಿಯೂ ಕಿತ್ತಾಡಿಕೊಳ್ತಿದ್ರು.. ಆದ್ರೆ ಸದ್ಯ ಅವೆಲ್ಲವನ್ನೂ‌ ಮೀರಿ ಏಕಸ್ವರಕ್ಕೆ ಕಾರಣವಾದ ಕನ್ನಡದ ಕಣ್ಮಣಿ, ಅಣ್ಣಾವ್ರ ಪುತ್ರ, ನಾಯಕರ ಕೀಳು ಹೇಳಿಕೆಗೆ ಬ್ರೇಕ್ ಹಾಕಿದ್ದಾರೆ. ಉಳಿದದ್ದೆಲ್ಲವನ್ನೂ ಮರೆತು ಪುನೀತ್​ಗಾಗಿ ಏಕಧ್ವನಿ ಪ್ರಕಟಿಸಿರುವ ನಾಯಕರು, ಪುನೀತ್​​​​ಗೆ ದೇಶದ ಉನ್ನತ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂಬ ಒಮ್ಮತದ ಮಾತತನ್ನಾಡ್ತಿದ್ದಾರೆ. ಅದ್ರಲ್ಲೂ ಪಕ್ಷಾತೀತವಾಗಿ ಪುನೀತ್​​ ಪರ ನಿಂತ ರಾಜಕೀಯ ನಾಯಕರ ನಡೆಗೆ ಶ್ಲಾಘನೆಯೂ ವ್ಯಕ್ತವಾಗಿದೆ.

ಇದನ್ನೂ ಓದಿ:ಕನ್ನಡ ಸಿನಿರಂಗದಲ್ಲಿ ಯಾರೂ ಮಾಡದ ದಾಖಲೆ ಅಪ್ಪು ಮಾಡಿದ್ರು.. ಪುನೀತ್​ ಸಿನಿಮಾಗೆ ಬರ್ತಿತ್ತು ಜನ ಸಾಗರ

ಒಟ್ನಲ್ಲಿ ರಾಜಕೀಯ ಸನಿಹಕ್ಕೂ ಹೋಗದ ಅಪ್ಪುಗಾಗಿ ರಾಜಕೀಯ ನೇತಾರರು ಒಂದಾಗಿದ್ದಾರೆ. ಅಪ್ಪುವಿಗೆ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಒಕ್ಕೊರಲ ಧ್ವನಿ ಎತ್ತಿದ್ದಾರೆ. ದೊಡ್ಮನೆಯ ಶಕ್ತಿ ಅಂದ್ರೆ ಇದೇ ಅಲ್ವಾ.?

ವಿಶೇಷ ವರದಿ: ವಿರೇಂದ್ರ ಉಪ್ಪುಂದ, ಪೊಲಿಟಿಕಲ್ ಬ್ಯೂರೋ

News First Live Kannada


Leave a Reply

Your email address will not be published. Required fields are marked *