ಕಲಬುರಗಿ: ಪಾಲಿಕೆ ಸದಸ್ಯೆಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸದಂತೆ, ಮೇಯರ್ ಚುನಾವಣೆಯಲ್ಲಿ ಭಾಗವಹಿಸದಂತೆ ಸದಸ್ಯೆಗೆ ತಡೆಯಾಜ್ಞೆ | Kalburgi Council Member restricted to take oath and participate in Mayor Elections


ಕಲಬುರಗಿ: ಪಾಲಿಕೆ ಸದಸ್ಯೆಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸದಂತೆ, ಮೇಯರ್ ಚುನಾವಣೆಯಲ್ಲಿ ಭಾಗವಹಿಸದಂತೆ ಸದಸ್ಯೆಗೆ ತಡೆಯಾಜ್ಞೆ

ಸಾಂದರ್ಭಿಕ ಚಿತ್ರ

ಕಲಬುರಗಿ: ಪಾಲಿಕೆ ಸದಸ್ಯೆಯಾಗಿ ಪ್ರತಿಜ್ಞಾವಿಧಿ ಸ್ವೀಕಾರ, ಮತದಾನಕ್ಕೆ ಕಲಬುರಗಿ ಪಾಲಿಕೆ ವಾರ್ಡ್ 24ರ ಸದಸ್ಯೆ ಪ್ರಿಯಾಂಕಾಗೆ ತಡೆಯಾಜ್ಞೆ ನೀಡಲಾಗಿದೆ. ಮಹಾನಗರ ಪಾಲಿಕೆ ಸದಸ್ಯೆಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸದಂತೆ ಹಾಗೂ ಮೇಯರ್​ ಚುನಾವಣೆಯಲ್ಲಿ ಭಾಗಿಯಾಗದಂತೆ ತಡೆಯಾಜ್ಞೆ ಹೊರಡಿಸಲಾಗಿದೆ. ಕಲಬುರಗಿಯ 3ನೇ ಹೆಚ್ಚುವರಿ ಸೆಷನ್ಸ್​ ಕೋರ್ಟ್​ನಿಂದ ಈ ಬಗ್ಗೆ ಆದೇಶ ನೀಡಲಾಗಿದೆ. ಡಿಸೆಂಬರ್ 4 ರಂದು ನ್ಯಾಯಾಲಯ ಈ ಬಗ್ಗೆ ಆದೇಶ ಹೊರಡಿಸಿದೆ.

21 ವರ್ಷವಾಗದಿದ್ದರೂ ಪಾಲಿಕೆ ಚುನಾವಣೆಗೆ ಸ್ಪರ್ಧೆ ಆರೋಪ ಕೇಳಿಬಂದಿತ್ತು. ಪ್ರಿಯಾಂಕಾ ಸ್ಪರ್ಧೆಯನ್ನು ಸೈಯದ್ ನೂರ್ ಫಾತಿಮಾ ಪ್ರಶ್ನಿಸಿದ್ದರು. ವಾರ್ಡ್ ನಂಬರ್ 24ರ ಬಿಜೆಪಿ ಸದಸ್ಯೆಯಾಗಿರುವ ಪ್ರಿಯಾಂಕಾ, ಸುಳ್ಳು ಮಾಹಿತಿ ನೀಡಿ ಚುನಾವಣೆಗೆ ಸ್ಪರ್ಧಿಸಿದ್ದಾರೆಂದು ಆರೋಪ ವ್ಯಕ್ತವಾಗಿತ್ತು. ಈ ಬಗ್ಗೆ, ಡಿಸೆಂಬರ್ 15ಕ್ಕೆ ಮತ್ತೆ ಸೆಷನ್ಸ್​ ಕೋರ್ಟ್​ ವಿಚಾರಣೆ ನಿಗದಿಪಡಿಸಿದೆ. ಸೆಷನ್ಸ್​ ಕೋರ್ಟ್​ ಆದೇಶ ಪ್ರಶ್ನಿಸಿ ಬಿಜೆಪಿ ಸದಸ್ಯೆ ಪ್ರಿಯಾಂಕಾ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಎಪಿಪಿ ನೇಮಕದಲ್ಲಿ ಅಕ್ರಮ ಆರೋಪ ಹಿನ್ನೆಲೆ; ಅಭಿಯೋಜಕರಾಗಿ ಆರೋಪಿತರ ಮುಂದುವರಿಸದಂತೆ ಆದೇಶ
ಎಪಿಪಿ ನೇಮಕದಲ್ಲಿ ಅಕ್ರಮ ಆರೋಪ ಹಿನ್ನೆಲೆ ಅಭಿಯೋಜಕರಾಗಿ ಆರೋಪಿತರ ಮುಂದುವರಿಸದಂತೆ ಆದೇಶ ನೀಡಲಾಗಿದೆ. ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ನಿರ್ದೇಶನ ನೀಡಿದೆ. 61 ಎಪಿಪಿಗಳ ವಿರುದ್ಧ ಆರೋಪಪಟ್ಟಿ ದಾಖಲಾಗಿರುವ ಹಿನ್ನೆಲೆ, 4 ತಿಂಗಳಲ್ಲಿ ಇಲಾಖಾ ವಿಚಾರಣೆ ಪೂರ್ಣಗೊಳಿಸಲು ಆದೇಶ ಹೊರಡಿಸಲಾಗಿದೆ. ಲೋಕಾಯುಕ್ತ ವಕೀಲರಿಗೆ ಹೈಕೋರ್ಟ್ ಸೂಚನೆ ನೀಡಿದೆ.

ಕ್ರಿಮಿನಲ್ ಪ್ರಕರಣದ ವಿಚಾರಣೆ ತ್ವರಿತಗೊಳಿಸಲು ಆದೇಶ ನೀಡಲಾಗಿದೆ. ಸಮಾಜ ಪರಿವರ್ತನಾ ಸಮುದಾಯ ಈ ಬಗ್ಗೆ ಪಿಐಎಲ್ ಸಲ್ಲಿಸಿತ್ತು. 2014ರಲ್ಲಿ ಎಎಪಿಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಆಗಿತ್ತು ಎಂದು ಲೋಕಾಯುಕ್ತ ಪೊಲೀಸರು ಚಾರ್ಜ್​​ಶೀಟ್ ದಾಖಲಿಸಿದ್ದರು.

TV9 Kannada


Leave a Reply

Your email address will not be published. Required fields are marked *