ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಮೇ 27 ರಿಂದ ಮೇ 31ರವರೆಗೆ ಟಫ್ ಲಾಕ್‍ಡೌನ್ ಮಾಡಲಾಗಿದೆ.

ಕೊರೊನಾ ನಿಯಂತ್ರಣ ಬರುತ್ತಿದ್ದರೂ ಸಹ, ಮಹಾಮಾರಿಯನ್ನ ಸಂಪೂರ್ಣವಾಗಿ ತೊಲಗಿಸಲು ಕಲಬುರಗಿ ಜಿಲ್ಲಾಡಳಿತ ಮುಂದಾಗಿದೆ. ಕೊರೊನಾಗೆ ಫುಲ್ ಸ್ಟಾಪ್ ಇಡಲು ಮೇ 27 ರ ಬೆಳಗ್ಗೆ ಆರು ಗಂಟೆಯಿಂದ ಮೇ 31ರ ಬೆಳಗ್ಗೆ ಆರು ಗಂಟೆವರೆಗೆ ಮೆಡಿಕಲ್, ಹಾಸ್ಪಿಟಲ್ ಹೊರೆತುಪಡಿಸಿ ಎಲ್ಲಾ ಅಗತ್ಯ ವಸ್ತುಗಳ ಖರೀದಿಗೆ ನಾಲ್ಕು ದಿನಗಳ ಕಾಲ ಬ್ರೇಕ್ ಹಾಕಿ ಕಲಬುರಗಿ ಜಿಲ್ಲಾಧಿಕಾರಿ ವಿ ವಿ ಜ್ಯೋತ್ಸ್ನಾ ಆದೇಶ ಹೊರಡಿಸಿದ್ದಾರೆ.

ನಾಲ್ಕು ದಿನಗಳ ಕಟ್ಟುನಿಟ್ಟಿನ ಲಾಕ್‍ಡೌನ್ ಸಂದರ್ಭದಲ್ಲಿ ಕೇವಲ ಹಾಲು ಖರೀದಿ ಮತ್ತು ಪೆಟ್ರೋಲ್ ನಗರ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಲಾಕ್‍ಡೌನ್ ಉಲ್ಲಂಘಿಸಿ ಹೊರಬಂದ್ರೆ ಕಠಿಣ ಕ್ರಮ ಕೈಗೊಳ್ಳಲು ನಗರ ಪೊಲೀಸರಿಂದ ಡಿಸಿ ಜ್ಯೋತ್ಸ್ನಾ ಆದೇಶಿಸಿದ್ದಾರೆ.

The post ಕಲಬುರಗಿಯಲ್ಲಿ ಮೇ 27 ರಿಂದ ಮೇ 31ರವರೆಗೆ ಟಫ್ ಲಾಕ್‍ಡೌನ್ appeared first on Public TV.

Source: publictv.in

Source link