ಕಲಬುರಗಿ: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ ಯುವತಿ | Young woman drowned in water in Kalaburagi


ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಯುವತಿ ದಾನೇಶ್ವರಿ ಎಂಬುವರು ಕೊಚ್ಚಿಹೋದ ಘಟನೆ ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಲಾಡಮುಗಳಿ ಬಳಿ ನಡೆದಿದೆ.

ಕಲಬುರಗಿ: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ ಯುವತಿ

ಕೊಚ್ಚಿ ಹೋದ ಯುವತಿ

ಕಲಬುರಗಿ: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಯುವತಿ ದಾನೇಶ್ವರಿ ಎಂಬುವರು ಕೊಚ್ಚಿಹೋದ ಘಟನೆ ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಲಾಡಮುಗಳಿ ಬಳಿ ನಡೆದಿದೆ. ದಾನೇಶ್ವರಿ (18) ತಾಯಿ ಜೊತೆ ಬಟ್ಟೆ ತೊಳೆಯಲು ಹಳ್ಳಕ್ಕೆ ತೆರಳಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಭೇಟಿ ನೀಡಿದ್ದು, ಯುವತಿ ದಾನೇಶ್ವರಿಗಾಗಿ ಶೋಧ ಕಾರ್ಯಾಚರಣೆ ನಡೆದಿದೆ.

ಉಕ್ಕಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿಹೋದ ಯುವಕನಿಗಾಗಿ ಶೋಧ

ಬೆಳಗಾವಿ: ಉಕ್ಕಿ ಹರಿಯುತ್ತಿದ್ದ ಹಳ್ಳದಲ್ಲಿ ಯುವಕ ಕೊಚ್ಚಿಹೋಗಿರುವ ಘಟನೆ ಗೋಕಾಕ್​ ತಾಲೂಕಿನ ಕೊಳವಿ ಗ್ರಾಮದ ಬಳಿ ನಡೆದಿದೆ. ದುಂಡಪ್ಪ ಬಸಪ್ಪ ಮಾಲದಿನ್ನಿ (23) ಕೊಚ್ಚಿಕೊಂಡು ಹೋದ ಯುವಕ.

ದುಂಡಪ್ಪ ಬಸಪ್ಪ ಮಾಲದಿನ್ನಿ ಜಮೀನಿನಿಂದ ಮನೆಗೆ ಹಿಂದಿರುಗುವಾಗ ದಿಢೀರ್ ಮಳೆಯಿಂದ ಹಳ್ಳದಲ್ಲಿ ಭಾರಿ ಪ್ರಮಾಣದ ನೀರು ಬಂದಿತ್ತು. ಈ ವೇಳೆ ಹಳ್ಳದ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾನೆ. ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಯುವಕನಿಗಾಗಿ ಹುಡುಕಾಟ ನಡೆದಿದೆ. ಗೋಕಾಕ್​ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಹಳ್ಳದಲ್ಲಿ ಸಿಲುಕಿದ್ದ ರೈತರ ರಕ್ಷಣೆ

ಕೊಪ್ಪಳ: ಕೊಪ್ಪಳ ತಾಲೂಕಿನ ಕೋಳೂರು ಬಳಿ ಪಂಪ್​ ಸೆಟ್ ತರಲು ಹೋಗಿ ಹಳ್ಳದ ಮಧ್ಯೆ ಸಿಲುಕಿದ್ದ ಐವರು ರೈತರನ್ನು ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ರೈತರಾದ ಮಹಾಂತೇಶ ಡೊಳ್ಳಿನ್, ರಮೇಶ್ ಡೊಳ್ಳಿನ್, ಬಸವರಾಜ ಬಸವರಾಜ ಹುಯಿಲಗೋಳ, ಕೆಂಚಪ್ಪ ಕುರುಬರನ್ನು ಅಗ್ನಿಶಾಮಕ ದಳ ಸಿಬ್ಬಂದಿ ಬೋಟ್​ನಲ್ಲಿ ತೆರಳಿ ರಕ್ಷಣೆ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.