ಬೆಂಗಳೂರು: ರಾಜ್ಯದಲ್ಲಿ ಮಾರಕ ಕೊರೊನಾ ಆರ್ಭಟ ಜೋರಾಗಿದೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಬರೋಬ್ಬರಿ 40,499 ಕೇಸ್ ಕಾಣಿಸಿಕೊಂಡಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಟ್ವೀಟ್ ಮಾಡಿದ್ದಾರೆ. ಅಲ್ಲದೇ 21 ಮಂದಿ ಕೋವಿಡ್ಗೆ ಬಲಿಯಾಗಿರೋದಾಗಿ ತಿಳಿಸಿದ್ದಾರೆ.
Daily new cases hover around 40k today in Karnataka:
◾New cases in State: 40,499
◾New cases in B’lore: 24,135
◾Positivity rate in State: 18.80%
◾Discharges: 23,209
◾Active cases State: 2,67,650 (B’lore- 184k)
◾Deaths:21 (B’lore- 05)
◾Tests: 2,15,312#COVID19 #Omicron— Dr Sudhakar K (@mla_sudhakar) January 19, 2022
ಇನ್ನು, ಕೇವಲ ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ 24,135 ಕೇಸ್ ವರದಿಯಾಗಿದೆ. ಸದ್ಯ ರಾಜ್ಯದ ಪಾಸಿಟಿವಿಟಿ ರೇಟ್ 18.80% ಆಗಿದೆ. ಇಂದು 23,209 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಪ್ರಸ್ತುತ 2,67,650 ಆ್ಯಕ್ಟೀವ್ ಕೇಸ್ಗಳು ಇವೆ. ಇಂದು 2,15,312 ಮಂದಿಗೆ ಕೊರೋನಾ ಟೆಸ್ಟ್ ಮಾಡಿಸಲಾಗಿದೆ.