ಕರ್ನಾಟಕ-ತಮಿಳುನಾಡು ಗಡಿಯಲ್ಲಿ ರಸ್ತೆಗೆ ಅಡ್ಡಲಾಗಿ ಟ್ರಕ್​ ಪಲ್ಟಿ.. 2 ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್​ ಜಾಮ್

ಕರ್ನಾಟಕ-ತಮಿಳುನಾಡು ಗಡಿಯಲ್ಲಿ ರಸ್ತೆಗೆ ಅಡ್ಡಲಾಗಿ ಟ್ರಕ್​ ಪಲ್ಟಿ.. 2 ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್​ ಜಾಮ್

ಚಾಮರಾಜನಗರ: ರಸ್ತೆಗೆ ಅಡ್ಡಲಾಗಿ ಟ್ರಕ್ ಪಲ್ಟಿ ಹೊಡೆದು ವಾಹನ‌ ಸವಾರರು ಪರದಾಟ ನಡೆಸಿದ ಘಟನೆ ರಾಷ್ಟ್ರೀಯ ಹೆದ್ದಾರಿ 948ರ 21ನೇ ದಿಂಬಂ ತಿರುವಿನಲ್ಲಿ ನಡೆದಿದೆ.

ತಮಿಳುನಾಡಿನ ಕೊಯಂಬತ್ತೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಕಬ್ಬಿಣ ಅದಿರು ಹೊತ್ತ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ದಿಂಬಂನ 21ನೇ ತಿರುವಿನಲ್ಲಿ ಟ್ರಕ್ ಪಲ್ಟಿ ಹೊಡೆದಿದೆ. ಟ್ರಕ್​ ಪಲ್ಟಿ ಹೊಡೆದ ಕಾರಣ ವಾಹನ ಸವಾರರು 2 ಗಂಟೆಗೂ ಅಧಿಕ ಕಾಲ ಟ್ರಾಫಿಕ್​ ಜಾಮ್​ನಿಂದ ಪರದಾಟ ನಡೆಸಿದ್ರು. ನಂತರ ತಮಿಳುನಾಡು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕ್ರೇನ್ ಸಹಾಯದಿಂದ ಟ್ರಕ್​ನ್ನ ಮೇಲೆತ್ತಿಸಿದ್ದಾರೆ.

The post ಕರ್ನಾಟಕ-ತಮಿಳುನಾಡು ಗಡಿಯಲ್ಲಿ ರಸ್ತೆಗೆ ಅಡ್ಡಲಾಗಿ ಟ್ರಕ್​ ಪಲ್ಟಿ.. 2 ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್​ ಜಾಮ್ appeared first on News First Kannada.

Source: newsfirstlive.com

Source link