ಕಲುಷಿತ ನೀರು ಸೇವನೆ ಮಾಡಿ 6 ಮಂದಿ ಸಾವು; ಕರ್ತವ್ಯಲೋಪದಡಿ ಎಇಇ ‘ತಲೆದಂಡ’

ವಿಜಯನಗರ: ಕಲುಷಿತ ನೀರು ಕುಡಿದು ಆರು ಜನ ಸಾವು ಪ್ರಕರಣ ಸಂಬಂಧ ಕರ್ತವ್ಯಲೋಪದಡಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಅಮಾನತು ಮಾಡಲಾಗಿದೆ.

ಎಂ.ಡಿ ಕುಮಾರ್​​ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಅಮಾನತು ಆದವರು. ಇವರು ಗ್ರಾಮೀಣ ನೀರು ಸರಬರಾಜು ಇಲಾಖೆಯ ಎಇಇ ಆಗಿದ್ದಾರೆ.

ಇನ್ನು, ಕೇಸ್​​ ಸಂಬಂಧ ಬಳ್ಳಾರಿ ಜಿಲ್ಲಾ ಪಂಚಾಯತಿಯೂ ಗ್ರಾಮೀಣಾಭಿವೃದ್ಧಿ ಇಲಾಖೆ ವರದಿ ಕಳಿಸಿತ್ತು. ಈ ಕೂಡಲೇ ಎಚ್ಚೆತ್ತ ಗ್ರಾಮೀಣಾಭಿವೃದ್ಧಿ ಇಲಾಖೆ ಕ್ರಮ ತೆಗೆದುಕೊಂಡಿದೆ.

ಈ ಹಿಂದೆಯೇ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮಕರಬ್ಬಿ ಗ್ರಾಮದಲ್ಲಿ ಇತ್ತೀಚಿಗೆ ಕಲುಷಿತ ನೀರು ಕುಡಿದು ಓರ್ವ ಸಾವನ್ನಪ್ಪಿದ ಬೆನ್ನಲ್ಲೆ ಮತ್ತೇ ಮೂರು ಜನ ಮೃತಪಟ್ಟಿದ್ದು ಸಾವಿನ ಸಂಖ್ಯೆ 6 ಕ್ಕೇರಿದೆ.

ಇದನ್ನೂ ಓದಿ: ವಿಜಯನಗರ: ಕಲುಷಿತ ನೀರು ಸೇವನೆ ಪ್ರಕರಣ, ಐದಕ್ಕೇರಿದ ಸಾವಿನ ಸಂಖ್ಯೆ

News First Live Kannada

Leave a comment

Your email address will not be published. Required fields are marked *