ಕರ್ನಾಟಕದಲ್ಲಿ 3 ಲಕ್ಷ ಅಕ್ರಮ ಬಾಂಗ್ಲಾ ವಲಸಿಗರು ಪತ್ತೆ; ಉಗ್ರ ತಾಲಿಬ್ ಹುಸೇನ್ ಬಂಧನದ ಬೆನ್ನಲ್ಲೇ ಐಎಸ್​ಡಿ ಅಲರ್ಟ್ | Over 3 lakh Bangla immigrants are Illegal residing in Karnataka


ನಕಲಿ ಆಧಾರ್ ಕಾರ್ಡ್ ಮಾಡುತ್ತಿದ್ದ ಗ್ಯಾಂಗ್​ನ ಬೆಂಗಳೂರಿನ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾಹಿದ್ ಕುರಿತು ಐಜಿಪಿ ಚಂದ್ರಶೇಖರ್ ಐಬಿಗೆ ಮಾಹಿತಿ ನೀಡಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಸುಮಾರು 3 ಲಕ್ಷ ಬಾಂಗ್ಲಾ ವಲಸಿಗರು (Bangla Immigrants) ಅಕ್ರಮವಾಗಿ ಇರುವುದು ಪತ್ತೆಯಾಗಿದ್ದು, ಬೆಂಗಳೂರು ನಗರ, ಹೊರವಲಯದಲ್ಲೇ ಸುಮಾರು 2 ಲಕ್ಷ ವಲಸಿಗರು ಇದ್ದಾರೆ ಎಂದು ಹೇಳಲಾಗುತ್ತಿದೆ. ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ಪ್ರಜೆಗಳ ಮಾಹಿತಿಯನ್ನು ಐಎಸ್​ಡಿ (ISD) ಸಂಗ್ರಹಿಸಿ ಐಬಿಗೆ ಕೊಟ್ಟಿದೆ. ವಲಸಿಗರು ಬೇರೆ ಬೇರೆ ರಾಜ್ಯಗಳ ವಿಳಾಸದಲ್ಲಿ ಫೇಕ್ ಆಧಾರ್ ಕಾರ್ಡ್ ಪಡೆದು ನೆಲಲೆಸಿದ್ದಾರೆ. ಪ್ರತಿವರ್ಷ ಶೇಕಡಾ 10ರಷ್ಟು ಬಾಂಗ್ಲಾ ವಲಸಿಗರು ಹೆಚ್ಚುತ್ತಿದ್ದು,ಅತಿ ಹೆಚ್ಚು ಬಾಂಗ್ಲಾದವರು ನಗರದ ಹೊರ ವಲಯದಲ್ಲಿ ಚಿಂದಿ ಆಯೋ ಕೆಲಸದಲ್ಲಿ ಇದ್ದಾರೆ. ಸದ್ಯ ಉಗ್ರ ತಾಲಿಬ್ ಹುಸೇನ್ ಬಂಧನದ ಬೆನ್ನಲ್ಲೇ ಐಎಸ್​ಡಿ ಅಲರ್ಟ್ ಆಗಿದೆ.

ಇನ್ನು ನಕಲಿ ಆಧಾರ್ ಕಾರ್ಡ್ ಮಾಡುತ್ತಿದ್ದ ಗ್ಯಾಂಗ್​ನ ಬೆಂಗಳೂರಿನ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾಹಿದ್ ಕುರಿತು ಐಜಿಪಿ ಚಂದ್ರಶೇಖರ್ ಐಬಿಗೆ ಮಾಹಿತಿ ನೀಡಿದ್ದು, ಬಾಂಗ್ಲಾ ಪ್ರಜೆಗಳಿಗೆ ಇವರೇ ಆಧಾರ್ ಕಾರ್ಡ್ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಎರಡು ದಿನದಲ್ಲಿ ಐಬಿ ಅಧಿಕಾರಿಗಳು ಶಾಹಿದ್ನ ವಿಚಾರಣೆ ಮಾಡುತ್ತಾರೆ.

TV9 Kannada


Leave a Reply

Your email address will not be published.