
Image Credit source: India Today
ವೀರಪ್ಪ ಮೋಯ್ಲಿ, ರೆಹಮಾನ್ ಖಾನ್, ಬಿಕೆ ಹರಿಪ್ರಸಾದ್, ಎಂ ಬಿ ಪಾಟೀಲ್, ಕೃಷ್ಣ ಭೈರೇಗೌಡ, ಡಾ. ಜಿ ಪರಮೇಶ್ವರ್ ನೇತೃತ್ವದಲ್ಲಿ ಸಮಿತಿಗಳ ರಚನೆ ಮಾಡಲಾಗಿದೆ. ಪಕ್ಷ ಬಲವರ್ಧನೆಗೆ ಈ ಸಮಿತಿಗಳು ಸಲಹೆಗಳನ್ನು ನೀಡಲಿವೆ.
ಬೆಂಗಳೂರು: ಇಂದಿನಿಂದ (ಜೂನ್ 1) ಎರಡು ದಿನಗಳ ಕಾಲ ರಾಜ್ಯ ಕಾಂಗ್ರೆಸ್ನಿಂದ (Karnataka Congress) ನವ ಸಂಕಲ್ಪ ಶಿಬಿರ (Nava Sankalpa Shibira) ನಡೆಯುತ್ತಿದೆ. ಎರಡು ಇಂದು ಮತ್ತು ನಾಳೆ ನಡೆಯುವ ನವ ಸಂಕಲ್ಪ ಶಿಬಿರದಲ್ಲಿ ಮಹತ್ವದ ಚರ್ಚೆ ನಡೆಯುತ್ತದೆ. ರಾಜಸ್ಥಾನದ ಉದಯಪುರದಲ್ಲಿ ನವ ಸಂಕಲ್ಪ ಶಿಬಿರ ಎಐಸಿಸಿ ಮಟ್ಟದಲ್ಲಿ ನಡೆದಿತ್ತು. ಅದೇ ಮಾದರಿಯಲ್ಲಿ ನಡೆಯುತ್ತಿದೆ. ರಾಜ್ಯದ ವಿಚಾರ ಅಳವಡಿಸಿಕೊಂಡು ಕಾಂಗ್ರೆಸ್ ನಾಯಕರು ಚರ್ಚೆ ನಡೆಸಲಿದ್ದಾರೆ. ವೀರಪ್ಪ ಮೋಯ್ಲಿ, ರೆಹಮಾನ್ ಖಾನ್, ಬಿಕೆ ಹರಿಪ್ರಸಾದ್, ಎಂ ಬಿ ಪಾಟೀಲ್, ಕೃಷ್ಣ ಭೈರೇಗೌಡ, ಡಾ. ಜಿ ಪರಮೇಶ್ವರ್ ನೇತೃತ್ವದಲ್ಲಿ ಸಮಿತಿಗಳ ರಚನೆ ಮಾಡಲಾಗಿದೆ. ಪಕ್ಷ ಬಲವರ್ಧನೆಗೆ ಈ ಸಮಿತಿಗಳು ಸಲಹೆಗಳನ್ನು ನೀಡಲಿವೆ. ಇಂದಿನ ಶಿಬಿರ ಬೆಂಗಳೂರಿನ ಹೊರ ವಲಯದ ಕ್ಲಾರ್ಕ್ ಎಕ್ಸಾಟಿಕಾ ಹೊಟೇಲ್ನಲ್ಲಿ ಆರಂಭವಾಗಿದೆ.
ವ್ಯಕ್ತಿ ಮುಖ್ಯ ಅಲ್ಲ, ಪಕ್ಷ ಮುಖ್ಯ- ಡಿಕೆಶಿ:
ನವ ಸಂಕಲ್ಪ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಇದೊಂದು ಐತಿಹಾಸಿಕ ಕಾರ್ಯಕ್ರಮ. ಇಲ್ಲಿ ಚರ್ಚಿಸಲು ಸೇರಿರುವ ನಾಯಕರಿಗಿಂತ ಹೆಚ್ವು ಅರ್ಹತೆಯುಳ್ಳ ನಾಯಕರು ಇದ್ದರು. ಆದರೆ, ಎಐಸಿಸಿ ಸೂಚನೆಯಂತೆ ಅವಕಾಶ ಕಲ್ಪಿಸಲಾಗಿದೆ. ಜೊತೆಗೂಡುವುದು ಆರಂಭ. ಜೊತೆಗೂಡಿ ಕೆಲಸ ಮಾಡುವುದು ಪ್ರಗತಿ. ಎಐಸಿಸಿ ಮಾರ್ಗದರ್ಶನದಂತೆ ಈ ಕಾರ್ಯಕ್ರಮವನ್ನ ಆಯೋಜಿಸಿದ್ದೇವೆ. ವ್ಯಕ್ತಿ ಮುಖ್ಯ ಅಲ್ಲ, ಪಕ್ಷ ಮುಖ್ಯ. ಈ ನಿಟ್ಟಿನಲ್ಲಿ ನಿಮ್ಮ ಸಲಹೆಗಳನ್ನ ಕೊಡಬೇಕು ಎಂದರು.