ಕರ್ನಾಟಕದಲ್ಲಿ 6 ಜೀನೋಮ್ ಲ್ಯಾಬ್ ಸ್ಥಾಪನೆ ಮಾಡಲು ನಿರ್ಧಾರ -ಸುಧಾಕರ್

ಕರ್ನಾಟಕದಲ್ಲಿ 6 ಜೀನೋಮ್ ಲ್ಯಾಬ್ ಸ್ಥಾಪನೆ ಮಾಡಲು ನಿರ್ಧಾರ -ಸುಧಾಕರ್

ಬೆಂಗಳೂರು: ರಾಜ್ಯದಲ್ಲೇ ಮೊದಲ ಬಾರಿಗೆ ಮೈಸೂರಿನಲ್ಲಿ ಕೊರೊನಾ ಡೆಲ್ಟಾ ಪ್ಲಸ್ ಸೋಂಕು ದೃಢಪಟ್ಟಿದೆ. ಆ ರೋಗಿಯನ್ನ ಐಸೋಲೇಟ್ ಮಾಡಲಾಗಿದೆ. ಆದರೆ ರೋಗಿಗೆ ಯಾವುದೇ ರೋಗ ಲಕ್ಷಣ ಇಲ್ಲ. ಆತನ ಪ್ರಾಥಮಿಕ ಮತ್ತು ದ್ವೀತಿಯ ಸಂಪರ್ಕದಲ್ಲಿ ಇರುವವರಿಗೆ ಸೋಂಕು ಹರಡಿಲ್ಲ. ಡೆಲ್ಟಾ ಪ್ಲಸ್ ಕೇಸ್ ಬಗ್ಗೆ ಸೂಕ್ಷ್ಮವಾಗಿ ಗಮನ ಹರಿಸುತ್ತಿದ್ದೇವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ತಿಳಿಸಿದ್ದಾರೆ.

ಇಂದು ನಗರದಲ್ಲಿ ಮಾತನಾಡಿದ ಸುಧಾಕರ್​, ಜಿನೋಮ್ ಲ್ಯಾಬ್​ಗಳನ್ನು ಸೆಟಪ್ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ 6 ಲ್ಯಾಬ್ ಮಾಡಲು ನಿರ್ಧಾರ ಮಾಡಿದ್ದೇವೆ. ನಿನ್ನೆ ಡಾ.ದೇವಿಶೆಟ್ಟಿ ತಂಡ ಪ್ರಾಥಮಿಕ ವರದಿ ಕೊಟ್ಟಿದ್ದಾರೆ. 45 ದಿನದ ಒಳಗೆ ಪಿಡಿಯಾಟ್ರಿಸಿಟಿ ಹಾಗೂ ಆರೋಗ್ಯ ಸೌಕರ್ಯಗಳ ಸಿದ್ಧತೆ ಮಾಡಿಕೊಳ್ಳುತ್ತೇವೆ. ಡೆಲ್ಟಾ ಪ್ಲಸ್ ಬಗ್ಗೆ ನಿರಂತರವಾಗಿ ಗಮನಹರಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕ ರಾಜ್ಯದಲ್ಲಿ 2 ಕೋಟಿ ಲಸಿಕೆ ಕೊಟ್ಟಿರುವ ಸಾಧನೆಯಾಗಿದೆ. ಇದಕ್ಕೆ ಕಾರಣರಾದ ಆರೋಗ್ಯ ಸಿಬ್ಬಂದಿಗೆ, ದಾದಿಯರಿಗೆ ಹಾಗೂ ಸಹಕರಿಸಿದ ಸಾರ್ವಜನಿಕರಿಗೆ ಧನ್ಯವಾದ. ಲಸಿಕಾ ಮೇಳದ ಚಾಲನೆ ದಿನವೇ 11 ಲಕ್ಷದ 20 ಸಾವಿರ ಡೋಸ್​ ವ್ಯಾಕ್ಸಿನ್​ ನೀಡಿದ್ದೇವೆ. ಮೋದಿ ಸರ್ಕಾರ ಉಚಿತವಾಗಿ ಸರಬರಾಜು ಮಾಡುತ್ತಿದೆ. ಇದೇ ರೀತಿ ಜನರು ಲಸಿಕೆ ಪಡೆದರೆ ಶಾಶ್ವತವಾಗಿ ಕೋವಿಡ್ ಗೆಲ್ಲಬಹುದು ಎಂದರು.

The post ಕರ್ನಾಟಕದಲ್ಲಿ 6 ಜೀನೋಮ್ ಲ್ಯಾಬ್ ಸ್ಥಾಪನೆ ಮಾಡಲು ನಿರ್ಧಾರ -ಸುಧಾಕರ್ appeared first on News First Kannada.

Source: newsfirstlive.com

Source link