ಕಲಬುರುಗಿ: ಗೂಡ್ಸ್​​ನಲ್ಲಿ ತಲೆದಿಂಬುಗಳ ಜೊತೆ ಗಾಂಜಾ ಸಾಗಾಟ; 340 ಕೆಜಿ ಗಾಂಜಾ ಜಪ್ತಿ, ಮೂವರ ಬಂಧನ | Police arrested 3 people and seize 340 KG Ganja from them in Kalaburagi Talluk Upalanv Cross

ಕಲಬುರುಗಿ: ಗೂಡ್ಸ್​​ನಲ್ಲಿ ತಲೆದಿಂಬುಗಳ ಜೊತೆ ಗಾಂಜಾ ಸಾಗಾಟ; 340 ಕೆಜಿ ಗಾಂಜಾ ಜಪ್ತಿ, ಮೂವರ ಬಂಧನ

ಆರೋಪಿಗಳು ಹಾಗೂ ಅವರಿಂದ ವಶಪಡಿಸಿಕೊಂಡ ಗಾಂಜಾ ಮತ್ತು ಪ್ರಕರಣ ಭೇದಿಸಿದ ಪೊಲೀಸರು

ಗೂಡ್ಸ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಕಲಬುರಗಿ ತಾಲೂಕಿನ ಉಪಳಾಂವ್ ಕ್ರಾಸ್ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ. ಗೂಡ್ಸ್​​ನಲ್ಲಿ ತಲೆದಿಂಬುಗಳ ಜತೆ ಗಾಂಜಾ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ 340 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ.

ತೆಲಂಗಾಣದ ಧರ್ಮಾಚಲಂನಿಂದ ಕಲಬುರಗಿಗೆ ಗೂಡ್ಸ್​ನಲ್ಲಿ ಗಾಂಜಾ ಸಾಗಾಟ ಮಾಡಲಾಗುತ್ತಿತ್ತು. ಕಲಬುರಗಿ ಸಿಇಎನ್ ಪಿಎಸ್​ಐ ವಹೀದ್ ಕೊತ್ವಾಲ್ ನೇತೃತ್ವದ ತಂಡದಿಂದ ದಾಳಿ ನಡೆಸಿ ಅಕ್ರಮ್, ಸಮೇರ್, ಮೋಹನ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಮೋಹನ್, ಭಾಲ್ಕಿ ತಾಲೂಕಿನ ಮಾವಿನಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಅಕ್ರಮ್, ಸುಮೇರ್ ಮಹಾರಾಷ್ಟ್ರ ದ ಲಾಥೂರ್ ನಿವಾಸಿಗಳಾಗಿದ್ದಾರೆ.

Kalaburagi Ganja arrest

ಗೂಡ್ಸ್​ನಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿಗಳು

ಗೂಡ್ಸ್​ನಲ್ಲಿ ಹಿಂದೆ ತಲೆದಿಂಬುಗಳನ್ನಿಟ್ಟು, ಮುಂದೆ ಗಾಂಜಾ ಸಾಗಣೆಯನ್ನು ಆರೋಪಿಗಳು ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕಲಬುರಗಿ ತಾಲೂಕಿನ ಉಪಳಾಂವ್ ಕ್ರಾಸ್ ಬಳಿ ವಾಹನವನ್ನು ಜಪ್ತಿ ಮಾಡಲಾಗಿದೆ. ಈ ಮೂಲಕ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಬೃಹತ್ ಜಾಲವನ್ನು ಸಿಇಎನ್ ಪೊಲೀಸರು ಭೇದಿಸಿದಂತಾಗಿದೆ.

ಇದನ್ನೂ ಓದಿ:

ಅಪೌಷ್ಠಿಕತೆ ಇರುವ ಮಕ್ಕಳ ದತ್ತು ಸ್ವೀಕಾರ; ಕೋಲಾರದಲ್ಲಿ ಮಹತ್ವದ ಅಭಿಯಾನ

ಬೆಂಗಳೂರು: ಡ್ರಾಪ್ ಕೇಳುವ ನೆಪದಲ್ಲಿ ಮೊಬೈಲ್, ಹಣ ದರೋಡೆ; ಸಿಮ್ ವಾಪಸ್ ಕೇಳಿದ್ದಕ್ಕೆ ವ್ಯಕ್ತಿಗೆ ಚಾಕುವಿನಿಂದ ಹಲ್ಲೆ

ಕಲಬುರಗಿ: ಮತ್ತೆ ಲಘು ಭೂಕಂಪನ; ಆತಂಕದಲ್ಲಿ ಮನೆಯಿಂದ ಹೊರ ಬಂದು ಮಳೆಯಲ್ಲಿಯೇ ಕಾಲ ಕಳೆದ ಗ್ರಾಮಸ್ಥರು

TV9 Kannada

Leave a comment

Your email address will not be published. Required fields are marked *