ಕಲಬುರಗಿ: ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಆರಂಭವಾದ ಅದ್ಧೂರಿ ಶೋಭಾ ಯಾತ್ರೆ | Kalaburagi: A grand Shobha Yatre Start with the tight police security


ಕಲಬುರಗಿ: ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಆರಂಭವಾದ ಅದ್ಧೂರಿ ಶೋಭಾ ಯಾತ್ರೆ

ಕಲಬುರಗಿ: ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಆರಂಭವಾದ ಅದ್ಧೂರಿ ಶೋಭಾ ಯಾತ್ರೆ

ಕಲಬುರಗಿ: ಶ್ರೀರಾಮನವಮಿ ಅಂಗವಾಗಿ ಶ್ರೀರಾಮಸೇನೆ ನೇತೃತ್ವದಲ್ಲಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಬೃಹತ​​ ಶೋಭಾ ಯಾತ್ರೆ ಆರಂಭವಾಗಿದೆ. ಪಟ್ಟಣದ ರಾಮ ಮಾರುಕಟ್ಟೆಯಲ್ಲಿ ಯಾತ್ರೆಗೆ ಚಾಲನೆ ನೀಡಿದ್ದು, ಸಂಜೆ ಗಣೇಶ್ ಮಂದಿರ ಬಳಿ ಅಂತ್ಯವಾಗಲಿದೆ. ಯಾತ್ರೆಯಲ್ಲಿ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ವಿವಿಧ ಮಠಗಳ ಸ್ವಾಮೀಜಿಗಳು, ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಶೋಭಾ ಯಾತ್ರೆ ಮಾರ್ಗದಲ್ಲಿರುವ ಮಸೀದಿ, ದರ್ಗಾಗಳಿಗೂ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ. ಅಂಗಡಿ ಮುಗ್ಗಟ್ಟು ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಶೋಭಾ ಯಾತ್ರೆಯಲ್ಲಿ ಹಿಂದೂಗಳು ಭಾಗಿಯಾಗಿದ್ದು, ಕೇಸರಿ ಧ್ವಜ ಹಿಡಿಕೊಂಡು ಜೈ ಶ್ರೀರಾಮ ಘೋಷಣೆಯೊಂದಿಗೆ ಡಿಜೆ ಸೌಂಡ್​ಗೆ ಯುವಕರು ಹೆಜ್ಜೆ ಹಾಕಿದ್ದಾರೆ. ಕಳೆದ ಮಾರ್ಚ್ 1 ರಂದು ಲಾಡ್ಲೆ ಮಸಾಕ್ ದರ್ಗಾದಲ್ಲಿರುವ ಶಿವನ ಲಿಂಗ ಶುದ್ದೀಕರಣ ವೇಳೆ ಆಳಂದ ಪಟ್ಟಣದಲ್ಲಿ ಗಲಾಟೆ ನಡೆದಿತ್ತು. ಈ ಹಿನ್ನಲೆ ಇಂದು ಕೂಡ ಆಳಂದ ಪಟ್ಟಣದಲ್ಲಿ ಪೊಲೀಸ್ ಕಟ್ಟೆಚ್ಚರ ವಹಿಸಿದೆ.

TV9 Kannada


Leave a Reply

Your email address will not be published.