ಕರ್ನಾಟಕದ ಯಾವ ನಗರದಲ್ಲಿ ಎಷ್ಟಿದೆ ‘ಕೆಜಿಎಫ್ 2’ ಟಿಕೆಟ್ ದರ? ಇಲ್ಲಿದೆ ವಿವರ | Yash Starrer KGF Chapter 2 Different cities Ticket Price of Karnataka


ಕರ್ನಾಟಕದ ಯಾವ ನಗರದಲ್ಲಿ ಎಷ್ಟಿದೆ ‘ಕೆಜಿಎಫ್ 2’ ಟಿಕೆಟ್ ದರ? ಇಲ್ಲಿದೆ ವಿವರ

ಯಶ್

‘ಕೆಜಿಎಫ್ ಚಾಪ್ಟರ್ 2’ ಸಿನಿಮಾ (KGF Chapter 2) ಅಡ್ವಾನ್ಸ್ ಬುಕಿಂಗ್​ನಲ್ಲಿ ಧೂಳೆಬ್ಬಿಸುತ್ತಿದೆ. ಸಿನಿಮಾ ರಿಲೀಸ್ ಆದ ಕೆಲವೇ ದಿನಗಳಲ್ಲಿ ಈ ಸಿನಿಮಾ 100 ಕೋಟಿ ಬಾಚಿಕೊಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲ. ಬಹುನಿರೀಕ್ಷಿತ ಸಿನಿಮಾ ಎಂಬ ಕಾರಣಕ್ಕೆ ಕರ್ನಾಟಕದಲ್ಲಿ (Karnataka) ಈ ಚಿತ್ರದ ಟಿಕೆಟ್ ದರವನ್ನು ಮಿತಿ ಮೀರಿ ಹೆಚ್ಚಿಸಲಾಗಿದೆ. 250 ರೂಪಾಯಿಯಿಂದ, 2000 ರೂಪಾಯಿ ವರೆಗೆ ಟಿಕೆಟ್ ದರ (KGF 2 Ticket Price)ನಿಗದಿ ಮಾಡಲಾಗಿದೆ. ಟಿಕೆಟ್ ಬೆಲೆ ಇಷ್ಟೊಂದು ತುಟ್ಟಿ ಇದ್ದರೂ ಫ್ಯಾನ್ಸ್​ ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಹಾಗಾದರೆ, ಯಾವ ನಗರದಲ್ಲಿ ಯಾವ ದರ ನಿಗದಿ ಆಗಿದೆ ಎಂಬ ಪ್ರಶ್ನೆಗೆ ಈ ಸ್ಟೋರಿಯಲ್ಲಿದೆ ಉತ್ತರ.

ಕೊವಿಡ್ ಕಾಣಿಸಿಕೊಂಡ ನಂತರದಲ್ಲಿ ಚಿತ್ರರಂಗಕ್ಕೆ ಸಾಕಷ್ಟು ಅನಿಶ್ಚಿತತೆ ಉಂಟಾಗಿತ್ತು. ಸತತ ಮೂರು ಅಲೆಗಳಿಂದ ಸಿನಿಮಾ ಇಂಡಸ್ಟ್ರಿ ನಲುಗಿ ಹೋಗಿತ್ತು. ಹಲವು ದೊಡ್ಡ ಬಜೆಟ್​ ಚಿತ್ರಗಳ ರಿಲೀಸ್ ದಿನಾಂಕಗಳು ಮುಂದೂಡಲ್ಪಟ್ಟಿದ್ದವು. ‘ಆರ್​ಆರ್​ಆರ್​’ ಸಿನಿಮಾ ತೆರೆಕಂಡ ಸಂದರ್ಭದಲ್ಲಿ ಟಿಕೆಟ್ ದರವನ್ನು ಹೆಚ್ಚಿಸಲಾಗಿತ್ತು. ಅದೇ ಟ್ರೆಂಡ್ ಈಗ ಮುಂದುವರಿದಿದೆ. ‘ಕೆಜಿಎಫ್​ 2’ ಸಿನಿಮಾದ ಬಹುತೇಕ ಶೋಗಳ ಬೆಲೆ ಗಗನಕ್ಕೆ ಏರಿದೆ.

ಬೆಂಗಳೂರು

ಸ್ಯಾಂಡಲ್​ವುಡ್​ನ ಪ್ರಮುಖ ವಹಿವಾಟು ಕೇಂದ್ರ ಬೆಂಗಳೂರು. ದೊಡ್ಡ ಬಜೆಟ್ ಚಿತ್ರಗಳು ಇಲ್ಲಿ ಒಳ್ಳೆಯ ರೀತಿಯಲ್ಲೇ ಕಲೆಕ್ಷನ್ ಮಾಡುತ್ತವೆ. ‘ಕೆಜಿಎಫ್​ 2’ ಬೆಂಗಳೂರಿನಲ್ಲಿ ಮೊದಲ ದಿನ 500ಕ್ಕೂ ಅಧಿಕ ಶೋಗಳು ಪ್ರದರ್ಶನ ಕಾಣುವ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿ ಬಹುತೇಕ ಶೋಗಳ ಬೆಲೆ 300-400 ರೂಪಾಯಿಯ ಆಸುಪಾಸಿನಲ್ಲಿದೆ. ಪ್ರಮುಖ ಚಿತ್ರಮಂದಿರ ಊರ್ವಶಿಯಲ್ಲಿ ಮುಂಜಾನೆ ಶೋಗಳ ಬೆಲೆ 600-700-800 ರೂಪಾಯಿ ನಿಗದಿ ಮಾಡಲಾಗಿದೆ. ಸ್ವಾಗತ್ ಶಂಕರ್​ನಾಗ್ ಚಿತ್ರಮಂದಿರದಲ್ಲಿ ಟಿಕೆಟ್ ಬೆಲೆ 2000-1200-800 ರೂಪಾಯಿ ನಿಗದಿ ಮಾಡಲಾಗಿದೆ.

ಮೈಸೂರು

ಸದ್ಯ, ಮೈಸೂರಿನ ಐದು ಕಡೆಗಳಲ್ಲಿ ‘ಕೆಜಿಎಫ್​ 2’ ಚಿತ್ರವನ್ನು ಪ್ರದರ್ಶಿಸಲು ಸಿದ್ಧತೆ ಮಾಡಲಾಗಿದೆ. ಈ ನಗರದಲ್ಲೂ ಟಿಕೆಟ್ ದರ ಹೆಚ್ಚಿಸಲಾಗಿದೆ. ವಿಷನ್ ಸಿನಿಮಾಸ್​ನಲ್ಲಿ ಟಿಕೆಟ್ ಬೆಲೆ 350 ರೂಪಾಯಿ ನಿಗದಿ ಮಾಡಲಾಗಿದೆ. ಸಂಗಮ್​ ಚಿತ್ರಮಂದಿರದಲ್ಲಿ ಟಿಕೆಟ್ ದರ 200 ರೂಪಾಯಿ ಇದೆ.

ಮಂಗಳೂರು:

ಕರಾವಳಿ ನಾಡು ಮಂಗಳೂರಿನಲ್ಲಿ ‘ಕೆಜೆಎಫ್​ 2’ ಹವಾ ಜೋರಾಗಿದೆ. ಸಿನಿಮಾ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾದಿದ್ದಾರೆ. ಈ ಭಾಗದಲ್ಲಿಯೂ ಟಿಕೆಟ್ ದರ 350 ರೂಪಾಯಿ ಇದೆ.

ಉಳಿದ ನಗರಗಳ ಕಥೆ ಏನು?:

ಹುಬ್ಬಳ್ಳಿಯಲ್ಲಿ ‘ಕೆಜಿಎಫ್ 2’ ಟಿಕೆಟ್ ಬೆಲೆ 300ರ ಆಸುಪಾಸಿನಲ್ಲಿ ಇದೆ. ಸಣ್ಣಪುಟ್ಟ ನಗರಗಳಲ್ಲಿ ಇನ್ನೂ ಟಿಕೆಟ್ ಬುಕಿಂಗ್ ಓಪನ್ ಆಗಿಲ್ಲ. ಈ ಬಗ್ಗೆ ಶೀಘ್ರದಲ್ಲೇ ಅಪ್​ಡೇಟ್ ಸಿಗುವ ಸಾಧ್ಯತೆ ಇದೆ.

TV9 Kannada


Leave a Reply

Your email address will not be published.