
ನೀರು ಪಾಲಾಗಿರುವ ಕೋಸು
ಒಂದು ಲಕ್ಷಕ್ಕೂ ಹೆಚ್ಚು ಹಣ ವೆಚ್ಚಾ ಮಾಡಿ ದಾವಣಗೆರೆ ತಾಲೂಕಿನ ಅಣಜಿ ಗ್ರಾಮದ ಸಂತೋಷ್ ಎಂಬ ರೈತ ಕೋಸು ಬೆಳೆದಿದ್ದರು. ಆದರೆ ಇದೀಗ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಬೆಂಗಳೂರು: ರಾಜ್ಯದ ಹಲವೆಡೆ ಧಾರಕಾರ ಮಳೆ (Heavy Rain) ಮುಂದುವರಿದಿದೆ. ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ಥವಾಗಿದ್ದು, ಅಪಾರ ಪ್ರಮಾಣದ ಬೆಳೆ (Crop) ನಾಶವಾಗಿದೆ. ದಾವಣಗೆರೆಯಲ್ಲಿ ಒಂದೂವರೆ ಎಕರೆ ಪ್ರದೇಶದಲ್ಲಿದ್ದ ಎಲೆಕೋಸು ಬೆಳೆ ನೀರು ಪಾಲಾಗಿದೆ. ಇನ್ನೆರೆಡು ದಿನಗಳಲ್ಲಿ ಮಾರುಕಟ್ಟೆಗೆ ಹೋಗಬೇಕಿದ್ದ ಕೋಸು, ನೀರು ಪಾಲಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ಹಣ ವೆಚ್ಚಾ ಮಾಡಿ ದಾವಣಗೆರೆ ತಾಲೂಕಿನ ಅಣಜಿ ಗ್ರಾಮದ ಸಂತೋಷ್ ಎಂಬ ರೈತ ಕೋಸು ಬೆಳೆದಿದ್ದರು. ಆದರೆ ಇದೀಗ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ನಿರಂತರವಾಗಿ ಕುಸಿಯುತ್ತಿರುವ ಮನೆಗಳು:
ಗದಗದಲ್ಲಿ ಸದ್ಯ ಮಳೆ ಕಡಿಮೆಯಾದರೂ ಅವಾಂತರ ಮುಂದುವರಿದಿದೆ. ಹಳ್ಳಿಗಳಲ್ಲಿ ಮಣ್ಣಿನ ಮನೆಗಳು ನಿರಂತರ ಕುಸಿಯುತ್ತಿದ್ದು, ಬಡ ಕುಟುಂಬಗಳ ಬದುಕು ಬೀದಿಗೆ ಬಂದಂತಾಗಿದೆ. ಬಾಳಿ ಬದುಕಿದ ಮನೆಯೊಳಗೆ ಹೋಗಲು ಭಯ, ಆತಂಕ ನಿರ್ಮಾಣವಾಗಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಈ ದೃಶ್ಯಗಳು ಕಂಡು ಬಂದಿವೆ. ಮನೆಗಳು ಕುಸಿಯುತ್ತಿವೆ ಎಂದು ಮಹಿಳೆ ಕಣ್ಣೀರು ಹಾಕಿದ್ದಾರೆ. ಮನೆ ಯಜಮಾನವೂ ಇಲ್ಲ. ಮನೆಯೂ ಇಲ್ಲ. ನಮಗೆ ಯಾರೂ ದಿಕ್ಕು? ಅಂತ ಅಳಲು ತೋಡಿಕೊಂಡಿದ್ದಾರೆ.