ಬೆಂಗಳೂರು: ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಸೋಂಕಿತರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ಬಗ್ಗೆ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.

ಹೈಕೋರ್ಟ್​ನಿಂದ ಸ್ವಯಂಪ್ರೇರಿತ ಅರ್ಜಿ ವಿಚಾರಣೆ ನಡೆಸಿ.. ಘಟನೆ ಬಗ್ಗೆ ನ್ಯಾಯಾಂಗ ತನಿಖೆಗೆ ಹೈಕೋರ್ಟ್ ಸಲಹೆ ನೀಡಿದೆ.. ನಿವೃತ್ತ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆ ನಡೆಸುವ ಬಗ್ಗೆ ಹೈಕೋರ್ಟ್ ಸರಕಾರದ ನಿಲುವು ಕೇಳಿದೆ.

ಈ ವೇಳೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ತರಾಟೆ ತೆಗೆದುಕೊಂಡ ಹೈಕೋರ್ಟ್.. ಕರ್ನಾಟಕದ ಆಕ್ಸಿಜನ್ ಕೋಟಾ ಹೆಚ್ಚಿಸುತ್ತೀರೋ ಇಲ್ಲವೋ.? ಇನ್ನೂ ಎಷ್ಟು ಜನ ಸಾವನ್ನಪ್ಪಬೇಕು.? ನಿಮಗೆ ಜನ ಸಾವನ್ನಪ್ಪುದು ಬೇಕೇ…? ಸೋಂಕು ಕಡಿಮೆ ಇರುವ ರಾಜ್ಯಗಳಿಗೆ ಹೆಚ್ಚು ನೀಡಿದ್ದೀರಿ.?

ಈ ವೇಳೆ ಬೆಂಗಳೂರಿನಲ್ಲೂ 10 ಆಸ್ಪತ್ರೆಗಳಿಗೆ ಆಕ್ಸಿಜನ್ ಕೊರತೆಯಿದೆ.. ಈ ಬಗ್ಗೆ ಆಸ್ಪತ್ರೆಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಹೈಕೋರ್ಟ್​ಗೆ ವಕೀಲ ಕ್ಲಿಫ್ಟನ್ ರೊಜಾರಿಯೋ ಮಾಹಿತಿ ನೀಡಿದ್ದಾರೆ. ಈ ಮಾಹಿತಿಯನ್ನು ದಾಖಲಿಸಿಕೊಂಡ ಹೈಕೋರ್ಟ್ ಪೀಠ ಕೇಂದ್ರ ಸರ್ಕಾರಕ್ಕೆ ಬೆಳಗ್ಗೆ 10.30 ರೊಳಗೆ ಈ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ತಿಳಿಸಬೇಕು.. ಇಲ್ಲವಾದರೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಲಾಗುವುದು ಎಂದಿದ್ದಾರೆ.

ಸಿಜೆ ಎ.ಎಸ್.ಒಕಾ, ನ್ಯಾ.ಅರವಿಂದ್ ಕುಮಾರ್ ರವರಿದ್ದ ಪೀಠ ಈ ವಿಚಾರಣೆ ನಡೆಸಿದ್ದು..ಇದೇ ವೇಳೆ ಚಾಮರಾಜನಗರ ಘಟನೆ ಬಗ್ಗೆ ನ್ಯಾಯಾಂಗ ತನಿಖೆ ಅಗತ್ಯವಿದೆ.. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗಳ ತನಿಖೆ ಅಗತ್ಯವಿದೆ.. ಸರ್ಕಾರ ನೇಮಿಸಿರುವ ಅಧಿಕಾರಿ ನಾಳೆ ವರದಿ ನೀಡಲಿದ್ದಾರೆ. ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆ ಬಗ್ಗೆ ನಿಲುವು ತಿಳಿಸಬೇಕು ಎಂದಿದೆ.

ಇದಕ್ಕೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲು ಕಾಲಾವಕಾಶಬೇಕು.. ನಾಳೆ ಮಧ್ಯಾಹ್ನದವರೆಗೂ ಕಾಲಾವಕಾಶ ನೀಡಿ ಎಂದು ಕೇಂದ್ರದ ವಕೀಲರು ಮವಿ ಮಾಡಿಕೊಂಡಿದ್ದಾರೆ. ಮನವಿ ಪುರಸ್ಕರಿದ ಹೈಕೋರ್ಟ್​ ಕಾಲಾವಕಾಶ ನೀಡಿದೆ.

The post ಕರ್ನಾಟಕದ ಆಕ್ಸಿಜನ್ ಕೋಟಾ ಹೆಚ್ಚಿಸುತ್ತೀರೋ ಇಲ್ಲವೋ.?-ಕೇಂದ್ರಕ್ಕೆ ಹೈಕೋರ್ಟ್ ತರಾಟೆ appeared first on News First Kannada.

Source: newsfirstlive.com

Source link