ಕರ್ನಾಟಕ ತಂಡಕ್ಕೆ ಮನೀಷ್ ಪಾಂಡೆ ನಾಯಕತ್ವ -ಆಟಗಾರರಿಗೆ ಶುಭ ಕೋರಿದ ಗುಂಡಪ್ಪ ವಿಶ್ವನಾಥ್


ಎರಡು ವರ್ಷಗಳ ನಂತರ ನಡೆಯುತ್ತಿರುವ ರಣಜಿ ಟ್ರೋಫಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಕಣಕ್ಕಿಳಿಯುತ್ತಿರುವ ಕರ್ನಾಟಕ ತಂಡಕ್ಕೆ ಕ್ರಿಕೆಟ್ ದಂತಕಥೆ ಗುಂಡಪ್ಪ ವಿಶ್ವನಾಥ್ ಶುಭ ಕೋರಿ ಬೀಳ್ಗೊಟ್ಟರು.

ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಗುಂಡಪ್ಪ ವಿಶ್ವನಾಥ್​, ತಮ್ಮ ಹಸ್ತಾಕ್ಷರ ಇರುವ ಕ್ರಿಕೆಟ್‌ ಕಿಟ್‌ ಬ್ಯಾಗ್‌ಗಳನ್ನು ಮನೀಷ್ ಪಾಂಡೆ ನಾಯಕತ್ವದ ಬಳಗಕ್ಕೆ ಕಾಣಿಕೆ ನೀಡಿದರು. ಇದೇ ಸಂದರ್ಭದಲ್ಲಿ ಆಟಗಾರರೊಂದಿಗೆ ಮಾತನಾಡಿ ದಿಗ್ಗಜ ಕ್ರಿಕೆಟಿಗ ಅಮೂಲ್ಯ ಸಲಹೆಗಳನ್ನೂ ನೀಡಿದ್ರು. ರಣಜಿ ಟ್ರೋಫಿ ಟೂರ್ನಿ ಫೆಬ್ರವರಿ 10ರಿಂದ ಆರಂಭವಾಗಲಿದ್ದು, ಎಲೈಟ್​ ಗ್ರೂಪ್​ ಸಿ ನಲ್ಲಿ ಕರ್ನಾಟಕ ತಂಡವಿದೆ.

ಪ್ರಸಕ್ತ ಸಾಲಿನ ರಣಜಿ ಟೂರ್ನಿಗಾಗಿ ಕರ್ನಾಟಕ ತಂಡವನ್ನ ಪ್ರಕಟಿಸಿದೆ. 20 ಸದಸ್ಯರ ತಂಡವನ್ನ ಆಯ್ಕೆ ಮಾಡಲಾಗಿದ್ದು, ಮನೀಷ್ ಪಾಂಡೆಗೆ ತಂಡದ ನಾಯಕತ್ವ ನೀಡಲಾಗಿದೆ. ಆರ್​. ಸಮರ್ಥ್​​ ತಂಡದ ಉಪ ನಾಯಕನಾಗಿದ್ರೆ, ಶರತ್​ ಶ್ರೀನಿವಾಸ್​​ ವಿಕೆಟ್​ ಕೀಪರ್​ ಆಗಿ ಆಯ್ಕೆಯಾಗಿದ್ದಾರೆ. ಮಯಂಕ್ ಅಗರವಾಲ್​, ಕರುಣ್ ನಾಯರ್​, ದೇವದತ್ ಪಡಿಕ್ಕಲ್, ಶ್ರೇಯಸ್ ಗೋಪಾಲ್, ಪ್ರಸಿದ್ಧ್​ ಕೃಷ್ಣ, ಕೆ. ಗೌತಮ್ ತಂಡಕ್ಕೆ ಆಯ್ಕೆಯಾದ ಪ್ರಮುಖರಾಗಿದ್ದಾರೆ. ಈವರೆಗೂ ಕರ್ನಾಟಕ 8 ಬಾರಿ ರಣಜಿ ಟ್ರೋಪಿ ಮುಡಿಗೇರಿಸಿಕೊಂಡಿದೆ.

ಮನೀಷ್​ ಪಾಂಡೆ ನೇತೃತ್ವದ ತಂಡ 9ನೇ ಬಾರಿ ರಾಜ್ಯಕ್ಕೆ ಟ್ರೋಪಿ ಗೆದ್ದುಕೊಡುವ ಪಣ ತೊಟ್ಟಿದೆ. 2020ರ ರಣಜಿ ಸೀಸನ್​ನಲ್ಲಿ ಕರ್ನಾಟಕ ಸೆಮಿಫೈನಲ್​ನಲ್ಲಿ ಪಶ್ಚಿಮ ಬಂಗಾಳ ತಂಡದ ವಿರುದ್ಧ ಸೋಲು ಕಂಡಿತ್ತು. ಈ ಬಾರಿ ಕರ್ನಾಟಕ ಎಲೈಟ್ ಸಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಬಲಿಷ್ಠ ತಂಡಗಳಾದ ರೈಲ್ವೇಸ್​, ಪಾಂಡಿಚೆರಿ ಹಾಗೂ ಜಮ್ಮು-ಕಾಶ್ಮೀರ್ ತಂಡದ ಜತೆ ಮನೀಷ್ ಪಾಂಡೆ ಕಾದಾಟ ನಡೆಸಲಿದೆ.

News First Live Kannada


Leave a Reply

Your email address will not be published.