ಕೊರೊನಾ ಎರಡನೇ ಅಲೆಯ ಅಬ್ಬರಕ್ಕೆ ಲಾಕ್​ಡೌನ್​ ಹೇರಿರುವ ರಾಜ್ಯ ಸರ್ಕಾರ ವಿಶೇಷ ಆರ್ಥಿಕ ಪ್ಯಾಕೇಜ್​​ ಕೂಡ ಘೋಷಣೆ ಮಾಡಿದೆ. ಚಿತ್ರರಂಗಕ್ಕೂ ಸರ್ಕಾರ ವಿಶೇಷ ಪ್ಯಾಕೇಜ್​ ಘೋಷಿಸಿದ್ದು, ಇದೀಗ ಚಿತ್ರರಂಗದಲ್ಲಿ ಗೊಂದಲ ಶುರುವಾಗಿದೆ. ಹೌದು.. ಘೋಷಣೆಯ ಬೆನ್ನಲ್ಲೇ ಕಲಾವಿದರು ಅಂದರೆ ಯಾರು? ಸಿನಿಮಾ ಕಲಾವಿದರ ,ಕಿರುತೆರೆ ಕಲಾವಿದರ,ಜಾನಪದ ಕಲಾವಿದ ಅಥವಾ ರಂಗಭೂಮಿ ಕಲಾವಿದರ ಅನ್ನೋ ಗೊಂದಲಕ್ಕಿ ಬಿದ್ದಿದ್ದಾರೆ ಚಿತ್ರರಂಗದ ಕಲಾವಿದರು. ಸದ್ಯ ಈ ಕನ್​ಫ್ಯೂಶನ್​ ದೂರ ಮಾಡಲು ಫಿಲ್ಮ್ ಚೇಂಬರ್ ಅಧ್ಯಕ್ಷ ಡಿ.ಅರ್ ಜೈರಾಜ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಇನ್ನು ಸರ್ಕಾರ  ಕಲಾವಿದರಿಗೆ ₹3000 ಪರಿಹಾರ ಹಣ ಘೋಷಿಸಿದಕ್ಕೆ  ಸಿನಿ ಕಾರ್ಮಿಕರು ಸರ್ಕಾರದ ವಿರುದ್ದ  ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಒಂದು ವರ್ಷದಿಂದ ಕೆಲಸ ಇಲ್ಲದೇ ಸಿನಿಮಾ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಕಳೆದ ಆರ್ಥಿಕ ಪ್ಯಾಕೇಜ್​​ನಲ್ಲೂ ನಮ್ಮನ್ನ ಪರಿಗಣಿಸಿರಲಿಲ್ಲ. ಈಗ ಮತ್ತೆ ಸರ್ಕಾರ ನಮ್ಮನ್ನ ಕಡೆಗಣಿಸಿದೆ ಅಂತ ಸಿನಿ ಕಾರ್ಮಿಕರು ಸರ್ಕಾರದ ನಡೆಗೆ ಬೇಸರ ಹೊರಹಾಕಿದ್ದಾರೆ.

ಇನ್ನೊಂದೆಡೆ, ಇಡೀ ಕನ್ನಡ ಚಿತ್ರರಂಗ ಸದ್ಯ ದುಸ್ಥಿತಿಯಲ್ಲಿದೆ. ಚಿತ್ರರಂಗವನ್ನೇ ನಂಬಿ ಬದುಕುತ್ತಿರುವ ಜನ ಬಳಲುತ್ತಿದ್ದಾರೆ. ಸರ್ಕಾರ ಕಲಾವಿದರಿಗೆ ವಿಶೇಷ ಆರ್ಥಿಕ ಪ್ಯಾಕೇಜ್​ ಘೋಷಿಸಿದೆಯಾದ್ರೂ, ನಿರ್ದೇಶಕರಿಗೆ ಹಾಗೂ ತಂತ್ರಜ್ಞರಿಗೆ ಯಾವುದೇ ಪ್ಯಾಕೇಜ್​ ಅನೌನ್ಸ್​ ಮಾಡಿಲ್ಲ. ಈ ಬಗ್ಗೆ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಟೇಶಿ ವೆಂಕಟೇಶ್ ಮಾತನಾಡಿದ್ದು, ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆ ಸಚಿವ ಸಿ.ಸಿ ಪಾಟೀಲ್​ಗೆ ಪತ್ರ ಬರೆದಿದ್ದಾರೆ.

‘ಕಳೆದ ವರ್ಷ ಕೊರೊನಾ ಬಂದಾಗಿನಿಂದಲೂ ಸಂಬಂಧಪಟ್ಟ ಅಧಿಕಾರಿಗಳು, ಡಿಸಿ, ಕಮಿಷನರ್​​ರನ್ನ ಭೇಟಿಯಾಗುತ್ತಲೇ ಇದ್ದೇನೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಬಾರಿಯೂ ಯಾವುದೇ ಪ್ಯಾಕೇಜ್​​ನಲ್ಲಿ ನಮ್ಮ ವರ್ಗವನ್ನು ಪರಿಗಣಿಸಿಲ್ಲ. ಈ ಬಾರಿಯ ಪ್ಯಾಕೇಜ್​ನಲ್ಲೂ ನಮ್ಮ ನಿರ್ದೇಶಕರನ್ನು ಹಾಗೂ ತಂತ್ರಜ್ಞರನ್ನು ಪರಿಗಣಿಸಿಲ್ಲ. ಕನ್ನಡ ಚಿತ್ರರಂಗವನ್ನೇ ನಂಬಿ ಬದುಕುತ್ತಿರುವವರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ನೀವು ಕಾಪಾಡಬೇಕಾಗಿದೆ. ಇದು ಸರ್ಕಾರದ ಹೊಣೆ ಕೂಡ ಹೌದು. ಧರ್ಮ, ಸಮಾಜ, ಸಂಸ್ಕೃತಿ, ಭಾಷೆ, ಐತಿಹಾಸಿಕವಾಗಿ ಎಲ್ಲ ರೀತಿಯಲ್ಲೂ ಕನ್ನಡ ಚಿತ್ರರಂಗದ ಕೊಡುಗೆ ಅಪಾರವಾಗಿದೆ. ಈ ಕೊಡುಗೆಗಳನ್ನ ಪರಿಗಣಿಸಿ ಕನ್ನಡ ಚಿತ್ರರಂಗದ ಪರವಾಗಿ ನೀವು ನಿಂತುಕೊಳ್ಳಬೇಕು. ಸಹಾಯ ಹಸ್ತ ಚಾಚುವ ಮೂಲಕ ನಮ್ಮ ಜೊತೆ ನಿಲ್ಲಬೇಕು. ಈ ಕೂಡಲೇ ನಿರ್ದೇಶಕರಿಗೆ ಹತ್ತು ಸಾವಿರ ರೂಪಾಯಿ ಸಹಾಯ ಧನ ನೀಡಬೇಕು’ ಅಂತ ಟೇಶಿ ವೆಂಕಟೇಶ್ ಮನವಿ ಮಾಡಿದ್ದಾರೆ.

The post ಕಲಾವಿದರಿಗೆ ₹3000 ವಿಶೇಷ ಪ್ಯಾಕೇಜ್​; ಗೊಂದಲದಲ್ಲಿ ಚಿತ್ರರಂಗ.. ನಿರ್ದೇಶಕರಿಗೆ ಮತ್ತೆ ಮೋಸ? appeared first on News First Kannada.

Source: newsfirstlive.com

Source link