ಬೆಂಗಳೂರು: ಕಲಘಟಗಿ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಬೆಂಬಲಿಗ ಗುರುನಾಥ ಶಿವಪ್ಪದಾನವೇನವರ ಅವರನ್ನ ಕೆಪಿಸಿಸಿ ಅಧ್ಯಕ್ಷ ನೇಮಕ ಮಾಡಿದ್ದರು.

ಈ ವಿಚಾರವಾಗಿ ತಮ್ಮ ಬೆಂಬಲಿಗನನ್ನು ಪರ್ಯಾಯವಾಗಿ ಬೆಳೆಸಲು ನೇಮಕ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಬೆಂಬಲಿಗರು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಬ್ಲಾಕ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇಮಿಕಕ್ಕೆ ತಡೆ ಆದೇಶ ನೀಡಿದ್ದಾರೆ. ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಕ್ಕೆ ತಡೆ ನೀಡಿರೋದಾಗಿ ಹೊಸ ಆದೇಶ ಹೊರಡಿಸಿದ್ದಾರೆ. ಸಿದ್ದರಾಮಯ್ಯ ಬೆಂಬಲಿಗರ ತೀವ್ರ ಆಕ್ರೋಶಕ್ಕೆ ಗುರಿಯಾದ ಬೆನ್ನಲ್ಲೇ ಪರಿಷ್ಕೃತ ಆದೇಶ ಪ್ರಕಟಿಸಿದ್ದಾರೆ ಎನ್ನಲಾಗಿದೆ.

ಜೂನ್ 12 ರಂದು ಗುರುನಾಥ ದಾನವೇನವರ ಅವರನ್ನ ಕಲಘಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಡಿಕೆ ಶಿವಕುಮಾರ್ ನೇಮಕ ಮಾಡಿದ್ದರು. ಇನ್ನು ಸಂತೋಷ್​ ಲಾಡ್ ಬಲಗೈ ಬಂಟ ಮಂಜುನಾಥ ಮುರಳ್ಳಿಯನ್ನ ಅಧ್ಯಕ್ಷ ಸ್ಥಾನದಿಂದ ಕೈಬಿಟ್ಟಿದ್ದರು. ಇದರಿಂದ ಸಂತೋಷ ಲಾಡ್​ಗೆ ಕ್ಷೇತ್ರದಲ್ಲಿ ಭಾರೀ ಹಿನ್ನೆಡೆ ಹಿನ್ನೆಲೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿಯನ್ನ ಸಂತೋಷ ಲಾಡ್ ಅವರೇ ತಡೆ ಹಿಡಿಸಿದ್ದಾರೆ ಎನ್ನಲಾಗಿದೆ. ಸಂಡೂರಿಗೆ ಸಿದ್ದರಾಮಯ್ಯ ಬಂದು ಹೋಗುತ್ತಿದ್ದಂತೆ ಆದೇಶ ಹೊರಬಿದದ್ದಿದೆ ಎನ್ನಲಾಗಿದೆ.

The post ಕಲಘಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೂ ತಟ್ಟಿದ ನಾಯಕರ ಕಿತ್ತಾಟದ ಬಿಸಿ..? appeared first on News First Kannada.

Source: newsfirstlive.com

Source link