ನವದೆಹಲಿ: ರಾಜ್ಯದಲ್ಲಿ ಬಿಟ್ ಕಾಯಿನ್ ಹ್ಯಾಕಿಂಗ್ ಬಗ್ಗೆ ಬಿಸಿಬಿಸಿ ಚರ್ಚೆ ಆಗ್ತಿದೆ. ದೇಶದಲ್ಲಿ ಕ್ರಿಪ್ಟೋ ಕರೆನ್ಸಿ ಅಂತಹ ಡಿಜಿಟಲ್ ಹಣಕಾಸು ವ್ಯವಹಾರಗಳ ಮಾರುಕಟ್ಟೆಗಳನ್ನ ಕಾನೂನು ಬದ್ಧಗೊಳಿಸಬೇಕಾ? ಬೇಡವಾ? ಅನ್ನೋದ್ರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಭಾರತದಲ್ಲಿ ಇನ್ನೂ ಕ್ರಿಪ್ಟೋ ಕರೆನ್ಸಿ ಬಗ್ಗೆ ಸ್ಪಷ್ಟನೆಯೇ ಬಹುತೇಕವಾಗಿ ಸಿಕ್ಕಿಲ್ಲ.. ಆದ್ರೆ ವಿಶ್ವಾದ್ಯಂತ ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆಯಲ್ಲಿ ಕಲ್ಪನೆಗೂ ಮೀರಿದ ಬೆಳವಣಿಗಗಳು ನಡೆದಿವೆ.
ಸೋಲಾನಾ, ಬಿನಾನ್ಸ್ ಕಾಯಿನ್, XRP, Cardano, ETHERIUM, ಬಿಟ್ಕಾಯಿನ್, ಪೊಲ್ಕಾಡಾಟ್, ಡಾಜ್ಕಾಯಿನ್, ಟೆಥರ್, USD ಕಾಯಿನ್ ಅತ್ಯಂತ ವೇಗವಾಗಿ ಬೆಳವಣಿಗೆ ಆಗುತ್ತಿವೆ. ಕಳೆದ ದಶಕದಲ್ಲಿ ಕ್ರಿಪ್ಟೋಕರೆನ್ಸಿ ಮೌಲ್ಯ ಒಟ್ಟಾರೆಯಾಗಿ 230 ಲಕ್ಷ ಕೋಟಿ ತುಲುಪಿದೆ. ಅಂದ್ರೆ ಬಹುತೇಕವಾಗಿ ಇಂದಿನ ಭಾರತದ ಎಕಾನಮಿಷ್ಟು ಕ್ರಿಪ್ಟೋ ಕರೆನ್ಸಿ ಮೌಲ್ಯ ತಲುಪಿದೆ.
ವಿಶೇಷ ಅಂದ್ರೆ ಕಳೆದ ದಶಕದಲ್ಲಿ ಒಟ್ಟಾರೆಯಾಗಿ ಕ್ರಿಪ್ಟೋ ಕರೆನ್ಸಿ ಮೌಲ್ಯ ಸುಮಾರು 35-40 (0.5 ಟ್ರಿಲಿಯನ್ ಡಾಲರ್) ಲಕ್ಷ ಕೋಟಿ ರೂಪಾಯಿಗಷ್ಟೇ ತಲುಪಲು ಸಾಧ್ಯವಾಗಿತ್ತು. ಆದ್ರೆ ಕಳೆದ ನವೆಂಬರ್ ನಿಂದ ಈ ನವೆಂಬರ್ ವರೆಗೆ ಅಂದ್ರೆ ಕೇವಲ 12 ತಿಂಗಳಲ್ಲಿ ಇದು ಆರು ಪಟ್ಟು ಬೆಳವಣಿಗೆ ಕಂಡಿದ್ದು ಬಹುತೇಕ 3 ಟ್ರಿಲಿಯನ್ ಡಾಲರ್ ಅಂದ್ರೆ ಸುಮಾರು 230 -240 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ.
ಆದ್ರೆ ಕಳೆದ ಒಂದು ವರ್ಷದಲ್ಲಿ, ಕೊರೊನಾ ಅತಿ ಹೆಚ್ಚು ಇದ್ದಾಗಲೇ ಕ್ರಿಪ್ಟೋ ಮಾರುಕಟ್ಟೆ ನಿರೀಕ್ಷೆಗೂ ಮೀರಿ ಬೆಳವಣಿಗೆ ಆಗಿದ್ದು ವಿಶೇಷವಾಗಿದೆ.
ಕಳೆದ 7 ದಿನಗಳಲ್ಲಿ ಕ್ರಿಪ್ಟೋ ಕರೆನ್ಸಿ ಗ್ರೋಥ್ ಹೇಗಿದೆ..?
- SOLANA-20
- BINANCECOIN-19.3
- XRP-16
- CARDANO 11.9
- ETHERUM 10.6
- POLKADOT 9.2
- DOGECOIN 5
- TETHER 0.05
- USDCOIN 0.04