ಕಲಬುರಗಿ: ರೈಲ್ವೆ ನಿಲ್ದಾಣದಲ್ಲಿ ಮಾನವ ಕಳ್ಳ ಸಾಗಣೆ ಶಂಕೆ; ಯುವಕನನ್ನು ವಶಕ್ಕೆ ಪಡೆದ ರೈಲ್ವೇ ಪೊಲೀಸರು | Human Trafficking suspected in Kalaburagi Railway Station Crime News Karnataka Police

ಕಲಬುರಗಿ: ರೈಲ್ವೆ ನಿಲ್ದಾಣದಲ್ಲಿ ಮಾನವ ಕಳ್ಳ ಸಾಗಣೆ ಶಂಕೆ; ಯುವಕನನ್ನು ವಶಕ್ಕೆ ಪಡೆದ ರೈಲ್ವೇ ಪೊಲೀಸರು

ಸಾಂಕೇತಿಕ ಚಿತ್ರ

ಕಲಬುರಗಿ: ರೈಲ್ವೆ ನಿಲ್ದಾಣದಲ್ಲಿ ಮಾನವ ಕಳ್ಳ ಸಾಗಣೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. 12 ವರ್ಷದ ಬಾಲಕಿ ಮುಂಬೈಗೆ ಕರೆದೊಯ್ಯಲು ಯತ್ನಿಸುವ ವಿಚಾರ ಬೆಳಕಿಗೆ ಬಂದಿದೆ. ಬೆಂಗಳೂರಿನಿಂದ ಬಾಲಕಿ ಕರೆದೊಯ್ಯುತ್ತಿದ್ದ ಯುವಕನನ್ನು ವಾಡಿ ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮನೆಗೆಲಸ ಕೊಡಿಸುವುದಾಗಿ ಯುವತಿಯನ್ನು ಯುವಕನೊಬ್ಬ ಕರೆದೊಯ್ಯುತ್ತಿದ್ದ ಎಂದು ತಿಳಿದುಬಂದಿದೆ.

ಬಾಲಕಿಗೆ ಇಷ್ಟವಿಲ್ಲದಿದ್ದರೂ ಯುವಕ ಕರೆದೊಯ್ಯುತ್ತಿದ್ದ. ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಯುವಕನ ಜತೆ ಕಿತ್ತಾಟ ಕಂಡುಬಂದಿತ್ತು. ತಾನು ಬರಲ್ಲವೆಂದು ಜಗಳವಾಡಿ ರೈಲಿನಿಂದ ಬಾಲಕಿ ಇಳಿದಿದ್ದಳು. ಚೈಲ್ಡ್ ಹೆಲ್ಪ್​​ ಲೈನ್ ಗಮನಕ್ಕೆ ಬಂದು ಬಾಲಕಿಯ ರಕ್ಷಣೆ ಮಾಡಲಾಗಿದೆ. ಮಹಾರಾಷ್ಟ್ರದ ಯುವಕ ವಿವೇಕ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ರಾಮನಗರ: ಯುವತಿಯ ಮೇಲೆ ಗ್ರಾಮ ಪಂಚಾಯತಿ ‌ಸದಸ್ಯ ಹಲ್ಲೆ
ಯುವತಿಯ ಮೇಲೆ ಗ್ರಾಮ ಪಂಚಾಯತಿ ‌ಸದಸ್ಯ ಹಲ್ಲೆ ಮಾಡಿದ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಮೆಣಸಿಗನಹಳ್ಳಿ ಗ್ರಾಮದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಯುವತಿಯ‌ ಕಪಾಳಕ್ಕೆ ಹೊಡೆದು, ಜುಟ್ಟು ಹಿಡಿದು‌ ನೆಲಕ್ಕೆ ಬೀಳಿಸಿ ದರ್ಪ ತೋರಿರುವ ವಿಚಾರ ಲಭ್ಯವಾಗಿದೆ. ಹಲ್ಲೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭೂಹಳ್ಳಿ ಗ್ರಾಮ ಪಂಚಾಯತ್ ಸದಸ್ಯ ಸಿದ್ದರಾಜು ಎಂಬಾತನಿಂದ ಘಟನೆ ನಡೆದಿದೆ. ಮೆಣಸಿಗನಹಳ್ಳಿ ಗ್ರಾಮದ ಯುವತಿ ಉಮಾ ಎಂಬವರ ಮೇಲೆ ಹಲ್ಲೆ ಮಾಡಲಾಗಿದೆ.

ಜಮೀನಿನ ಮಧ್ಯೆ ಕಾಲುವೆ ನಿರ್ಮಾಣ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು. ಜಮೀನಿಗೆ ಮಳೆಯ ನೀರು ಹರಿದು ಬರುತ್ತಿರುವ ವಿಚಾರಕ್ಕೆ ವಾಗ್ವಾದ ಶುರುವಾಗಿತ್ತು. ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಸಿದ್ದರಾಜು ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಎರಡು ದಿನಗಳ ಹಿಂದೆ ನಡೆದಿರೋ ಘಟನೆ ವಿಡಿಯೋ ಮೂಲಕ ಬೆಳಕಿಗೆ ಬಂದಿದೆ. ಇದೀಗ ಕುಟುಂಬಸ್ಥರ ಜೊತೆ ಸಿದ್ದರಾಜು ರಾಜಿ‌ ಮಾಡಿಕೊಂಡಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.

ಬೆಂಗಳೂರು: ಮೊಬೈಲ್ ದರೋಡೆ ಪ್ರಕರಣಕ್ಕೆ ತಿರುವು
ಕೊಡಿಗೆಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆಕಾಶ್, ನಂಜುಂಡಸ್ವಾಮಿ, ಎರಿಸ್ವಾಮಿ ಬಂಧಿತ ಆರೋಪಿಗಳು ಆಗಿದ್ದಾರೆ. ತಲೆಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರಿದಿದೆ. ದರೋಡೆಕೋರರು ಮೊಬೈಲ್ ಕಿತ್ತುಕೊಂಡಿದ್ದಾರೆಂದು ದೂರು ಕೇಳಿಬಂದಿತ್ತು. ಸಂತೋಷ್​ ಎಂಬವರು ಬೆಂಗಳೂರಿನ ಕೊಡಿಗೆಹಳ್ಳಿ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ವೇಳೆ ಬ್ಲ್ಯಾಕ್​ಮೇಲ್​ ಕಹಾನಿ ಬಹಿರಂಗವಾಗಿದೆ.

ಸಂತೋಷ್​ 2 ವರ್ಷದಿಂದ ಯುವತಿಯೊಬ್ಬಳ್ಳನ್ನು ಪ್ರೀತಿಸುತ್ತಿದ್ದರು. ಇತ್ತೀಚೆಗೆ ಸಂತೋಷ್, ಯುವತಿಯ ಲವ್ ಬ್ರೇಕಪ್​ ಆಗಿತ್ತು. ಆಕೆಯ ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್​ಮೇಲ್​ ಮಾಡುತ್ತಿದ್ದರು. ಸಂತೋಷ್​ನ ಮೊಬೈಲ್​ನಲ್ಲಿರುವ ಫೋಟೋ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೇಗಾದರೂ ಮಾಡಿ ಫೋಟೋ ಡಿಲೀಟ್​ ಮಾಡಲು ಮನವಿ ಮಾಡಲಾಗಿದೆ. ಈ ಬಗ್ಗೆ ಯುವತಿ ತನ್ನ ಮತ್ತೊಬ್ಬ ಗೆಳೆಯನ ಬಳಿ ಹೇಳಿಕೊಂಡಿದ್ದರು. ಮಧ್ಯರಾತ್ರಿ ಸಂತೋಷ್​ ಮನೆಗೆ ನುಗ್ಗಿ ಮೊಬೈಲ್​ ದರೋಡೆ ಮಾಡಲಾಗಿದೆ. ಸಂತೋಷ್​ನ ಮಾಜಿ ಪ್ರಿಯತಮೆ ಸ್ನೇಹಿತರಿಂದ ದರೋಡೆ ಮಾಡಲಾಗಿದೆ. ಹೀಗಾಗಿ ಸಂತೋಷ್​ ಕೊಡಿಗೆಹಳ್ಳಿ ಠಾಣೆಗೆ ದೂರು ನೀಡಿದ್ದರು. ಸಂತೋಷ್​ನ ಮಾಜಿ ಪ್ರಿಯತಮೆಯಿಂದಲೂ ಪ್ರತಿದೂರು ನೀಡಲಾಗಿತ್ತು. ಸಂತೋಷ್​ ವಿರುದ್ಧ ಬ್ಲ್ಯಾಕ್​ಮೇಲ್​ ಆರೋಪದಡಿ ದೂರು ದಾಖಲಾಗಿತ್ತು.

ರಾಯಚೂರು: ಲಾರಿ ತೆರವುಗೊಳಿಸುವಾಗ ಉರುಳಿಬಿದ್ದ ಕ್ರೇನ್​
ಪಲ್ಟಿಯಾಗಿದ್ದ ಲಾರಿ ತೆರವುಗೊಳಿಸುವಾಗ ಕ್ರೇನ್ ಉರುಳಿಬಿದ್ದ​ ಘಟನೆ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಮಲ್ಲರಗುಡ್ಡ ಗ್ರಾಮದ ತೋರಣದಿನ್ನಿ ರಸ್ತೆಯಲ್ಲಿ ನಡೆದಿದೆ. ಭಾರಿ ಮಳೆಯಿಂದ ಸೇತುವೆ ಕುಸಿದು ಲಾರಿ ಪಲ್ಟಿಯಾಗಿತ್ತು. ನಿನ್ನೆ ಲಾರಿ ಪಲ್ಟಿಯಾಗಿ 350 ಚೀಲ ಭತ್ತ ನೀರುಪಾಲಾಗಿತ್ತು. ಲಾರಿ ತೆರವುಗೊಳಿಸಲು ಬಂದಿದ್ದ ಬೃಹತ್ ಗಾತ್ರದ ಕ್ರೇನ್​ ಪಲ್ಟಿ ಆಗಿದೆ. ಕ್ರೇನ್ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಭಿಕ್ಷುಕರಿಗೆ ಹಣ ಕೊಡಲೇಬೇಡಿ: ಬೆಂಗಳೂರು ಹುಡುಗರು ತಂಡದ ಈ ಅಭಿಯಾನದ ಹಿನ್ನೆಲೆ, ಉದ್ದೇಶವೇನು? ಇಲ್ಲಿದೆ ವಿವರ

ಇದನ್ನೂ ಓದಿ: Crime News: ವಿದ್ಯಾರ್ಥಿಯನ್ನು ಅಪಹರಿಸಿ ಹಣಕ್ಕೆ ಬೇಡಿಕೆ; 6 ಆರೋಪಿಗಳ ಬಂಧನ

TV9 Kannada

Leave a comment

Your email address will not be published. Required fields are marked *