ಕರ್ನಾಟಕ ಸೇರಿದಂತೆ ಎಲ್ಲೆಲ್ಲೂ ಕಲ್ಲಿದ್ದಲಿಗೆ ಅಭಾವ; ಕಗ್ಗತ್ತಲಲ್ಲಿ ಮುಳುಗಲಿದ್ಯಾ ದೇಶ..?

ನವದೆಹಲಿ: ಕರ್ನಾಟಕ ಸೇರಿದಂತೆ ದೇಶದ 135 ಕಲ್ಲಿದ್ದಲು ಆಧಾರಿತ ಪವರ್​ ಪ್ಲಾಂಟ್​​ಗಳಲ್ಲಿ ತೀವ್ರ ಕಲ್ಲಿದ್ದಲಿನ ಕೊರತೆ ಎದುರಾಗಿದ್ದು ಹಲವು ಪ್ಲಾಂಟ್​ಗಳು ಕೆಲಸವನ್ನೇ ನಿಲ್ಲಿಸಿವೆ. ದೇಶಕ್ಕೆ ಪೂರೈಕೆಯಾಗುವ 70 ಪ್ರತಿಶತ ವಿದ್ಯುತ್ ಸದ್ಯ ಉತ್ಪಾದನೆಯಾಗ್ತಿರೋದು ಕಲ್ಲಿದ್ದಲಿನಿಂದಲೇ.. ಹೀಗಾಗಿ ಕಲ್ಲಿದ್ದಲಿನ ಕೊರತೆ ದೇಶಕ್ಕೆ ದೊಡ್ಡ ಸಮಸ್ಯೆಯಾಗಿ ಕಾಡುವ ಸಾಧ್ಯತೆಗಳಿವೆ.

ಏನಾಗುತ್ತಿದೆ..?
ಕೋವಿಡ್​ನಿಂದ ಚೇತರಿಸಿಕೊಂಡ ಉದ್ಯಮಗಳು, ಕೈಗಾರಿಕೆಗಳು ಕೆಲಸದಲ್ಲಿ ತೊಡಗುತ್ತಲೇ ವಿದ್ಯುತ್​ನ ವ್ಯಯ ಹೆಚ್ಚಾಗಿದೆ. ಕಳೆದ ಎರಡು ತಿಂಗಳುಗಳಲ್ಲೇ 17 ಪರ್ಸೆಂಟ್ ವಿದ್ಯುತ್ ಹೆಚ್ಚುವರಿಯಾಗಿ ಖರ್ಚಾಗುತ್ತಿದೆ ಎನ್ನಲಾಗಿದೆ. ಇನ್ನು ಇದೇ ಸಮಯದಲ್ಲಿ ಕಲ್ಲಿದ್ದಲ್ಲಿನ ಆಮದು ದರ 40 ಪರ್ಸೆಂಟ್ ಏರಿಕೆ ಕಂಡಿದ್ದು ಕಳೆದ ಎರಡು ವರ್ಷಗಳಲ್ಲಿ ಕಲ್ಲಿದ್ದಲ್ಲಿನ ಆಮದು ಗಣನೀಯ ಇಳಿಕೆ ಕಂಡಿದೆ.

ಇದನ್ನೂ ಓದಿ: ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲಿಗೆ ಅಭಾವ; ದಸರಾ ಸಂಭ್ರಮಕ್ಕೂ ಕರೆಂಟ್ ಶಾಕ್..?

ಭಾರತ ಜಗತ್ತಿನಲ್ಲೇ ಅತೀ ಹೆಚ್ಚು ಕಲ್ಲಿದ್ದಲು ಆಮದು ಮಾಡಿಕೊಳ್ಳುವ ದೇಶವಾಗಿದೆ. ಅಲ್ಲದೇ ಕಲ್ಲಿದ್ದಲು ಸಂಗ್ರಹದಲ್ಲಿ ನಾಲ್ಕನೇ ಅತೀದೊಡ್ಡ ದೇಶ ಎನ್ನಿಸಿಕೊಂಡಿದೆ. ಪವರ್ ಪ್ಲಾಂಟ್​ಗಳು ಹೆಚ್ಚಾಗಿ ದೇಶೀಯವಾಗಿ ಸಂಗ್ರಹವಾದ ಕಲ್ಲಿದ್ದಲಿನ ಮೇಲೆ ಅವಲಂಬಿತವಾಗಿದ್ದರಿಂದ ಪೂರೈಕೆ ಅಸಾಧ್ಯವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: RTPS ಬೆನ್ನಲ್ಲೇ BTPSನಲ್ಲೂ ಕಲ್ಲಿದ್ದಲು ಅಭಾವ; 2 ಘಟಕಗಳು ವಿದ್ಯುತ್​ ಉತ್ಪಾದನೆ ಸ್ಥಗಿತ

ಇದರ ಪರಿಣಾಮವೇನು..?
ಸದ್ಯ ಪರಿಣಿತರ ಅಭಿಪ್ರಾಯದ ಪ್ರಕಾರ ಸ್ಥಲೀಯ ಕಲ್ಲಿದ್ದಲಿನ ಕೊರತೆಯನ್ನು ನೀಗಿಸಲು ಹೆಚ್ಚು ಹೆಚ್ಚು ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುವುದು ಸೂಕ್ತ ಪರಿಹಾರವಲ್ಲ ಎಂದಿದ್ದಾರೆ. ಕಲ್ಲಿದ್ದಲಿನ ಕೊರತೆಯ ಬಗ್ಗೆ ಮಾತನಾಡಿರುವ ಭಾರತದ ಆರ್ಥಿಕ ತಜ್ಞ ಆರೋದೀಪ್ ನಂದಿ.. ಈ ಹಿಂದೆಯೂ ಸಹ ದೇಶದಲ್ಲಿ ಕಲ್ಲಿದ್ದಲು ಕೊರತೆ ಎದುರಾಗಿತ್ತು. ಆದರೆ ಈ ಬಾರಿಯ ಕಲ್ಲಿದ್ದಲು ಕೊರತೆ ಅಘೋಷಿತ ಎಂದಿದ್ದಾರೆ.


ಈ ಕೊರತೆ ಮುಂದುವರೆದರೆ ವಿದ್ಯುತ್ ದರ ಏರಿಕೆಯಾಗಲಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು ಇದರ ಜೊತೆಗೆ ಮುಂದಿನ ದಿನಗಳಲ್ಲಿ ವಿದ್ಯುತ್ ಕೂಡ ದುಬಾರಿಯಾಗಲಿದೆ ಎಂದಿದ್ದಾರೆ.

News First Live Kannada

Leave a comment

Your email address will not be published. Required fields are marked *