ಕಲಬುರಗಿ: ಜಿಲ್ಲೆಯಲ್ಲಿ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲೇ 6 ಸಾವಿರಕ್ಕೂ ಹೆಚ್ಚು ಮಕ್ಕಳು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಅದೃಷ್ಟವಶಾತ್ ಮಕ್ಕಳ್ಯಾರೂ ಸೋಂಕಿನಿಂದ ಸಾವನ್ನಪ್ಪಿಲ್ಲ ಎನ್ನಲಾಗಿದೆ. ಹೆಚ್ಚು ಹೆಚ್ಚು ಮಕ್ಕಳು ಸೋಂಕಿಗೆ ಒಳಗಾಗುತ್ತಿರುವುದರಿಂದ ಪೋಷಕರು ಆತಂಕಕ್ಕೊಳಗಾಗಿದ್ದಾರಂತೆ.

ಏಪ್ರಿಲ್ 1 ರಿಂದ ಈವರೆಗೆ ಬರೋಬ್ಬರಿ 40 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದ್ದು ಈವರೆಗೆ 435 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಇನ್ನು ಇಲ್ಲಿವರೆಗೆ ಒಟ್ಟು 779 ಜನರು ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ತಗ್ಗುತ್ತಿದ್ದರೂ ಸಾವಿನ ಸಂಖ್ಯೆ ಮುಂದುವರಿಕೆಯಾಗಿದೆ. ಸೋಂಕಿನಿಂದಾಗಿ ನಿತ್ಯ 3 ರಿಂದ 4 ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಹೇಳಲಾಗಿದೆ.

The post ಕಲಬುರಗಿಯಲ್ಲಿ ಎರಡೇ ತಿಂಗಳಲ್ಲಿ 6 ಸಾವಿರ ಮಕ್ಕಳಿಗೆ ಕೊರೊನಾ; ಬೆಚ್ಚಿಬಿದ್ದ ಪೋಷಕರು appeared first on News First Kannada.

Source: newsfirstlive.com

Source link