‘ಕರ್ನಾಟಕ ನನಗೆ ಸಾಕಷ್ಟು ಗುರುಗಳನ್ನು ಕೊಟ್ಟಿದೆ’; ‘ವಿಕ್ರಮ್’ ಸಿನಿಮಾ ಪ್ರಚಾರದ ವೇಳೆ ಅಣ್ಣಾವ್ರ ನೆನೆದ ಕಮಲ್ ಹಾಸನ್ | Kamal Haasan Talks about Puneeth rajkumar And Puneeth Rajkumar In Bengaluru


‘ಕರ್ನಾಟಕ ನನಗೆ ಸಾಕಷ್ಟು ಗುರುಗಳನ್ನು ಕೊಟ್ಟಿದೆ’; ‘ವಿಕ್ರಮ್’ ಸಿನಿಮಾ ಪ್ರಚಾರದ ವೇಳೆ ಅಣ್ಣಾವ್ರ ನೆನೆದ ಕಮಲ್ ಹಾಸನ್

ರಾಜ್​ಕುಮಾರ್-ಕಮಲ್ ಹಾಸನ್

ದಕ್ಷಿಣ ಭಾರತದ ಅನೇಕ ಸ್ಟಾರ್​ಗಳಿಗೆ ರಾಜ್​ಕುಮಾರ್ ಕುಟುಂಬದ ಜತೆ ಒಳ್ಳೆಯ ಒಡನಾಟವಿದೆ. ಇದಕ್ಕೆ ಕಮಲ್​ ಹಾಸನ್ ಕೂಡ ಹೊರತಾಗಿಲ್ಲ. ಈ ಬಗ್ಗೆ ಕಮಲ್​ ಹಾಸನ್ ಮಾತನಾಡಿದ್ದಾರೆ.

ಕಮಲ್​ ಹಾಸನ್ (Kamal Haasan) ನಟನೆಯ ‘ವಿಕ್ರಮ್’ ಸಿನಿಮಾ (Vikram Movie) ಜೂನ್​ 3ರಂದು ತೆರೆಗೆ ಬರುತ್ತಿದೆ. ಸಿನಿಮಾ ರಿಲೀಸ್​ಗೂ ಒಂದು ದಿನ ಮೊದಲು ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಈ ವೇಳೆ ಅವರು ಭರ್ಜರಿಯಾಗಿ ಸಿನಿಮಾ ಪ್ರಚಾರ ಮಾಡಿದ್ದಾರೆ. ಕಮಲ್ ಹಾಸನ್ ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ಹೀಗಾಗಿ ಕನ್ನಡದ ಸ್ಟಾರ್ಸ್ ಜತೆ ಮತ್ತು ಬೆಂಗಳೂರಿನ ಜತೆ ಒಳ್ಳೆಯ ನಂಟಿದೆ. ಇಂದು ಬೆಂಗಳೂರಿಗೆ ಆಗಮಿಸಿದ ವೇಳೆ ಸಿನಿಮಾ ಬಗ್ಗೆ ಹೇಳುವುದರ ಜತೆಗೆ ಅವರು ಇಲ್ಲಿನ ನೆನಪು ಹಾಗೂ ರಾಜ್​ಕುಮಾರ್ ಕುಟುಂಬದ ಬಗ್ಗೆ ಮಾತನಾಡಿದ್ದಾರೆ.

ಸಾವಿರಾರು ಅಭಿಮಾನಿಗಳ ಎದುರು ಮಾತನಾಡಿದ ಕಮಲ್ ಹಾಸನ್, ‘ನನಗೆ ಬೆಂಗಳೂರಿನ ಜತೆ ಒಂದಲ್ಲ ಸಾಕಷ್ಟು ನೆನಪುಗಳು ಇವೆ. ಪುಟ್ಟಣ್ಣ ಕಣಗಾಲ್ ಸಿನಿಮಾ ರಿಲೀಸ್ ಆದರೆ ಫಸ್ಟ್ ಡೇ ಫಸ್ಟ್ ಶೋ ನೋಡೋಕೆ  ಚೆನ್ನೈನಿಂದ ಬೆಂಗಳೂರಿಗೆ ಬಾಲಚಂದರ್​ ಜೊತೆ ಬರುತ್ತಿದೆ. ನಾನು ಗಿರೀಶ್ ಕಾರ್ನಾಡ್ ಅವರ ದೊಡ್ಡ ಫ್ಯಾನ್. ಬಿ.ವಿ .ಕಾರಂತ್ ಅವರನ್ನು ಮಾತನಾಡಿಸಲು ಬರುತ್ತಿದ್ದೆ’ ಎಂದಿದ್ದಾರೆ ಅವರು.

ಕನ್ನಡದ ಕೋಕಿಲ ಸಿನಿಮಾದಲ್ಲಿ ಕಮಲ್ ಹಾಸನ್ ನಟಿಸಿದ್ದರು. ಈ ಚಿತ್ರ ತೆರೆಗೆ ಬಂದಿದ್ದು 1977ರಲ್ಲಿ. ಬಾಲು ಮಹೇಂದ್ರ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. ಈ ಬಗ್ಗೆ ಮಾತನಾಡಿರುವ ಅವರು, ‘ಕೋಕಿಲ ಚಿತ್ರವನ್ನು ಕನ್ನಡದಲ್ಲೇ ಮಾಡಲಾಗಿತ್ತು. ಶೂಟಿಂಗ್​ಗಾಗಿ ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ನಾನು ಪರಾಗ್ ಹೋಟೆಲ್​ನಲ್ಲಿ ಉಳಿದುಕೊಳ್ಳುತ್ತಿದ್ದೆ’ ಎಂದು ಹಳೆ ನೆನಪು ತೆರೆದಿಟ್ಟಿದ್ದಾರೆ.

TV9 Kannada


Leave a Reply

Your email address will not be published. Required fields are marked *