ಬೆಂಗಳೂರು: ಕರ್ಫ್ಯೂ ನಡುವೆಯೂ ಬೆಂಗಳೂರಲ್ಲಿ ಪೊಲೀಸ್ ಗನ್‌ ಸದ್ದು ಮಾಡಿದೆ. ರೌಡಿಶೀಟರ್​ ದಿನೇಶ್@ಕ್ರೇಜಿ ಕ್ರೂಸ್ ಎಂಬ ಆರೋಪಿಯ ಮೇಲೆ ಪೊಲೀಸರು ಶೂಟೌಟ್​ ಮಾಡಿದ್ದಾರೆ. ರಿಕವರಿ ಸಂಬಂಧವಾಗಿ ಆರೋಪಿಯನ್ನು ಕರೆದುಕೊಂಡು ಹೋದಾಗ ನಗರದ ಲಾಂಗ್ ಫರ್ಡ್ ಟೌನ್ ಬಳಿ ಘಟನೆ ನಡೆದಿದೆ.

ಕಳೆದ 20 ನೇ ತಾರೀಕು ರವಿ ವರ್ಮ ಅಲಿಯಾಸ್ ಅಪ್ಪು ಎಂಬುವರ ಕೊಲೆಯಾಗಿತ್ತು. 24 ನೇ ತಾರೀಕು ಪ್ರಕರಣ ಸಂಬಂಧ ಆರು ಜನರನ್ನ ಅಶೋಕನಗರ ಪೊಲೀಸರು‌ ಬಂಧಿಸಿದ್ದರು. ಇದರಲ್ಲಿ A1 ದಿನೇಶ್ @ ಕ್ರೇಜಿಯನ್ನ ರಿಕವರಿಗೆ ಕರೆದುಕೊಂಡು ಹೋಗಲಾಗಿತ್ತು ಎನ್ನಲಾಗಿದೆ. ಲಾಂಗ್ ಫೋರ್ಡ್ ರಸ್ತೆಯ ಕ್ರಿಶ್ಚಿಯನ್ ಸೆಮೆಟ್ರಿಯ ಬಳಿಗೆ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ ರಿಕವರಿಗೆ ಕರೆದುಕೊಂಡು ಹೋಗಲಾಗಿತ್ತು. ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ ಎನ್ನಲಾಗಿದೆ.

ಈ ವೇಳೆ ಅದೇ ಮಾರಾಕಾಸ್ತ್ರದಿಂದ ದಿನೇಶ್ ಪೊಲೀಸ್ ಕಾನ್ಸ್​ಟೇಬಲ್ ವಸಂತ್​ಗೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಇನ್ಸ್​ಪೆಕ್ಟರ್ ಭರತ್ ದಿನೇಶ್ ಕಾಲಿಗೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಸದ್ಯ ಆರೋಪಿ ದಿನೇಶ್ ಮತ್ತು ಹಲ್ಲೆಗೊಳಗಾದ ವಸಂತ್ ಫಿಲಾಮೆನಸ್ ಆಸ್ಪತ್ರೆಯಲ್ಲಿ ‌ಚಿಕಿತ್ಸೆಗೆ ಒಳಗಾಗಿದ್ದಾರೆ.

The post ಕರ್ಫ್ಯೂ ನಡುವೆಯೂ ಸಿಲಿಕಾನ್​ ಸಿಟಿಯಲ್ಲಿ ಸದ್ದು ಮಾಡಿದ ಶೂಟೌಟ್​ appeared first on News First Kannada.

Source: News First Kannada
Read More