ಕರ್ನಾಟಕ ಶಿಕ್ಷಕರ ನೇಮಕಾತಿ ಪರೀಕ್ಷೆಯ ಹಾಲ್ ಟಿಕೆಟ್​​​ನಲ್ಲಿ ಸನ್ನಿ ಲಿಯೋನ್​​ ಫೋಟೊ; ತನಿಖೆಗೆ ಆದೇಶ – Sunny Leone’s photo on hall ticket of Karnataka Teachers Recruitment examination probe ordered


ಈ ಬಗ್ಗೆ ಟ್ವೀಟ್ ಮಾಡಿದ ಕರ್ನಾಟಕ ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಅಧ್ಯಕ್ಷ ಬಿಆರ್ ನಾಯ್ಡು ಅವರು ಮಂಗಳವಾರ ರಾಜ್ಯ ಶಿಕ್ಷಣ ಇಲಾಖೆ ಅಭ್ಯರ್ಥಿಯ ಫೋಟೋದ ಬದಲಿಗೆ ನೀಲಿ ಚಿತ್ರ ನಟಿಯ ಫೋಟೋವನ್ನು…

ಕರ್ನಾಟಕ ಶಿಕ್ಷಕರ ನೇಮಕಾತಿ ಪರೀಕ್ಷೆಗೆ(TET-2022) ಹಾಜರಾಗುವ ಅಭ್ಯರ್ಥಿಯೊಬ್ಬರ ಪ್ರವೇಶಾತಿ ಕಾರ್ಡ್‌ನಲ್ಲಿ(Hall Ticket) ಅಭ್ಯರ್ಥಿ ಫೋಟೊ ಬದಲಿಗೆ ನಟಿ ಸನ್ನಿ ಲಿಯೋನ್​​ಳ (Sunny Leone) ಅರೆಬೆತ್ತಲೆ ಚಿತ್ರವಿದ್ದು ಅಭ್ಯರ್ಥಿ ಮುಜುಗರಕ್ಕೊಳಗಾಗಿದ್ದಾರೆ. ಈ ಪ್ರವೇಶಾತಿ ಕಾರ್ಡ್‌ನ ಸ್ಕ್ರೀನ್‌ಗ್ರಾಬ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ರಾಜ್ಯ ಶಿಕ್ಷಣ ಇಲಾಖೆ ತನಿಖೆಗೆ ಆದೇಶಿಸಿದೆ. ಈ ಬಗ್ಗೆ ಟ್ವೀಟ್ ಮಾಡಿದ ಕರ್ನಾಟಕ ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಅಧ್ಯಕ್ಷ ಬಿಆರ್ ನಾಯ್ಡು ಅವರು ಮಂಗಳವಾರ ರಾಜ್ಯ ಶಿಕ್ಷಣ ಇಲಾಖೆ ಅಭ್ಯರ್ಥಿಯ ಫೋಟೋದ ಬದಲಿಗೆ ನೀಲಿ ಚಿತ್ರ ನಟಿಯ ಫೋಟೋವನ್ನು ಹಾಲ್ ಟಿಕೆಟ್‌ನಲ್ಲಿ ಮುದ್ರಿಸಿದೆ ಎಂದು ಆರೋಪಿಸಿದ್ದಾರೆ. ಶಿಕ್ಷಕರ ನೇಮಕಾತಿಯ ಪ್ರವೇಶಾತಿ ಪತ್ರದಲ್ಲಿ ಅಭ್ಯರ್ಥಿಯ ಬದಲು ನೀಲಿಚಿತ್ರ ತಾರೆಯ ಫೋಟೋ ಪ್ರಕಟಿಸಲಾಗಿದೆ. ಸದನದಲ್ಲಿ ನೀಲಿಚಿತ್ರ ವೀಕ್ಷಿಸುವ ಪಕ್ಷದವರಿಂದ ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ? ಬಿಸಿ  ನಾಗೇಶ್ ಅವರೇ, ನೀಲಿಚಿತ್ರ ತಾರೆ ನೋಡುವ ಹಂಬಲವಿದ್ದರೆ ಒಂದು ಫೋಟೋ ನೇತಾಕಿಕೊಳ್ಳಿ, ಅದಕ್ಕೆ ಶಿಕ್ಷಣ ಇಲಾಖೆಯನ್ನು ಉಪಯೋಗಿಸಬೇಡಿ! ಎಂದು ನಾಯ್ಡು ಟ್ವೀಟ್ ಮಾಡಿದ್ದಾರೆ.

ನಾಯ್ಡು ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಬಿ.ಸಿ.ನಾಗೇಶ್ ಅವರ ಕಚೇರಿ, “ಅಭ್ಯರ್ಥಿಗಳು ಫೋಟೋವನ್ನು ಅಪ್‌ಲೋಡ್ ಮಾಡಬೇಕು. ಅವರು ಫೈಲ್‌ಗೆ ಅವರು ಯಾವ ಫೋಟೋವನ್ನು ಲಗತ್ತಿಸಿದರೂ ಸಿಸ್ಟಮ್ ತೆಗೆದುಕೊಳ್ಳುತ್ತದೆ. ನಾವು ಅಭ್ಯರ್ಥಿಯಲ್ಲಿ ಸನ್ನಿ ಲಿಯೋನ್ ಅವರ ಫೋಟೋವನ್ನು ಅವರ ಪ್ರವೇಶ ಕಾರ್ಡ್‌ನಲ್ಲಿ ಹಾಕಿದ್ದೀರಾ ಎಂದು ನಾವು ಕೇಳಿದಾಗ,ಆಕೆಯ ಪತಿಯ ಸ್ನೇಹಿತ ತನ್ನ ಮಾಹಿತಿಯನ್ನು ಅಪ್‌ಲೋಡ್ ಮಾಡಿದ್ದಾನೆ ಎಂದು ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಸಿದ ನಂತರ ಎಫ್‌ಐಆರ್ ದಾಖಲಿಸುವುದಾಗಿ ಕರ್ನಾಟಕ ಶಿಕ್ಷಣ ಇಲಾಖೆ ತಿಳಿಸಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.