
ಸಾರಿಗೆ ಖಾತೆ ಸಚಿವ ಬಿ.ಶ್ರೀರಾಮುಲು
ಕಂದಕಕ್ಕ್ ಬಿದ್ದ ಬಸ್ನ್ನು ಎರಡು ಕ್ರೇನ್ ಬಳಸಿ ರಕ್ಷಣಾ ಸಿಬ್ಬಂದಿ ಮೇಲಕ್ಕೆ ಎತ್ತಲಾಗಿದೆ. ಘಟನಾ ಸ್ಥಳದಲ್ಲಿ ಒಂದು ಮಗು ಸೇರಿದಂತೆ ಮೂವರ ಶವಗಳು ಪತ್ತೆಯಾಗಿದ್ದು, ಬಸ್ನಲ್ಲಿ ಇಬ್ಬರ ಶವಗಳು ಸೇರಿ ಸದ್ಯ ಐವರ ಶವಗಳು ಪತ್ತೆಯಾಗಿವೆ.
ಬೆಂಗಳೂರು: ಜಿಲ್ಲೆಯ ಕಮಲಾಪುರ ಬಳಿ ಖಾಸಗಿ ಬಸ್ ದುರಂತ ಸಂಭವಿಸಿದ್ದು, ಬಸ್ನಲ್ಲಿದ್ದ 7 ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ವಿಧಾನಸೌಧದಲ್ಲಿ ಸಾರಿಗೆ ಖಾತೆ ಸಚಿವ ಬಿ.ಶ್ರೀರಾಮುಲು ಹೇಳಿಕೆ ನೀಡಿದ್ದಾರೆ. ಒಂದೇ ಕುಟುಂಬದ 35 ಜನ ಪ್ರಯಾಣಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದಿದ್ದು, ಅಪಘಾತ ಸ್ಥಳಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳನ್ನು ಕಳಿಸಿದ್ದೇವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದೇವೆ. ತನಿಖೆ ಪೂರ್ಣಗೊಂಡ ನಂತರ ಏನಾಗಿದೆ ಎಂದು ಹೇಳುತ್ತೇನೆ. ಖಾಸಗಿ ಬಸ್ ಆಗಿರುವುದರಿಂದ ಪರಿಹಾರದ ಬಗ್ಗೆ ಸಿಎಂ ಜತೆ ಚರ್ಚೆ ಮಾಡಲಾಗುವುದು. ಅಪಾಯ ಇರುವಲ್ಲಿ ರಸ್ತೆ ಸುರಕ್ಷತಾ ಅನುದಾನ ಬಳಸುವ ಕೆಲಸ ಮಾಡಲಾಗುತ್ತದೆ. ಸರ್ಕಾರ ಮತ್ತಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಬಿ. ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.