ಕರ್ನಾಟಕ ರಾಜ್ಯದಲ್ಲಿ ನಾಲ್ಕು ತಂಡಗಳಾಗಿ ಬಿಜೆಪಿ ಪ್ರವಾಸ; ವಿವರಣೆ ನೀಡಿದ ಕೆ ಗೋಪಾಲಯ್ಯ | K Gopalaiah on Bitcoin MLC Election Kalburgi Municipality Elections Karnataka BJP Politics


ಕರ್ನಾಟಕ ರಾಜ್ಯದಲ್ಲಿ ನಾಲ್ಕು ತಂಡಗಳಾಗಿ ಬಿಜೆಪಿ ಪ್ರವಾಸ; ವಿವರಣೆ ನೀಡಿದ ಕೆ ಗೋಪಾಲಯ್ಯ

ಸಚಿವ ಗೋಪಾಲಯ್ಯ

ಹಾಸನ: ಕರ್ನಾಟಕ ರಾಜ್ಯದಲ್ಲಿ ನಾಲ್ಕು ತಂಡಗಳಾಗಿ ಪ್ರವಾಸ ಮಾಡಲಿದ್ದೇವೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸದಾನಂದಗೌಡ, ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಪ್ರವಾಸ ಮಾಡಲಾಗುತ್ತದೆ. ನಾಲ್ಕು, ನಾಲ್ಕು ತಂಡಗಳಿಂದ ಪ್ರವಾಸ ಮಾಡಲು ತೀರ್ಮಾನ ಮಾಡಲಾಗಿದೆ. ಹಾಸನ ವಿಧಾನಪರಿಷತ್ ಸ್ಥಾನಕ್ಕೆ ನಾಲ್ಕೈದು ಜನರ ಹೆಸರು ಸೂಚನೆ ಆಗಿದೆ. ಬಿಜೆಪಿ ಕೋರ್ ಕಮಿಟಿಯಲ್ಲಿ ಹೆಸರು ಇಂದು, ನಾಳೆಯಲ್ಲಿ ಅಂತಿಮ ಆಗಲಿದೆ. ಯಾರಿಗೇ ಟಿಕೇಟ್ ಕೊಟ್ಟರು ಗೆಲ್ಲಿಸಲು ಕೆಲಸ ಮಾಡುತ್ತೇವೆ ಎಂದು ಅಬಕಾರಿ ಸಚಿವ ಕೆ. ಗೋಪಾಲಯ್ಯ ಇಂದು (ನವೆಂಬರ್ 16) ಹೇಳಿಕೆ ನೀಡಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಬಿಜೆಪಿಯ 1300 ಕ್ಕೂ ಹೆಚ್ಚ ಗ್ರಾಮ ಪಂಚಾಯತ್ ಸ್ಥಾನ ಗೆದ್ದಿದ್ದೇವೆ. ಹಾಗಾಗಿ ನಮಗೆ ಗೆಲುವಿಗೆ ಅವಕಾಶ ಇದೆ. ನಮಗೆ ಹಾಸನ ಜಿಲ್ಲೆಯಲ್ಲಿ ಕಳೆದ ಐದು ವರ್ಷಕ್ಕೆ ಹೋಲಿಸಿದರೆ ಈಗ ಪಕ್ಷ ಗಟ್ಟಿಯಾಗಿದೆ. ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಹೋರಾಟ ಮಾಡುತ್ತೇವೆ. ರಾಜ್ಯ ಪ್ರವಾಸದ ಬಳಿಕ ಚುನಾವಣೆ ಗೆಲುವಿಗೆ ರಣತಂತ್ರ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಟ್ ಕಾಯಿನ್ ವಿಚಾರ ಕಾಂಗ್ರೆಸ್ ಸರ್ಕಾರ ಇದ್ದಾಗ ಬಂದಿದ್ದು. ಈ ಬಿಟ್ ಕಾಯಿನ್ ಕಾಂಗ್ರೆಸ್ ಸರ್ಕಾರದ ಕೂಸು. ಇದರಲ್ಲಿ ಬಿಜೆಪಿಯ ಯಾವುದೇ ಸಚಿವರು ಬಾಗಿ ಆಗಿಲ್ಲ. ಕಾಂಗ್ರೆಸ್​ನವರು ಸುಮ್ಮನೇ ಇಬ್ವರು ಇದ್ದಾರೆ, ಇಬ್ಬರು ಇದ್ಸಾರೆ ಎಂದು ಹೇಳುತ್ತಿದ್ದಾರೆ. ಆ ಇಬ್ಬರು ಯಾರು ಎಂದು ಬಹಿರಂಗ ಪಡಿಸಲಿ. ಸುಮ್ಮನೇ ಹೆದರಿಸೋದುಬಿಟ್ಟು ಹೆಸರು ಬಹಿರಂಗ ಮಾಡಿ ಎಂದು ಸವಾಲು ಹಾಕಿದ್ದಾರೆ.

ಪ್ರತಿನಿತ್ಯ ಮಾದ್ಯಮದ ಮುಂದೆ ಹೋಗಿ ಮಾತಾಡೋದು ಬಿಟ್ಟು ಜನರ ಕಷ್ಟಕ್ಕೆ ನೆರವಾಗಲಿ. ಈಗಾಗಲೆ ಸಿಎಂ ಬಸವರಾಜ ಬೊಮ್ಮಾಯಿ ಈ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಇಡಿಯವರ ಗಮನಕ್ಕೂ ತಂದಿದ್ದಾರೆ ಎಂದು ವಿವರಣೆ ನೀಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಮೌನ ಮುರಿಯಲಿ ಎಂಬ ಕಾಂಗ್ರೆಸ್ ನಾಯಕರ ಒತ್ತಾಯ ವಿಚಾರವಾಗಿ ಗೋಪಾಲಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಸಮಯ ಬಂದಾಗ ಅದ್ಯಕ್ಷರು ಮೌನ ಮುರಿಯುತ್ತಾರೆ. ಕಾಂಗ್ರೆಸ್​ನವರು ಯಾಕೆ ಹೆದರುತ್ತಾರೆ ಎಂದು ಕೇಳಿದ್ದಾರೆ.

ಕಲಬುರಗಿ: ಪಾಲಿಕೆಯಲ್ಲಿ ಬಿಜೆಪಿ ಗದ್ದುಗೆ ಹಿಡಿಯಲು ತಂತ್ರ
ಕಲಬುರಗಿ ಪಾಲಿಕೆಯಲ್ಲಿ ಬಿಜೆಪಿ ಗದ್ದುಗೆ ಹಿಡಿಯಲು ತಂತ್ರ ರೂಪಿಸಿದೆ. ಏಳು ಜನ ಪರಿಷತ್ ಸದಸ್ಯರ ಹೆಸರು ಸೇರಿಸಲು ಅರ್ಜಿ ಸಲ್ಲಿಸಲಾಗಿದೆ. ಕಲಬುರಗಿ ನಗರದ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅರ್ಜಿ ಹಾಕಲಾಗಿದೆ. ನವಂಬರ್ 7 ರಂದೆ ಏಳು ಪರಿಷತ್ ಸದಸ್ಯರು ಅರ್ಜಿ ಸಲ್ಲಿಸಿದ್ದಾರೆ. ಲಕ್ಷ್ಮಣ್ ಸವದಿ, ಭಾರತಿ ಶೆಟ್ಟಿ, ರಘುನಾಥ್ ಮಲ್ಕಾಪುರೆ, ಲೆಹರಸಿಂಗ್, ಮುನಿರಾಜು, ಪ್ರತಾಪಸಿಂಹ್ ನಾಯಕ್, ಸಾಯಬಣ್ಣ ಜಮಾದಾರ್ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಲಾಗಿದೆ. ಕಲಬುರಗಿ ನಗರದ ವಿವಿಧ ಬಡಾವಣೆ ನಿವಾಸಿಗಳು ಎಂದು ಹೇಳಿ ಅರ್ಜಿ ಸಲ್ಲಿಕೆ ಆಗಿದೆ.

ಕಲಬುರಗಿ ಪಾಲಿಕೆ ಅಧಿಕಾರ ಚುಕ್ಕಾಣಿ ಹಿಡಿಯಲು ಬಿಜೆಪಿ ತಂತ್ರ ಹೂಡಿದೆ. ಕಲಬುರಗಿ ಪಾಲಿಕೆ ಮೇಯರ್ ಚುನಾವಣೆ ಮುಂದೂಡಿಕೆ ಸಾಧ್ಯತೆ ಕಂಡುಬಂದಿದೆ. ಟಿವಿ9ಗೆ ಕಲಬುರಗಿ ಪ್ರಾದೇಶಿಕ ಆಯುಕ್ತ ಕಚೇರಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ನವಂಬರ್ 20 ರಂದು ಚುನಾವಣೆ ನಿಗದಿಯಾಗಿತ್ತು. ವಿಧಾನಪರಿಷತ್ ಚುನಾವಣೆ ನೆಪದಲ್ಲಿ ಚುನಾವಣೆ ಮುಂದೂಡಲಾಗಿದೆ. ಕೆಲ ದಿನಗಳ ಹಿಂದಷ್ಟೇ ಏಳು ಜನ ಪರಿಷತ್ ಸದಸ್ಯರ ಹೆಸರು ನೋಂದಣಿಗೆ ಅರ್ಜಿ ಸಲ್ಲಿಸಲಾಗಿತ್ತು. ಕಲಬುರಗಿ ನಗರ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಗೆ ಅರ್ಜಿ ಹಾಕಲಾಗಿತ್ತು. ಇನ್ನು ಮತದಾರರ ಪಟ್ಟಿಯಲ್ಲಿ ಹೆಸರು ಸೇರದ ಹಿನ್ನೆಲೆ, ಚುನಾವಣೆಯನ್ನು ಮುಂದೂಡುವ ತಂತ್ರಗಾರಿಕೆ ಹೆಣೆಯಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಕಲಬುರಗಿ ಪಾಲಿಕೆಯಲ್ಲಿ ಕಿಂಗ್ ಮೇಕರ್ ಆಗಿದ್ದ ದಳಪತಿಗಳು ಕಂಗಾಲು; ಬಿಜೆಪಿ ಹೊಸತಂತ್ರಕ್ಕೆ ಬೆಚ್ಚಿಬಿದ್ದ ಜೆಡಿಎಸ್

ಇದನ್ನೂ ಓದಿ: ಒಂದೇ ಕಲ್ಲಲ್ಲಿ ಹಲವು ಹಕ್ಕಿಗಳನ್ನು ಹೊಡೆದಿದ್ದಾರೆ; ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟ್ವೀಟ್

TV9 Kannada


Leave a Reply

Your email address will not be published. Required fields are marked *