ಕಳೆದ ವಾರ ಸುದೀಪ್​ ಅವರು ತೆಗೆದುಕೊಂಡ ಕ್ಲಾಸ್​ಗೆ ಬಿಗ್​ ಮನೆ ಒಂದು ರೀತಿ ಶಾಂತಿ ನಿವಾಸ ಆಗಿತ್ತು. ಟಾಸ್ಕ್​ಗಳ ನಡುವೆ ಅಲ್ಲಲ್ಲಿ ಒಂದಿಷ್ಟು ಮುನಿಸು, ವೈಮನಸ್ಸು ಕಂಡುಬಂದಿತ್ತಾದರೂ, ಅವಗಳನ್ನು ಯಾರೂ ಹೆಚ್ಚು ಮುಂದುವರೆಸಲಿಲ್ಲ.. ಎಲ್ಲ ಟಾಸ್ಕ್​ಗಳನ್ನು ಕೂಲ್​ ಆಗಿಯೇ ನಿಭಾಯಿಸಿದ್ರು. ಇನ್ನೇನು ಎಲ್ಲವೂ ಚೆನ್ನಾಗಿ ಇದೆ ಎನ್ನುವಷ್ಟರಲ್ಲಿ ವಾರದ ಕಳಪೆ, ಅತ್ಯುತ್ತಮ ನೀಡಿದ್ದೇ ತಡ ಬಿಗ್​ ಮನೆಯಲ್ಲಿ ಅಸಮಾಧಾನ ಭುಗಿಲೆದ್ದಿದೆ.

ಕಳಪೆ ನೀಡುವ ಮೊದಲೇ ಚಕ್ರವರ್ತಿ ಅವರು ಮಾತನಾಡಿ, ದಿವ್ಯಾ ಯು ಅವರಿಗೆ ಆದ ಗಾಯವನ್ನು ನಾನು ಬೇಕಂತ ಮಾಡಿಲ್ಲ. ಆದ್ರೆ ನನ್ನಿಂದಾಗಿ ಅವಳು ನೋವು ಅನುಭವಿಸಬೇಕಾಯಿತು. ಹೀಗಾಗಿ ನಾನೇ ಕಳಪೆಗೆ ಹೋಗುತ್ತೇನೆ ಅಂತಾರೆ. ಇದಕ್ಕೆ ಮನೆಯ ಸದಸ್ಯರು ಒಪ್ಪುವುದಿಲ್ಲ. ಏನಿದಿಯೋ ಅದು ಫಾರ್​ಮ್ಯಾಟ್​ ಪ್ರಕಾರನೇ ನೀಡಬೇಕು ಅಂತಾರೆ.

ಹೀಗಾಗಿ ಪ್ರಿಯಾಂಕಾ ಅವರು ಚಕ್ರವರ್ತಿ ಅವರ ನಡುವಳಿಕೆಯ ರೀಸನ್ ಕೊಟ್ಟು ಕಳಪೆ ನೀಡುತ್ತಾರೆ. ನಂತರ ಪ್ರಶಾಂತ್​, ಶುಭಾ, ದಿವ್ಯಾ ಉರುಡುಗ ಹಾಗೂ ಶಮಂತ್​ ಅವರು ದಿವ್ಯಾ ಅವರಿಗೆ ಪೆಟ್ಟು ಬಿದ್ದಾಗ ಇನ್ನೊಂಚೂರು ಹೆಚ್ಚು ಕಮ್ಮಿ ಆಗಿದ್ದಿದ್ರೆ ಇದು ಯಾವ ಲೆವೆಲ್ಲಿಗೆ ಬೇಕಾದ್ರೂ ಹೋಗ್ಬೋದಿತ್ತು ಅಂತಾ ಕಳಪೆಗೆ ಕಾರಣ ನೀಡಿದ್ದಾರೆ.

ಈ ಕಾರಣಗಳಿಗೆ ರೊಚ್ಚಿಗೆದ್ದ ಚಕ್ರವರ್ತಿ ಅವರು ನಾನು ಎಲ್ಲರಿಗೂ ಉತ್ತರ ಕೊಡುತ್ತೇನೆ. ಈಗ ಯುದ್ಧ ಆರಂಭವಾಗಿದೆ. ನನ್ನ ಹತ್ರ ಎಲ್ರೂ ಬರಲೇಬೇಕು. ಕರ್ನಾಟಕದ ಜನತೆಗೆ ಒಬ್ಬೊಬ್ಬರ ಬಂಡವಾಳ ಬಯಲು ಮಾಡ್ತೀನಿ ಎಂದು ಜೈಲಿಗೆ ಹೋಗ್ತಾರೆ.

ಇಷ್ಟೇ ಆಗಿದ್ದರೆ ಈ ವಿಷಯ ಇಷ್ಟೊಂದು ಚರ್ಚೆಗೆ ಗ್ರಾಸವಾಗುತ್ತಿರಲಿಲ್ಲ. ಆದ್ರೆ ಈಗ ಚಕ್ರವರ್ತಿ ಅವರ ವರ್ತನೆ ಬಗ್ಗೆ ಮನೆಯವರಿಗೆ ಬೇಸರ ಮೂಡಿಸಿದೆ. ಕಳಪೆ ಬಂದ ಚಕ್ರವರ್ತಿ ಅವರು ತರಕಾರಿ ಹೆಚ್ಚಲ್ಲ ಎಂದು ಸ್ಟ್ರೈಕ್​ ಮಾಡಿದ್ದು, ಕಳಪೆ ನೀಡಿದ 5 ಜನರು ಬಂದು ಕಾರಣ ನೀಡಿ ಕನ್ವಿನ್ಸ್​ ಮಾಡಬೇಕು. ಅದಕ್ಕೆ ಶಮಂತ್​ ಹೋಗಿ ಕ್ಲಾರಿಫೈ​ ಮಾಡಲು ಟ್ರೈ ಮಾಡ್ತಾನೆ.

ಆಗ ಚಕ್ರವರ್ತಿ, ನೀನು ನಂಬಿದವರ ಕುತ್ತಿಗೆ ಕೊಯ್ದುಬಿಟ್ಟೆ. ಸ್ನೇಹಕ್ಕೆ ಮೋಸ ಮಾಡಿದೆ. ಎಂದು ರೊಚ್ಚಿಗೇಳುತ್ತಾರೆ. ಇದನ್ನು ಕೇಳಿದ ಶಮಂತ್​, ಕುತ್ತಿಗೆ ಕೊಯ್ದಿದ್ದೀನಾ..? ಎಲ್ಲಿ ಕೊಯ್ದೆ ತೋರಿಸಿ. ಈ ರೀತಿ ರಾಂಗ್​ ಸ್ಟೇಟ್​ಮೆಂಟ್​ ಮಾಡಬೇಡಿ. ನೀವು ತಪ್ಪಾಗಿ ಏನೇನೋ ಹೇಳಿದ್ರೆ ಹೆಂಗೆ. ನೀವು ನಂಗೆ ಎಷ್ಟು ದಿನದ ಫ್ರೆಂಡ್​. ನನ್ನ ಎಷ್ಟು ದಿನದಿಂದಾ ನೋಡಿದ್ದೀರಾ ಎಂದು ಕೆರಳಿ ಕೆಂಡವಾಗ್ತಾನೆ.

ಇತ್ತ ಪ್ರಶಾಂತ್​, ಶುಭಾ ಮತ್ತು ಪ್ರಿಯಾಂಕಾ ನಾವು ಏನೂ ಹೇಳಬೇಕೋ ಅದನ್ನು ಹೇಳಿದ್ದೇವೆ. ಮತ್ತೆ ಎಲ್ಲವನ್ನೂ ಹೇಳುವ ಅವಶ್ಯಕತೆ ಇಲ್ಲ. ಅವರಿಗೆ ಏನಾದ್ರೂ ಹೇಳುವುದಿದ್ದರೆ ಹೇಳಲಿ ಎನ್ನುತ್ತಾರೆ. ಇಷ್ಟಕ್ಕೇ ಸುಮ್ಮನಿರದ ಚಕ್ರವರ್ತಿ ಅವರು ಇವರ ಬಗ್ಗೆ ಹಾಡು ಹೇಳುತ್ತಾರೆ. ತರಕಾರಿ ಸ್ಟ್ರೈಕ್​ನಿಂದ ಮನೆಯವರು ಅಡುಗೆ ಮಾಡಲು ಹರಸಾಹಸ ಪಡುತ್ತಾರೆ.

ಇನ್ನೂ ಮತ್ತೊಂದು ಪ್ರೋಮೊ ಬಿಡಲಾಗಿದ್ದು, ಇದ್ರಲ್ಲಿ ಚಕ್ರವರ್ತಿ ಅವರು ಕಳಪೆ ನೀಡಿದವರ ಕುರಿತು ಹಾಡು ಬರೆದು, ಒಟ್ಟಿಗೆ ಅನ್ನಾ ತಿಂದು ಮೋಸ ಮಾಡಿದ ಸ್ನೇಹಿತರು ಎಂದು ಕಪ್ಪು ಬಾವುಟ ಹಿಡಿದು ಹೋರಾಟಕ್ಕೆ ನಿಂತಿದ್ದಾರೆ. ಆಚೆ ಬಂದಮೇಲೆ ಬೇರೆ ತರಹದ ಪ್ರಾಬ್ಲಮ್​ ಇದೆ ಎಂದು ಟಾಂಗ್​ ನೀಡಿದ್ದಾರೆ.

ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶ ಅಂದ್ರೆ, ಕಳಪೆಯಿಂದ ಚಂದ್ರಚೂಡ್‌ ಡೇಂಜರ್‌ ಝೋನ್‌ನಲ್ಲಿ ಇರೋದಿಲ್ಲ. ಯಾಕಂದ್ರೆ, ಅವರು ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿಲ್ಲ. ಒಂದು ವೇಳೆ ಅವರು ನಾಮಿನೇಷನ್ ಲಿಸ್ಟ್‌ನಲ್ಲಿ ಇದ್ದಿದ್ರೆ, ಬಹುಶಃ ಪರಿಣಾಮ ಸ್ವಲ್ಪ ಸ್ಟ್ರಾಂಗ್ ಆಗಿಯೇ ಇರ್ತಿತ್ತೋ ಏನೋ. ಆದ್ರೂ ಅವರ ವರ್ತನೆಗೆ ಅರ್ಥ ಇಲ್ಲ ಎಂಬುದು ಮನೆಯವರ ಮನದ ಮಾತು.

ಇನ್ನು ವಾರಗಳ ಹಿಂದೆ ಕಳಪೆ ಪಡೆದಿದ್ದ ಶುಭಾ ಅವರಿಗೆ ಅತ್ಯುತ್ತಮವನ್ನು ನೀಡಲಾಗಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಸುದೀಪ್​ ಯಾವ ರೀತಿ ಪಂಚಾಯಿತಿ ನೀಡಲಿದ್ದಾರೆ. ಯಾವುದು ಸರಿ. ಯಾರದು ತಪ್ಪು ತಿಳಿಯಲು ಕಿಚ್ಚನ ಅಭಿಪ್ರಾಯ ಕೇಳಲು ಕಾತರದಿಂದ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್​ಗೆ ವೀಕ್ಷಕರು ಕಾಯುತ್ತಿದ್ದಾರೆ.

The post ಕಳಪೆ ಕಮೆಂಟ್​ಗೆ ಚಕ್ರವರ್ತಿ ಸಿಡಿಮಿಡಿ.. ಕಂಗಾಲಾದ ಬಿಗ್​ಮನೆ ಸದಸ್ಯರು appeared first on News First Kannada.

Source: newsfirstlive.com

Source link