ಕರ್ನಾಟಕ ಫಿಲ್ಮ್​​ ಚೇಂಬರ್​ನಲ್ಲಿ ​ಇಂದಿನಿಂದ ಉಚಿತ ವ್ಯಾಕ್ಸಿನೇಷನ್​ಗೆ ಚಾಲನೆ ನೀಡಲಾಗಿದೆ.

ಚಿತ್ರೋದ್ಯಮದ ಸದಸ್ಯರಿಗೆ ಉಚಿತ ವ್ಯಾಕ್ಸಿನೇಷನ್​ ನೀಡಬೇಕು ಅಂತ ಚಲನಚಿತ್ರ ವಾಣಿಜ್ಯ ಮಂಡಳಿ ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಈ ಹಿಂದೆ ಅರ್ಜಿ ಸಲ್ಲಿಸಿತ್ತು. ಅದರಂತೆ, ಕಳೆದ ವಾರವಷ್ಟೆ ಸರ್ಕಾರ ಎರಡು ದಿನಗಳ ಕಾಲ 500 ಚಿತ್ರೋದ್ಯಮ ಸದಸ್ಯರಿಗೆ ಉಚಿತ ವ್ಯಾಕ್ಸಿನೇಷನ್​ ಒದಗಿಸಿತ್ತು. ದಿನಕ್ಕೆ 250ರಂತೆ 500 ಸದಸ್ಯರು ವ್ಯಾಕ್ಸಿನ್​ ಹಾಕಿಸಿಕೊಂಡಿದ್ದರು.

ಫಿಲ್ಮ್ ಚೇಂಬರ್ ಸದಸ್ಯರು, ವಿತರಕರು, ನಿರ್ಮಾಪಕರು ಹಾಗೂ ಸಿಬ್ಬಂದಿಗೆ ಮತ್ತು ಅವರ ಕುಟುಂಬದವರಿಗೆ ಇಂದಿನಿಂದ ಉಚಿತ ಲಸಿಕೆ ಆಯೋಜನೆ ಮಾಡಲಾಗಿದೆ. ಸಚಿವರಾದ ಸುಧಾಕರ್ ಹಾಗೂ ಸಿ.ಸಿ ಪಾಟೀಲ್ ವ್ಯಾಕ್ಸಿನೇಷನ್​ಗೆ ಚಾಲನೆ ಕೊಟ್ಟಿದ್ದಾರೆ. ಕಳೆದ ಬಾರಿಯಂತೆ ನಿರ್ದೇಶಕಿ ರೂಪ ಅಯ್ಯರ್ ನೇತೃತ್ವದಲ್ಲಿ ಈ ಉಚಿತ ವ್ಯಾಕ್ಸಿನೇಷನ್‌ ಶಿಬಿರ ನಡೆಯುತ್ತಿದೆ.

ಕಾರ್ಯಕ್ರಮದಲ್ಲಿ ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್, ಸಾ.ರಾ ಗೋವಿಂದು, ಎನ್.ಎಂ ಸುರೇಶ್, ನಟಿ ತಾರಾ, ನಟಿ ರೂಪಾ ಅಯ್ಯರ್ ಹಾಗೂ ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತ ಸೇರಿದಂತೆ ಹಲವರು ಭಾಗಿಯಾಗಿದ್ದರು.

The post ಕರ್ನಾಟಕ ಫಿಲ್ಮ್ ಚೇಂಬರ್​ನಲ್ಲಿ ಇಂದಿನಿಂದ ಉಚಿತ ವ್ಯಾಕ್ಸಿನೇಷನ್​ಗೆ ಚಾಲನೆ appeared first on News First Kannada.

Source: newsfirstlive.com

Source link