ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಸೆಮಿಸ್ಟರ್ ಪರೀಕ್ಷೆಗಳಿಗೆ ತಡೆ | Karnataka Law University Semester Exams details here


ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಸೆಮಿಸ್ಟರ್ ಪರೀಕ್ಷೆಗಳಿಗೆ ತಡೆ

ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಸೆಮಿಸ್ಟರ್ ಪರೀಕ್ಷೆಗಳಿಗೆ ತಡೆ ನೀಡಲಾಗಿದೆ. ಹೈಕೋರ್ಟ್‌ ಏಕಸದಸ್ಯ ಪೀಠದಿಂದ ಮಧ್ಯಂತರ ತಡೆಯಾಜ್ಞೆ ನೀಡಲಾಗಿದೆ. ನವೆಂಬರ್‌ 15 ರಿಂದ ನಿಗದಿಯಾಗಿದ್ದ ಸೆಮಿಸ್ಟರ್ ಪರೀಕ್ಷೆಗಳಿಗೆ ತಡೆಯಾಜ್ಞೆ ವಿಧಿಸಲಾಗಿದೆ. ಯುಜಿಸಿ, ಸರ್ಕಾರದ ನಿಯಮಾವಳಿ ಉಲ್ಲಂಘಿಸಿ ಪರೀಕ್ಷೆ ನಡೆಸಿದ್ದ ಹಿನ್ನೆಲೆ, ಕೆಲ ವಿದ್ಯಾರ್ಥಿಗಳು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು.

ಇತರೆ ವಿವಿಗಳ ಮಾನದಂಡ ಅನುಸರಿಸದ ಕಾನೂನು ವಿವಿ ಹಿನ್ನೆಲೆಯಲ್ಲಿ ಸಮಾನತೆ ಮಾನದಂಡ ಅನುಸರಿಸಿ ಪರೀಕ್ಷೆಗೆ ತಡೆ ಆಜ್ಞೆ ನೀಡಲಾಗಿದೆ. ಕೊವಿಡ್ ಹಿನ್ನೆಲೆ ಹೊರಡಿಸಿದ್ದ ನಿಯಮಾವಳಿ ಉಲ್ಲಂಘನೆ ಮಾಡಲಾಗಿತ್ತು. ಈ ಸಂಬಂಧ ಮಧ್ಯಂತರ ಸೆಮಿಸ್ಟರ್ ಪರೀಕ್ಷೆಗಳಿಗೆ ಹೈಕೋರ್ಟ್ ತಡೆ ನೀಡಿದೆ. ಕಾನೂನು ವಿವಿಯ ವಿದ್ಯಾರ್ಥಿಗಳಿಗೆ ಹೈಕೋರ್ಟ್ ರಿಲೀಫ್ ನೀಡಿದೆ.

ಇದನ್ನೂ ಓದಿ: PU Midterm Exams: ದ್ವಿತೀಯ ಪಿಯು ಮಧ್ಯವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಇದನ್ನೂ ಓದಿ: ಶ್ರೀಕಿ ವೈದ್ಯಕೀಯ ವರದಿ ನೆಗೆಟಿವ್; ಜನವರಿ 12ರ ಪರೀಕ್ಷೆಯಲ್ಲಿ ಡ್ರಗ್ ಸೇವಿಸಿಲ್ಲ ಎಂಬ ಬಗ್ಗೆ ಉಲ್ಲೇಖ

TV9 Kannada


Leave a Reply

Your email address will not be published.