ಕರ್ನಾಟಕ ಸರ್ಕಾರದಿಂದ ಇಂದು ಅಥವಾ ನಾಳೆ ಮಹತ್ವದ ಆದೇಶ ಸಾಧ್ಯತೆ | Government of Karnataka may order mandatory vaccination today or tomorrow


ಕರ್ನಾಟಕ ಸರ್ಕಾರದಿಂದ ಇಂದು ಅಥವಾ ನಾಳೆ ಮಹತ್ವದ ಆದೇಶ ಸಾಧ್ಯತೆ

ಕೊರೊನಾ ಲಸಿಕೆ ಸಾಂಕೇತಿಕ ಚಿತ್ರ

ಬೆಂಗಳೂರು: ರಾಜ್ಯ ಸರ್ಕಾರ ಇಂದು (ಡಿ.1) ಅಥವಾ ನಾಳೆ (ಡಿ.2) ಮಹತ್ವದ ಆದೇಶ ಹೊರಡಿಸುವ ಸಾಧ್ಯತೆಯಿದೆ. ಬಿಬಿಎಂಪಿ ಪ್ರಸ್ತಾವನೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಲಸಿಕೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಿದೆ. ಈ ಬಗ್ಗೆ ಬಿಬಿಎಂಪಿ ಉನ್ನತ ಮೂಲಗಳಿಂದ ಟಿವಿ9ಗೆ ಮಾಹಿತಿ ಲಭ್ಯವಾಗಿದೆ. ಎರಡು ಡೋಸ್ ಲಸಿಕೆ ಪಡೆದಿರುವ ಸರ್ಟಿಫಿಕೇಟ್ ಇಲ್ಲದೆ ಹೋದರೆ ಮೆಟ್ರೋದಲ್ಲಿ ಪ್ರಯಾಣ ಮಾಡಲು ಅವಕಾಶ ನೀಡದಂತೆ ಸರ್ಕಾರ ಆದೇಶ ಹೊರಡಿಸಲಿದೆ.

ಬಿಎಂಟಿಸಿ ಬಸ್, ಥಿಯೇಟರ್, ಮಾಲ್, ಸ್ವಿಮ್ಮಿಂಗ್ ಪೂಲ್, ಪಾರ್ಕ್, ರೆಸ್ಟೋರೆಂಟ್, ಪಬ್ ಸೇರಿದಂತೆ ಸಾರ್ವಜನಿಕ ಸ್ಥಳಗಳಿಗೆ ಹೋಗುವ ಮೊದಲು ಎರಡು ಡೋಸ್ ಲಸಿಕೆ ಪಡೆಯುವುದು ಕಡ್ಡಾಯ ಅಂತ ರಾಜ್ಯ ಸರ್ಕಾರ ಇಂದು ಅಥವಾ ನಾಳೆ ಆದೇಶ ಹೊರಡಿಸಬಹುದು. ಬಿಬಿಎಂಪಿ ಲಸಿಕೆ ಕಡ್ಡಾಯಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿತ್ತು. ಬಿಬಿಎಂಪಿ ಪ್ರಸ್ತಾವನೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ನಾಳೆಯಿಂದಲೇ ಹೊಸ ರೂಲ್ಸ್ ಜಾರಿಯಾಗುವ ಸಾಧ್ಯತೆಯಿದೆ.

ಬಿಬಿಎಂಪಿ ಮೊದಲು ಟೆಕ್ನಿಕಲ್ ಅಡ್ವೈಸರಿ ಕಮಿಟಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಬಿಬಿಎಂಪಿ ಪ್ರಸ್ತಾವನೆಗೆ ಟೆಕ್ನಿಕಲ್ ಅಡ್ವೈಸರಿ ಕಮಿಟಿ ಒಪ್ಪಿಗೆ ನೀಡಿದೆ. ಸದ್ಯ ಸರ್ಕಾರದ ಅಂತಿಮ ಆದೇಶಕ್ಕೆ ಬಿಬಿಎಂಪಿ ಅಧಿಕಾರಿಗಳು ಕಾಯುತ್ತಿದ್ದಾರೆ.

ಒಮಿಕ್ರಾನ್ ಆತಂಕ ಹಿನ್ನೆಲೆ ಕಠಿಣ ಕ್ರಮ ಅನಿವಾರ್ಯ ಅಂತ ಹುಬ್ಬಳ್ಳಿಯಲ್ಲಿ ಸಿಎಂ‌ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ವಿದೇಶದಿಂದ ಬರುವವರಿಗೆ ಸಂಪೂರ್ಣ ಟೆಸ್ಟ್‌ಗೆ ನಿರ್ಧಾರ ಮಾಡಲಾಗಿದೆ. ಆರೋಗ್ಯ ಸಚಿವರಿಗೆ ಈ ಬಗ್ಗೆ ಸೂಚನೆ ನೀಡಿದ್ದೇನೆ. ನಾಳೆ ದೆಹಲಿಯಲ್ಲಿ ಆರೋಗ್ಯ ಸಚಿವರನ್ನ ಭೇಟಿ ಮಾಡುವೆ. ಕೊವಿಡ್ ವಾರಿಯರ್ಸ್‌ಗೆ ಬೂಸ್ಟರ್ ಡೋಸ್ ಬಗ್ಗೆ ಚರ್ಚೆ ಮಾಡುತ್ತೇನೆ. ಟಾಸ್ಕ್‌ಫೋರ್ಸ್‌ನಲ್ಲಿ ಚರ್ಚೆ ಮಾಡುತ್ತೇವೆ. ಆಫ್ರಿಕಾದಿಂದ ಬಂದಿರುವವರ ಸ್ಯಾಂಪಲ್ಸ್ ಎನ್​ಸಿಬಿಎಸ್​ಗೆ ರವಾನೆ ಮಾಡಲಾಗಿದೆ. ಅದರ ವರದಿ ಬಂದ ಬಳಿಕ ತಿಳಿಯಲಿದೆ. ಕೇರಳ‌ ಗಡಿಯಲ್ಲಿ ಹೆಚ್ಚಿನ ತಪಾಸಣೆ ಮಾಡುತ್ತೇವೆ. ಲಸಿಕಾ ಅಭಿಯಾನ ತೀವ್ರಗೊಳಿಸುತ್ತೇವೆ. ವಿದೇಶದಿಂದ‌ ಬಂದವರನ್ನು ಒಂದು ವಾರ ಗಮನಿಸುತ್ತೇವೆ ಅಂತ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇದನ್ನೂ ಓದಿ

ಧಾರವಾಡ: ಇದುವರೆಗೆ ಯಾರಲ್ಲೂ ಹೊಸತಳಿಯ ವೈರಾಣು ಕಂಡುಬಂದಿಲ್ಲ; ಜಿಲ್ಲಾಧಿಕಾರಿ ಮಾಹಿತಿ

ಧಾರವಾಡ: ಇದುವರೆಗೆ ಯಾರಲ್ಲೂ ಹೊಸತಳಿಯ ವೈರಾಣು ಕಂಡುಬಂದಿಲ್ಲ; ಜಿಲ್ಲಾಧಿಕಾರಿ ಮಾಹಿತಿ

TV9 Kannada


Leave a Reply

Your email address will not be published. Required fields are marked *