ಕರ್ನಾಟಕ ಹೈಕೋರ್ಟ್​ಗೆ ನೂತನ ಸಿಜೆಯಾಗಿ ರಿತುರಾಜ್ ಅವಸ್ತಿ ಅಧಿಕೃತ ನೇಮಕ

ಬೆಂಗಳೂರು: ಕರ್ನಾಟಕ ಹೈಕೋರ್ಟ್​ಗೆ ನೂತನ ಸಿಜೆಯಾಗಿ ರಿತುರಾಜ್ ಅವಸ್ತಿ ಇಂದು ಅಧಿಕೃತವಾಗಿ ನೇಮಕಗೊಂಡಿದ್ದಾರೆ. ಸಿಜೆ ರಿತು ರಾಜ್ ಆವಸ್ತಿಯವರ ಹಿನ್ನಲೆ ನೋಡೋದಾದ್ರೆ.. 1960ರ ಜುಲೈ 3 ರಂದು ರಿತು ರಾಜ್ ಆವಸ್ತಿಯವರ ಜನನವಾಯ್ತು. 1986ರಲ್ಲಿ ಲಕ್ಲೋ ವಿವಿಯಲ್ಲಿ ಕಾನೂನು ಪದವಿ ಮುಗಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್​ಗೆ ನೂತನ ಸಿಜೆಯಾಗಿ ರಿತುರಾಜ್ ಅವಸ್ತಿ ಹೆಸರು ಶಿಫಾರಸು

ಕೇಂದ್ರ ಸರ್ಕಾರದ ಪರ ಅಸಿಸ್ಟೆಂಟ್ ಸಾಲಿಸಿಟರ್ ಜನರಲ್ ಆಗಿದ್ರು. ಇವರ ಸೇವೆ ಪರಿಗಣಿಸಿ 2009ರ ಏ.13 ರಂದು ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2022 ರ ಜುಲೈ 2 ನೇ ತಾರೀಕಿನಂದು ನ್ಯಾ. ರಿತು ರಾಜ್ ಅವಸ್ಥಿ ನಿವೃತ್ತಿಯಾಗಲಿದ್ದಾರೆ.

ಒಟ್ಟು 8 ರಾಜ್ಯಗಳಿಗೆ ಚೀಫ್ ಜಸ್ಟೀಸ್​ಗಳನ್ನು ನೇಮಕ ಮಾಡಲಾಗಿದ್ದು ವಿವರ ಹೀಗಿದೆ..

  1. ರಾಜೇಶ್ ಬಿಂದಲ್- ಅಲಹಾಬಾದ್ ಹೈಕೋರ್ಟ್
  2. ರಂಜಿತ್ ವಿ. ಮೋರೆ- ಮೇಘಾಲಯ ಹೈಕೋರ್ಟ್
  3. ಸತೀಶ್ ಚಂದ್ರ ಶರ್ಮ್- ತೆಲಂಗಾಣ ಹೈಕೋರ್ಟ್
  4. ಪ್ರಕಾಶ್ ಶ್ರೀವಾಸ್ತವ್- ಕಲ್ಕತ್ತಾ ಹೈಕೋರ್ಟ್
  5. ಆರ್. ವಿ. ಮಲಿಮಠ್- ಮಧ್ಯಪ್ರದೇಶ್ ಹೈಕೋರ್ಟ್
  6. ರಿತುರಾಜ್ ಅವಸ್ತಿ- ಕರ್ನಾಟಕ ಹೈಕೋರ್ಟ್
  7. ಅರವಿಂದ್ ಕುಮಾರ್- ಗುಜರಾತ್ ಹೈಕೋರ್ಟ್
  8. ಪ್ರಶಾಂತ್ ಕುಮಾರ್ ಮಿಶ್ರಾ- ಆಂಧ್ರಪ್ರದೇಶ ಹೈಕೋರ್ಟ್

News First Live Kannada

Leave a comment

Your email address will not be published. Required fields are marked *