ಕರ್ನಾಟಕಕ್ಕೆ ಒಬ್ಬ ಸ್ಟ್ರಾಂಗ್‌ ಗೃಹ ಸಚಿವರು ಬೇಕಾಗಿದ್ದಾರೆಂದು ಜಾಹೀರಾತು ನೀಡಲಿ; ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ | Lets Advertise that Karnataka needs a Strong Home Minister; says Basanagowda Patil Yatnal


ಕರ್ನಾಟಕಕ್ಕೆ ಒಬ್ಬ ಸ್ಟ್ರಾಂಗ್‌ ಗೃಹ ಸಚಿವರು ಬೇಕಾಗಿದ್ದಾರೆಂದು ಜಾಹೀರಾತು ನೀಡಲಿ; ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ವಿಜಯಪುರ: ಎಲ್ಲೂ ಗಲಾಟೆ ಆಗ್ತಿಲ್ಲ, ರಾಜ್ಯದಲ್ಲಿ ಮಾತ್ರ ಗಲಾಟೆ ಆಗ್ತಿದೆ. ಎಲ್ಲೆಲ್ಲಿ ವೀಕ್ ಇದೆಯೋ ಅಲ್ಲಲ್ಲಿ ಗಲಾಟೆಯಾಗುತ್ತಿದೆ. ಹೀಗಾಗಿ ರಾಜ್ಯಕ್ಕೆ ಸ್ಟ್ರಾಂಗ್‌ ಗೃಹ ಸಚಿವರು (Strong Home Minister) ಬೇಕಾಗಿದ್ದಾರೆ ಎಂದು ಜಾಹೀರಾತು ನೀಡಲಿ ಎಂದು ಜಿಲ್ಲೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ. ಹುಬ್ಬಳ್ಳಿ‌ ಗಲಾಟೆ ಪ್ರಕರಣ ಕುರಿತು ಶಾಸಕ ಪ್ರತಿಕ್ರಿಯೆ ನೀಡಿದ್ದು, ಗಲಾಟೆಗೆ ಸಂಬಂಧ ಮನೆ ಮನೆಯ ಸರ್ಚ್ ಆಪರೇಷನ್ ಆಗಬೇಕು. ಗಲಭೆಯಲ್ಲಿ ಕೆಲವೊಂದು ಶಕ್ತಿಗಳು ಕೆಲಸ ಮಾಡುತ್ತಿವೆ. ಮೆರವಣಿಗೆ ಹೋಗುವ ಮೊದಲು ಮನೆಯ, ಅಂಗಡಿಯ ಮೇಲೆ ಸರ್ಚ್ ಮಾಡಬೇಕು. ಯಾರ ಮನೆಯಲ್ಲಿ ತಲ್ವಾರ್, ಜಂಬೆ ಇವೆ ಎಂಬುದರ ಕುರಿತು ಸರ್ಚ್ ಮಾಡಬೇಕು.

ಗೃಹ ಸಚಿವ ವಿರುದ್ಧ ಯತ್ನಾಳ ಅಸಮಾಧಾನ ವ್ಯಕ್ತಪಡಿಸಿದ್ದು, ಗೃಹ ಸಚಿವರು ಪರಿಶೀಲನೆ ಕೆಲಸ ಕೈ ಬಿಡಬೇಕು. ಇನ್ಮೇಲೆ ಓನ್ಲಿ ಆ್ಯಕ್ಷನ್ ಆಗಬೇಕು ಅಷ್ಟೇ. ಬರೀ ಕಥೆ ಹೇಳುವ ಕೆಲಸ ಆಗಬಾರದು. ಬಿಜೆಪಿ ಅಧಿಕಾರ ಇದೆ, ನೀವೇನು ಮಾಡುತ್ತೀರಾ ಎಂದು ಜನತೆ ಕೇಳುತ್ತಾರೆ. ಕಾಂಗ್ರೆಸ್​ನವರು ಮಾಡಿದ್ದರೆ ಜೈಲ್ ಒಳಗೆ ಹಾಕಿ. ಡಿಜೆ ಹಳ್ಳಿಯಲ್ಲಿ ಕೇಸ್‌ನಲ್ಲಿ ಶಾಸಕ ಜಮೀರ ಅಹ್ಮದ್ ಮೇಲೆ ಆ್ಯಕ್ಷನ್ ಆಗಬೇಕಿತ್ತು. ಒಳಗೆ ಎಲ್ಲವೂ ಹೊಂದಾಣಿಕೆ ಇದೆ ಎಂದು ಸ್ವಪಕ್ಷೀಯರ ವಿರುದ್ಧ ಕಿಡಿ ಕಾರಿದರು. ಮುಗ್ಧ ಹಿಂದುಗಳು ಸಾಯುತ್ತಿದ್ದಾರೆ. ಕರ್ನಾಟಕ ಹಿತದೃಷ್ಟಿಯಿಂದ ಆ್ಯಕ್ಷನ್ ಆಗಬೇಕೆಂದು ಯತ್ನಾಳ್ ಒತ್ತಾಯಿಸಿದರು.

ಗೃಹ ಸಚಿವ ಆರಗ ಜ್ನಾನೇಂದ್ರಗೆ ಇನ್ನೂ ತಾನು ಗೃಹ ಮಂತ್ರಿ ಅಂತಾನೆ ಗೊತ್ತಿಲ್ಲ. ಬೆಳಿಗ್ಗೆ ಒಂದು ಹೇಳ್ತಾರೆ ಸಂಜೆ ಇನ್ನೊಂದು ಹೇಳ್ತಾರೆ ಎಂದು ಚಿಕ್ಕಬಳ್ಳಾಪುರದಲ್ಲಿ ಜೆ.ಡಿ.ಎಸ್ ನೂತನ ರಾಜ್ಯಾದ್ಯಕ್ಷ  ಸಿ.ಎಂ.ಇಬ್ರಾಹಿಂ ಹೇಳಿಕೆ ನೀಡಿದ್ದಾರೆ. ಬಸವರಾಜ್ ಬೊಮ್ಮಾಯಿಗೆ ಅನುಭವ ಇದೆ. ಆದ್ರೆ ಬೊಮ್ಮಾಯಿಗೆ ಕಷ್ಟವಾಗಿದೆ. ಬಿಜೆಪಿಯಲ್ಲಿ ಎತ್ತು ಏರಿಗೆ ಕೋನ ಕೆರೆಗೆ ಎಳೆಯುತ್ತಿದೆ ಎಂದು ಹೇಳಿದರು. ಚುನಾವಣೆಯಲ್ಲಿ ಜಾತಿಗಳು ನಡೆಯುತ್ತೆ ಕೋಮುಗಲಭೆಗಳು ನಡೆಯಲ್ಲ. ಈಗ ನಾನು ಒಂದು ಪಕ್ಷದ ಅಧ್ಯಕ್ಷನಾಗಿದ್ದೇನೆ. ಯಾವುದನ್ನು ಹೇಳಬೇಕು ಅದನ್ನು ಮಾತ್ರ ಹೇಳಬೇಕು. ಚುನಾವಣೆಯಲ್ಲಿ ಹಿಂದೂ ಮುಸ್ಲಿಂ ಅನ್ನೊ ವಿಚಾರ ಬರಲ್ಲ. ನಮ್ಮದು ಸರ್ವಜನಾಂಗದ ಶಾಂತಿಯ ತೋಟ ಎಂದು ಹೇಳಿಕೆ ನೀಡಿದ್ದಾರೆ.

TV9 Kannada


Leave a Reply

Your email address will not be published. Required fields are marked *