ಬೆಂಗಳೂರು: ಇಸ್ರೋದಿಂದ ಆಕ್ಸಿಜನ್ ಪಡೆಯುವಂತೆ ನಿರ್ದೇಶನ ಕೋರಿ ಅರ್ಜಿ ಸಲ್ಲಿಸಿದ್ದ ಕಾಂಗ್ರೆಸ್ ನಾಯಕ ಹೆಚ್​.ಕೆ. ಪಾಟೀಲ್​ಗೆ ಹೈಕೋರ್ಟ್​​ನಲ್ಲಿ ಮುಖಭಂಗವಾಗಿದೆ. ಹೆಚ್​.ಕೆ. ಪಾಟೀಲ್​ಗೆ ಸಿಜೆ ತರಾಟೆ ತೆಗೆದುಕೊಂಡಿದ್ದಾರೆ.

ನೀವು ಶಾಸಕರಾಗಿ ಸಮಸ್ಯೆ ಸರಿಪಡಿಸಲು ಏನು ಮಾಡಿದ್ದೀರಿ..? ಬೇರೆಯವರಿಗೆ ಹೇಳುವ ಮುನ್ನ ನಿಮ್ಮ ಕೊಡುಗೆ ಏನು.? ಕರ್ನಾಟಕದ ಜನರಿಗೆ ಏನು ಮಾಡಿದ್ದೀರಾ.? ಒಂದಾದರೂ ಆಕ್ಸಿಜನ್ ಪ್ಲಾಂಟ್ ಹಾಕಿಸಿದ್ದೀರಾ.? ಸದನದಲ್ಲಿ ಪ್ರಶ್ನಿಸದೇ ಕೋರ್ಟ್ ಗೆ ಬಂದಿದ್ದೀರಾ.! ಎಂಎಲ್​ಎಯಾಗಿ ಜನರಿಗೆ ಏನೂ ಮಾಡುವುದಿಲ್ಲವೇ.? ಪ್ರಭಾವಿ ಹುದ್ದೆಯಲ್ಲಿದ್ದು ಕೆಲಸ ಮಾಡಬಹುದಿತ್ತಲ್ಲಾ.. ನಿಮ್ಮ ಕ್ಷೇತ್ರದಲ್ಲಿ ಎಷ್ಟು ಬೆಡ್ ಆರಂಭಿಸಿದ್ದೀರಾ.? ಎಂದು ಹೆಚ್.ಕೆ. ಪಾಟೀಲ್​ಗೆ ಸಿಜೆ ಎ.ಎಸ್. ಒಕಾ ಪ್ರಶ್ನೆಗಳ ಸುರಿಮಳೆಯನ್ನೇ ಸುರಿದಿದ್ದಾರೆ.

ಇವೆಲ್ಲಾ ಪಬ್ಲಿಸಿಟಿಗಾಗಿ ಹಾಕಿರುವ ಕೇಸ್​ಗಳು.. ಪಿಐಎಲ್ ಹಿಂಪಡೆಯದಿದ್ದರೆ ದಂಡ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಕೆನೀಡಿದ ಹೈಕೋರ್ಟ್ ವಿಚಾರಣೆಯನ್ನ ಮುಂದೂಡಿದೆ.

The post ಕರ್ನಾಟಕದ ಜನರಿಗೆ ಏನು ಮಾಡಿದ್ದೀರಾ.? ಹೆಚ್​.ಕೆ. ಪಾಟೀಲ್​ಗೆ ಹೈಕೋರ್ಟ್​​ನಲ್ಲಿ ಮುಖಭಂಗ appeared first on News First Kannada.

Source: newsfirstlive.com

Source link