ಧಾರವಾಡ: ಜಿಲ್ಲೆಯ ಕಾರ್ಮಿಕ ಇಲಾಖೆಯಲ್ಲಿ ಏಜೆಂಟರುಗಳು ಕಾರ್ಮಿಕ ಕಾರ್ಡ್​ ಮಾಡಿಕೊಡುವದಾಗಿ ಬಡ ಕಾರ್ಮಿಕರನ್ನು ಸುಲಿಗೆ ಮಾಡುತ್ತಿರುವುದು ಪತ್ತೆಯಾಗಿದೆ.

ಜಿಲ್ಲೆಯ ಕಲಘಟಗಿ ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕ ಇಲಾಖೆ ಕಾರ್ಡ್​​ ಮಾಡಿಸಿಕೊಡಲು ಹತ್ತು ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ ಎಂದು ಕಾರ್ಮಿಕರು ಆರೋಪ ಮಾಡಿದ್ದಾರೆ. ಕಾರ್ಮಿಕ ಕಾರ್ಡ್​ ಮಾಡಿಸಲು ಕಾರ್ಮಿಕರ ಸುಲಿಗೆಗೆ ಇಳಿದಿರುವ ಏಜೆಂಟರುಗಳು ಒಂದು ಕಾರ್ಡ್​​ಗೆ 600 ರೂಪಾಯಿಂದ 700 ರೂಪಾಯಿಯವರೆಗೆ ವಸೂಲಿ ಮಾಡುತ್ತಿದ್ದಾರೆ ಎನ್ನಲಾಗಿದೆ.

ಒಂದು ಕಾರ್ಡ್​ಗೆ ಸರ್ಕಾರಿ ಶುಲ್ಕ ಕೇವಲ 25 ರಿಂದ 30 ರೂಪಾಯಿ ಮಾತ್ರವಿದೆ. ಸರ್ಕಾರಿ ಕಚೇರಿ ಎದುರಲ್ಲೇ ರಾಜಾರೋಷವಾಗಿ ಏಜೆಂಟರುಗಳು ವ್ಯವಹಾರ ನಡೆಸುತ್ತಿದ್ದಾರೆ. ಕಾರ್ಮಿಕರಿಂದ ಏಜೆಂಟರುಗಳು ಹಣ ವಸೂಲಿ ಮಾಡುತ್ತಿರೋ ವಿಡಿಯೋ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಏಜೆಂಟರ ದುಡ್ಡಿನ ಹಾವಳಿಗೆ ಬೇಸತ್ತಿರುವ ಕಾರ್ಮಿಕರು ಸಂಬಂಧ ಪಟ್ಟವರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ..

The post ಕಲಘಟಗಿಯಲ್ಲಿ ಕಾರ್ಮಿಕ ಕಾರ್ಡ್​ ಅವ್ಯವಹಾರ: ಏಜೆಂಟರ ಹಾವಳಿಗೆ ಸುಸ್ತಾದ ಕಾರ್ಮಿಕರು appeared first on News First Kannada.

Source: newsfirstlive.com

Source link