ಕರ್ನಾಟಕದಲ್ಲಿ ರೇಷನ್ ಕಾರ್ಡ್​ ಇಲ್ಲದೇ 4 ವರ್ಷಗಳಿಂದ ಬರೋಬ್ಬರಿ 4,05,216 ಜನರ ಪರದಾಟ | Karnataka Ration Card problem 405216 people without a ration card from past 4 years

ಕರ್ನಾಟಕದಲ್ಲಿ ರೇಷನ್ ಕಾರ್ಡ್​ ಇಲ್ಲದೇ 4 ವರ್ಷಗಳಿಂದ ಬರೋಬ್ಬರಿ 4,05,216 ಜನರ ಪರದಾಟ

ಸಾಂಕೇತಿಕ ಚಿತ್ರ

ಬೆಂಗಳೂರು: ಕೊರೊನಾದಿಂದ ಅತಂತ್ರವಾಗಿರುವ ಈ ವೇಳೆ ಜನರ ಸಂಕಷ್ಟಗಳಿಗೆ ನೆರವಾಗಬೇಕಿದ್ದ ಆಹಾರ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಜನರಿಗೆ ಸಿಗಬೇಕಿದ್ದ ಪಡಿತರ ಚೀಟಿಗಳು ಆಹಾರ ಇಲಾಖೆಯಲ್ಲಿಯೇ ಕೊಳೆಯುತ್ತ ಬಿದ್ದಿವೆ. 4 ವರ್ಷಗಳಿಂದ ರೇಷನ್ ಕಾರ್ಡ್​ ಇಲ್ಲದೇ ಬರೋಬ್ಬರಿ 4,05,216 ಜನರು ಪರದಾಡುತ್ತಿದ್ದಾರೆ. ಹೊಸ ಬಿಪಿಎಲ್ ಕಾರ್ಡ್​ಗಳನ್ನು ನೀಡಲು 2017 ರಿಂದ 2021ರವರೆಗೆ ರಾಜ್ಯದಾದ್ಯಂತ 39,02, 745 ರಷ್ಟು ಜನರು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 34,97, 529 ರಷ್ಟು ಅರ್ಜಿಗಳ ವಿಲೇವಾರಿಯಾಗಿದ್ದರೆ 4,05, 216 ಅರ್ಜಿಗಳು ಬಾಕಿ ಉಳಿದಿವೆಯಂತೆ. ಹೀಗಾಗಿ ಜನರು ಸರ್ಕಾರದಿಂದ ಸಿಗುವ ಮೂಲ ಸೌಕರ್ಯಗಳನ್ನ ಪಡೆದುಕೊಳ್ಳಲು ಸಾಧ್ಯವಾಗದೆ ಪರದಾಡುವ ಪರಿಸ್ಥಿತಿ ಎದುರಾಗಿದೆ.

ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕಾರ್ಡ್​ಗಳು ಬಾಕಿ ಉಳಿಯಲು ಕಾರಣವೇನು ಅಂತ ಆಹಾರ ಇಲಾಖೆಯ ಆಯುಕ್ತೆ ಶಮ್ಲಾ ಇಕ್ಬಾಲ್, ಕೊರೊನಾದಿಂದಾಗಿ ಕಾರ್ಡ್​ಗಳು ಬಾಕಿ ಉಳಿದಿವೆ. ಸದ್ಯ ಬಿಪಿಎಲ್ ಕಾರ್ಡ್ ಪಡೆದುಕೊಳ್ಳುವ ಸರ್ಕಾರ ಹಲವು ನಿಯಾಮವಳಿ ಬಂದಿವೆ. ಅದರಲ್ಲಿ ಮನೆಯ ಆದಾಯ, ದಾಖಲೆಗಳನ್ನು ಸಂಪೂರ್ಣವಾಗಿ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ಸದ್ಯದಲ್ಲೆ ರೇಷನ್ ಕಾರ್ಡ್​ಗಳು ಜನರಿಗೆ ಸಿಗುವಂತೆ ವ್ಯವಸ್ಥೆ ಕಲ್ಪಿಸಿಕೊಡಲು ಕ್ರಮತೆಗೆದುಕೊಳ್ಳುತ್ತೇವೆ. ಸದ್ಯ ನಗರದಲ್ಲಿ 80 ಸಾವಿರದಷ್ಟು ಕಾರ್ಡ್​ಗಳು ಬಾಕಿ ಉಳಿದಿವೆ ಎಂದರು.

ಸಾಮಾನ್ಯವಾಗಿ ರೇಷನ್ ಪಡೆದುಕೊಳ್ಳಲು ಜಿಲ್ಲೆಗಳಲ್ಲಿ ಗ್ರಾಮಪಂಚಾತ್​ಗಳಲ್ಲಿ ಅರ್ಜಿ ಹಾಕಬೇಕು. ನಗರ ಪ್ರದೇಶದಲ್ಲಿ ಬೆಂಗಳೂರು ಒನ್ ಆಫೀಸ್ ಗಳಲ್ಲಿ ಅರ್ಜಿಹಾಕಬೇಕು. ಅರ್ಜಿಗೆ ಲಗತ್ತಿಸಿರುವ ದಾಖಲೆಗಳಯ ಎಲ್ಲ ಸರಿ ಇದ್ದದ್ದೇ ಆದಲ್ಲಿ 15 – 20 ದಿನಗಳಲ್ಲಿ ರೇಷನ್ ಕಾರ್ಡ್ ಜನರ ಕೈ ಸೇರುತ್ತವೆ. ಆದರೆ ಆಹಾರ ಇಲಾಖೆ ನಾಲ್ಕು ವರ್ಷಗಳಿಂದ ರೇಷನ್ ಕಾರ್ಡ್​ಗಳನ್ನು ನೀಡದೆ ಬಾಕಿ ಉಳಿಸಿಕೊಂಡಿರುವುದಿಂದ ಸರ್ಕಾರದಿಂದ ಸಿಗುವ ಆಸ್ಪತ್ರೆ ಸೌಕರ್ಯ, ಪಡಿತರ ಸೌಕರ್ಯ, ಮನೆ ಸೌಕರ್ಯ ಸೇರಿದಂತೆ ಹಲವು ಸೌಲಭ್ಯಗಳಿಂದ ಜನರು ವಂಚಿತರಾಗುತ್ತಿದ್ದಾರೆ.

ವರದಿ: ಪೂರ್ಣಿಮಾ ನಾಗರಾಜ್
ಟಿವಿ 9 ಬೆಂಗಳೂರು

ಇದನ್ನೂ ಓದಿ: 

ಬೆಂಗಳೂರಲ್ಲಿ ಎಲೆಕ್ಟ್ರಿಕ್ ಬಸ್; ಬಿಎಂಟಿಸಿ ಖಾಸಗಿಕರಣದ ಮೊದಲ ಹೆಜ್ಜೆ? ಕಾರ್ಮಿಕರ ಆತಂಕ

17 ವರ್ಷದಿಂದ ಕಾಡಲ್ಲೇ ವಾಸ, ಕಾರೇ ಮನೆ! ನಾಗರಿಕ ಸಮಾಜವನ್ನು ಧಿಕ್ಕರಿಸಿ ಬದುಕುತ್ತಿರುವ ಸುಳ್ಯದ ವ್ಯಕ್ತಿಯ ಕಥೆಯಿದು

TV9 Kannada

Leave a comment

Your email address will not be published. Required fields are marked *