ಕರ್ಫ್ಯೂ ನಡುವೆ ಹಸಿದವರಿಗೆ ನಿತ್ಯ ಊಟ ವಿತರಿಸಿ ಮಾನವೀಯತೆ ಮೆರೆದ ಅಧಿಕಾರಿ

ಕರ್ಫ್ಯೂ ನಡುವೆ ಹಸಿದವರಿಗೆ ನಿತ್ಯ ಊಟ ವಿತರಿಸಿ ಮಾನವೀಯತೆ ಮೆರೆದ ಅಧಿಕಾರಿ

ಕೊಪ್ಪಳ: ಕೋವಿಡ್ ಕರ್ಫ್ಯೂನಿಂದಾಗಿ ನಗರದಲ್ಲಿ ಆಹಾರ ಸಿಗದೆ ಪರದಾಡುತ್ತಿರುವ ಅನಾಥರು ಹಾಗೂ ಬಡವರಿಗೆ ನಿತ್ಯ ಊಟ ವಿತರಿಸುವ ಮೂಲಕ ಅಧಿಕಾರಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ನಗರಸಭೆಯ ಪೌರಾಯುಕ್ತ ಅರವಿಂದ್ ಜಮಖಂಡಿ ಪ್ರತಿನಿತ್ಯ 50ಕ್ಕೂ ಅಧಿಕ ಮಂದಿಗೆ ಆಹಾರ ವಿತರಿಸುತ್ತಿದ್ದು, ಸಂಕಷ್ಟದಲ್ಲಿರುವವರ ಹಸಿವು ನೀಗಿಸುತ್ತಿದ್ದಾರೆ. ಕರ್ತವ್ಯದ ಭಾಗವಾಗಿ ನಗರದಲ್ಲಿ ರಾತ್ರಿ ಗಸ್ತು ತಿರುಗುವ ಇವರು, ಬೀದಿ ಬದಿ ಕಾಣ ಸಿಗುವ ಅನಾಥ, ನಿರ್ಗತಿಕ ಜನರಿಗೆ ಆಹಾರ ತಲುಪಿಸುತ್ತಿದ್ದಾರೆ.

ಕೇವಲ ಆಹಾರ ಮಾತ್ರವಲ್ಲದೆ ಅಗತ್ಯ ಇರುವವರಿಗೆ ಹಾಸಿಗೆ, ಗ್ಲೂಕೋಸ್ ಡಿ ಪೌಡರ್, ಒಆರ್​ಎಸ್​, ಬಟ್ಟೆ, ಉಪಹಾರವನ್ನ ಕೂಡ ವಿತರಿಸುವ ಮೂಲಕ ಅಧಿಕಾರಿ ಅರವಿಂದ್ ಅವರು ಜನರಿಗೆ ನೆರವಾಗುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ಜನರಿಂದ ಪ್ರಶಂಸೆ ವ್ಯಕ್ತವಾಗಿದೆ.

The post ಕರ್ಫ್ಯೂ ನಡುವೆ ಹಸಿದವರಿಗೆ ನಿತ್ಯ ಊಟ ವಿತರಿಸಿ ಮಾನವೀಯತೆ ಮೆರೆದ ಅಧಿಕಾರಿ appeared first on News First Kannada.

Source: newsfirstlive.com

Source link