ಕಲಬುರಗಿ: ಮತ್ತೆ ಲಘು ಭೂಕಂಪನ; ಆತಂಕದಲ್ಲಿ ಮನೆಯಿಂದ ಹೊರ ಬಂದು ಮಳೆಯಲ್ಲಿಯೇ ಕಾಲ ಕಳೆದ ಗ್ರಾಮಸ್ಥರು | Earthquake experienced in gadikeshwar to kalaburagi

ಕಲಬುರಗಿ: ಮತ್ತೆ ಲಘು ಭೂಕಂಪನ; ಆತಂಕದಲ್ಲಿ ಮನೆಯಿಂದ ಹೊರ ಬಂದು ಮಳೆಯಲ್ಲಿಯೇ ಕಾಲ ಕಳೆದ ಗ್ರಾಮಸ್ಥರು

ಪ್ರಾತಿನಿಧಿಕ ಚಿತ್ರ

ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಮತ್ತೆ ಲಘು ಭೂಕಂಪದ ಅನುಭವವಾಗಿದೆ. ಇಂದು (ಅಕ್ಟೋಬರ್ 9) ನಸುಕಿನ ಜಾವ 5.40 ರ ಸಮಯದಲ್ಲಿ ಎರಡು ಬಾರಿ ಲಘು ಭೂಕಂಪನದ ಅನುಭವವಾಗಿದೆ. ಕಂಪನಕ್ಕೆ ಮನೆಯಲ್ಲಿದ್ದ ಪಾತ್ರೆಗಳು ಕೆಳಗೆ ಬಿದ್ದಿದ್ದು, ಆತಂಕದಿಂದ ಮನೆಯಿಂದ ಹೊರಬಂದ ಗ್ರಾಮಸ್ಥರು ಮಳೆಯಲ್ಲಿಯೇ ಕಾಲ ಕಳೆದಿದ್ದಾರೆ.

ನಿನ್ನೇ ಕೂಡಾ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಲಘು ಭೂಕಂಪನವಾಗಿತ್ತು. ಕಳೆದ ಕೆಲ ವರ್ಷಗಳಿಂದ ಭೂಮಿಯಿಂದ ಭಾರೀ ಸದ್ದು ಕೇಳಿ ಬರುತ್ತಿತ್ತು. ಇದೀಗ ಜನರಿಗೆ ಮೇಲಿಂದ ಮೇಲೆ ಲಘು ಭೂಕಂಪನದ ಅನುಭವವಾಗುತ್ತಿದೆ.

ಮಳೆಯಲ್ಲಿಯೇ ಕಾಲ ಕಳೆದ ಗ್ರಾಮಗಳ ಜನರು
ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೆಲವಡೆ ಲಘು ಭೂಕಂಪನವಾದ ಹಿನ್ನೆಲೆ, ಮನೆಯಿಂದ ಹೊರ ಬಂದಿದ್ದ ಜನರು, ಮಳೆಯಲ್ಲೇ ನಿಲ್ಲಬೇಕಾಯಿತು. ಕಳೆದ ರಾತ್ರಿಯಿಂದ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಗಡಿಕೇಶ್ವರ, ಹಲಚೇರಾ ಗ್ರಾಮದ ಜನರು ಮಳೆಯಲ್ಲೇ ನೆನೆಯುವಂತಾಯಿತು.

ಇದನ್ನೂ ಓದಿ:
ವಿಜಯಪುರದ ತಿಕೋಟಾ ತಾಲೂಕಿನಲ್ಲಿ ಭೂಕಂಪನ; ರಿಕ್ಟರ್ ಮಾಪಕದಲ್ಲಿ 2.5 ರಷ್ಟು ತೀವ್ರತೆ ದಾಖಲು

ಕಲಬುರಗಿ: ರಾತ್ರಿ ಒಂದು ಗಂಟೆಗೆ ಲಘು ಭೂಕಂಪದ ಅನುಭವ; ಆತಂಕದಲ್ಲಿ ಮನೆಯಿಂದ ಹೊರಬಂದ ಜನರು

TV9 Kannada

Leave a comment

Your email address will not be published. Required fields are marked *