ಮುಂಬೈ: ಕೊರೊನಾ ಸಂಕಷ್ಟದಲ್ಲಿ ಬಾಲಿವುಡ್ ತಾರೆಯರೂ ಸಹಾಯ ಹಸ್ತ ಚಾಚುತ್ತಿದ್ದು, ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಮುಂಚೂಣಿಯಲ್ಲಿ ಬರೋ ಹೆಸರು ಸೋನು ಸೂದ್. 2020ರಿಂದಲೂ ಕೊರೊನಾ ವಾರಿಯರ್ ಆಗಿ ಸೋನು ಸೋದ್ ಕೆಲಸ ಮಾಡ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಸೋನು ಸೂದ್ ಸಹಾಯ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯನ್ನ ತಲುಪಿತ್ತು. ಇದೀಗ ಮತ್ತಿಬ್ರು ಸ್ಟಾರ್ ಗ ಳು ಕರ್ನಾಟಕದ ನೆರವಿಗೆ ನಿಂತಿದ್ದಾರೆ.

ಖ್ಯಾತ ನಟಿ ಭೂಮಿ ಪಡ್ನೇಕರ್ ಮತ್ತು ಹಾಸ್ಯ ನಟ ಕಪಿಲ್ ಶರ್ಮಾ ಕರ್ನಾಟಕಕ್ಕೆ ವೈದ್ಯಕೀಯ ಸಹಾಯ ನೀಡ್ತಿದ್ದಾರೆ. “ಮಿಷನ್ ಜಿಂದಗಿ-ಚೇಂಜ್ ವಿದಿನ್” ಅಭಿಯಾನದ ಮೂಲಕ ಇಬ್ಬರು ಜೊತೆಯಾಗಿ ಸಹಾಯಕ್ಕೆ ಮುಂದಾಗಿದ್ದಾರೆ.

ಈಗಾಗಲೇ ಇಬ್ಬರು ಸ್ಟಾರ್ ಗಳು ನೀಡಿದ ಆಕ್ಸಿ ಬಸ್‍ಗಳು ಕರ್ನಾಟಕ ತಲುಪಿವೆ. ಹೊಸಕೋಟೆಯ ಕೋವಿಡ್ ಆಸ್ಪತ್ರೆ ಎದುರು ಆಕ್ಸಿಜನ್ ಸಂಚಾರಿ ಬಸ್ ಗಳು ಸೇವೆಗೆ ಸಜ್ಜಾಗಿ ನಿಂತಿವೆ. ಕೋವಿಡ್ ಆಸ್ಪತ್ರೆಗಳು ತುರ್ತು ಬಳಕೆಗೆ ಈ ಬಸ್‍ಗಳನ್ನ ಬಳಸಬಹುದಾಗಿದೆ.

ಕೊರೊನಾ ಎರಡನೇ ಅಲೆ ಸಣ್ಣ ಸಣ್ಣ ಗ್ರಾಮಗಳನ್ನ ಪ್ರವೇಶಿಸಿದೆ. ನೆರವು ಕೇವಲ ನಗರಗಳಿಗೆ ಸೀಮಿತ ಆಗಬಾರದು. ಗ್ರಾಮೀಣ ಭಾರತದತ್ತ ನಮ್ಮ ಗಮನ ಕೇಂದ್ರಿಕರಿಸಿದ್ದೇವೆ. ಕರ್ನಾಟಕದ ಕೆಲ ಜಿಲ್ಲೆಗಳಿಂದಲೇ ನೆರವು ಅಭಿಯಾನ ಆರಂಭವಾಗಲಿದೆ ಎಂದು ಭೂಮಿ ಪಡ್ನೇಕರ್ ಹೇಳಿದ್ದಾರೆ.

ಆಸ್ಪತ್ರೆಗಳ ಮುಂದೆ ಆಕ್ಸಿಜನ್ ಸಾಂದ್ರಕ ಅಳವಡಿಸಿರೋ ಬಸ್ ನಿಲ್ಲಿಸಲಾಗಿದೆ. ರೋಗಿಗಳು ಆಸ್ಪತ್ರೆ ಎದುರು ಬೆಡ್‍ಗಾಗಿ ಕಾಯುವಾಗ ಈ ಬಸ್ ನಲ್ಲಿ ಆಕ್ಸಿಜನ್ ಒದಗಿಸಲಾಗುತ್ತೆ. ಹಾಗಾಗಿ ಕೋವಿಡ್ ಆಸ್ಪತ್ರೆ ಮುಂದೆ ತುರ್ತು ಬಳಕೆಗೆ ಬಸ್‍ಗಳನ್ನ ಮೀಸಲಿರಿಸಲಾಗಿದೆ. ಇಷ್ಟು ಮಾತ್ರ ಅಲ್ಲದೇ ಭೂಮಿ ಪಡ್ನೇಕರ್ ತಮ್ಮದೇ ತಂಡದ ಜೊತೆ ಕೊರೊನಾ ಸಂಕಷ್ಟದಲ್ಲಿ ಸಿಲುಕಿರೋರ ನೆರವಿಗೂ ನಿಂತಿದ್ದಾರೆ.

The post ಕರ್ನಾಟಕಕ್ಕೆ ಆಕ್ಸಿಜನ್ ಸಂಚಾರಿ ಬಸ್ ನೀಡಿದ ಬಿಟೌನ್ ಸ್ಟಾರ್ appeared first on Public TV.

Source: publictv.in

Source link