ಜನಪ್ರಿಯ ರಿಯಾಲಿಟಿ ಶೋ ರಾಜಾ-ರಾಣಿ ಸೆಮಿ ಫಿನಾಲೆ ಕಂಪ್ಲಿಟ್ ಮಾಡಿ ಯಶಸ್ವಿಯಾಗಿ ಫಿನಾಲೆಯತ್ತ ಹೆಜ್ಜೆ ಇಟ್ಟಿದೆ. ಇನ್ನೇನು ರಾಜಾ ರಾಣಿ ಮುಗಿತಲ್ಲ.. ಆ ಸ್ಲಾಟ್ನಲ್ಲಿ ಮತ್ಯಾವ ಕಾರ್ಯಕ್ರಮ ಬರಲಿದೇ ಅನ್ನೋ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ..
ಹೌದು, ಕಲರ್ಸ್ ಕನ್ನಡ ಒಳ್ಳೊಳ್ಳೆ ಕಾರ್ಯಕ್ರಮಗಳನ್ನ ನೀಡುತ್ತಾ ಬಂದಿದ್ದು, ಒಂದಕ್ಕಿಂತ ಒಂದು ಸೂಪರ್ ಹಿಟ್ ಆಗಿವೆ. ಪ್ರತಿ ಕಾರ್ಯಕ್ರಮದಲ್ಲಿಯೂ ಹೊಸತನ ನೀಡುತ್ತಿದೆ. ಈಗ ಮತ್ತೆ ಅಂತಹದ್ದೆ ಒಂದು ಶೋನ ಪರಿಚಯಿಸುತ್ತಿದೆ. ಆ ಹೊಸ ರಿಯಾಲಿಟಿ ಗೇಮ್ ಶೋ ನನ್ನಮ್ಮ ಸೂಪರ್ ಸ್ಟಾರ್.
ಮನೆಯಲ್ಲಿ ಅಮ್ಮಂದಿರು ಮಾಡುವ ಕೆಲಸಕ್ಕೆ ಬೆಲೆ ಕಟ್ಟಲಾಗದು. ಅವರು ಪಡೋ ಶ್ರಮದಿಂದಲೇ ಒಂದು ಮನೆ ಸ್ವರ್ಗದ ರೂಪ ಪಡೆಯೋದು ಅಂತಾ ಹೇಳ್ತಾರೆ ಅದು ಅಕ್ಷರಶಃ ಸತ್ಯ. ಮಕ್ಕಳು ಮಾಡುವ ತರ್ಲೆ, ತುಂಟಾಟಗಳನ್ನ ಸಹಿಸಿಕೊಂಡು ಮನೆಯವರನ್ನ ಖುಷಿಯಾಗಿ ಇಡಲು ಸತತವಾಗಿ ಪ್ರಯತ್ನಿಸುತ್ತಾಳೆ. ಅಂತಹ ಅಮ್ಮಂದಿರಗಾಗಿ ಕಲರ್ಸ್ ಕನ್ನಡ ನನ್ನಮ್ಮ ಸೂಪರ್ ಸ್ಟಾರ್ ಶೋನ ತರುತ್ತಿದ್ದು ಈ ಶೋ ಹೊಸ್ಟ್ ಮಾಡುತ್ತಿರುವವರು ನಮ್ಮ ಟಾಕಿಂಗ್ ಸ್ಟಾರ್ ಸೃಜನ್ ಲೊಕೇಶ್.
ಈಗಾಗಲೇ ಕಾಮಿಡಿ ಶೋ ಮಜಾ ಟಾಕಿಸ್ ಹಾಗೂ ರಾಜಾ-ರಾಣಿ ಶೋಗಳ ಮೂಲಕ ಮನೆಮಾತಾಗಿರುವ ಸೃಜನ್ ಅವರು ನನ್ನಮ್ಮ ಸೂಪರ್ ಸ್ಟಾರ್ ಶೋನ ಸಾರಥ್ಯ ವಹಿಸಲಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ರಿಯಾಲಿಟಿ ಶೋಗಳು ಜನಮನ ಗೆದ್ದಿವೆ. ಎಷ್ಟೋ ವರ್ಷಗಳಾದ ಮೇಲೆ ವಿಭಿನ್ನವಾಗಿ ನನ್ನಮ್ಮ ಸೂಪರ್ ಸ್ಟಾರ್ ಶೋ ಮೂಡಿ ಬರಲು ಸಜ್ಜಾಗಿದ್ದು, ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಒಟ್ನಲ್ಲಿ ಸದಾ ಮನೆಯವರ ಹಿತಕ್ಕಾಗಿ ಶ್ರಮ ಪಡುತ್ತಿದ್ದ ಅಮ್ಮಂದಿರಿಗೆ ತಮ್ಮ ಪ್ರತಿಭೆಯನ್ನ ಜಗತ್ತಿಗೆ ಪರಿಚಯಿಸಲು ದೊಡ್ಡ ಪ್ಲಾಟ್ ಫಾರ್ಮ್ ಕ್ರಿಯೇಟ್ ಮಾಡಿ ಕೊಡಲು ಸಜ್ಜಾಗಿದೆ ನನ್ನಮ್ಮ ಸೂಪರ್ ಸ್ಟಾರ್.