ಕಾನ್ಪುರ ಟೆಸ್ಟ್ನಲ್ಲಿ ಚೊಚ್ಚಲ ಶತಕ ಸಿಡಿಸಿದ ಶ್ರೇಯಸ್ ಅಯ್ಯರ್, ಸದ್ಯ ಹೀರೋ ಆಗಿದ್ದಾರೆ. ಆದರೆ ತಂಡಕ್ಕೆ ನೆರವಾಗಿರುವ ಅಯ್ಯರ್, ಅನೇಕ ಸವಾಲುಗಳನ್ನ ಮೆಟ್ಟಿ ನಿಂತು, ಫೈಟರ್ ಎನಿಸಿಕೊಂಡಿದ್ದಾರೆ. ಇಷ್ಟಕ್ಕೂ ಅಯ್ಯರ್ರ ತೆರೆಮರೆಯ ಯಶಸ್ಸಿನ ಕಥಾನಕ ಏನು..?
ಶ್ರೇಯಸ್ ಅಯ್ಯರ್.. ಭಾರತ ತಂಡದ ಭರವಸೆಯ ಆಟಗಾರ.. ಈಗಾಗಲೇ ಏಕದಿನ ಮತ್ತು ಟಿ20 ಫಾರ್ಮೆಟ್ನಲ್ಲಿ, ತನ್ನ ಟ್ಯಾಲೆಂಟ್ ತೋರಿಸಿದ್ದಾರೆ. ಇದೀಗ ಟೆಸ್ಟ್ ಕೂಡ ಆಡಬಲ್ಲೆ ಅನ್ನೋದನ್ನ ನಿರೂಪಿಸಿ, ಭೇಷ್ ಎನಿಸಿಕೊಂಡಿದ್ದಾರೆ. ಪದಾರ್ಪಣೆ ಟೆಸ್ಟ್ ಪಂದ್ಯದಲ್ಲೇ ಚೊಚ್ಚಲ ಶತಕ ಸಿಡಿಸಿ ದಿಗ್ಗಜರಿಂದ ಪ್ರಶಂಸೆ ಗಿಟ್ಟಿಸಿಗೊಂಡಿದ್ದಾರೆ ಅಯ್ಯರ್. ಆದರೆ ಮುಂಬೈಕರ್ನ ಯಶಸ್ಸು ಅಷ್ಟು ಸುಲಭಕ್ಕೆ ಸಿಕ್ಕಿದ್ದಲ್ಲ. ಈ ಯಶೋಗಾಥೆಯ ಹಿಂದೆ ಅಪಾರ ಪರಿಶ್ರಮವೇ ಅಡಗಿದೆ.
ಹೌದು..! ಕಳೆದ 3 ವರ್ಷಗಳಿಂದ ಅಯ್ಯರ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ.. ಮೈದಾನದಲ್ಲಿ ಸಮಯೋಚಿತ ಇನ್ನಿಂಗ್ಸ್ ಕಟ್ಟುವ ಅಯ್ಯರ್, ತುಂಬಾ ಹಾರ್ಡ್ವರ್ಕರ್. ಜಿಮ್ನಲ್ಲಿ ಸತತ ಕಸರತ್ತು ನಡೆಸ್ತಿದ್ದ ಈ ಬಲಗೈ ಬ್ಯಾಟ್ಸ್ಮನ್, ದಿನವಿಡೀ ಅಭ್ಯಾಸ ನಡೆಸ್ತಿದ್ದ. ಕ್ರಿಕೆಟ್ ಕಿಟ್ ಹೊತ್ತು ನೆಟ್ಸ್ಗೆ ಹೋದರೆ ಮನೆಗೆ ಮರಳುತ್ತಿದ್ದದ್ದು ಸೂರ್ಯ ಮುಳುಗಿದ ಮೇಲೆ. ಅಯ್ಯರ್ರ ಈ ಪರಿಶ್ರಮವೇ ಇಂದು ಸ್ಟಾರ್ ಪಟ್ಟ ತಂದುಕೊಟ್ಟಿದೆ. ಆದರೆ ಅನೇಕ ಸವಾಲುಗಳನ್ನ ಮೆಟ್ಟಿ ನಿಂತು ಒಬ್ಬ ಫೈಟರ್ನಂತೆ ಇದೀಗ ಎದ್ದು ನಿಂತಿದ್ದಾರೆ.
ಡಿಪ್ರೆಷನ್ಗೆ ಒಳಗಾಗಿ ಕ್ರಿಕೆಟ್ ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದರಂತೆ.!
ಸದ್ಯ ಟೆಸ್ಟ್ನಲ್ಲೂ ನೆಲೆಯೂರುವ ಭರವಸೆ ಮೂಡಿಸಿರುವ ಈ ಮುಂಬೈಕರ್, ಕ್ರಿಕೆಟ್ ಅಭ್ಯಾಸ ಆರಂಭಿಸಿದ್ದು 4ನೇ ವಯಸ್ಸಿನಿಂದ. ತಂದೆಯ ಇಚ್ಚೆಯಂತೆ ಕ್ರಿಕೆಟ್ ಅಕಾಡೆಮಿಗೂ ಸೇರಿದ್ದ. ಆದ್ರೆ 16ನೇ ವಯಸ್ಸಿನಲ್ಲಿ ಡಿಫ್ರೆಷನ್ಗೆ ಒಳಗಾಗಿದ್ದರಂತೆ. ಇದರಿಂದ ಅಚ್ಚುಮೆಚ್ಚಿನ ಕ್ರಿಕೆಟ್ ಅನ್ನೇ ತ್ಯಜಿಸುವ ನಿರ್ಧಾರಕ್ಕೇ ಬಂದಿದ್ದರಂತೆ. ಆದರೆ ಅಂದು ಈ ನಿರ್ಧಾರಕ್ಕೆ ಬರಲು ಕಾರಣ ಏನೆಂಬುದು ಅಯ್ಯರ್ಗೆ ತಿಳಿದಿರಲಿಲ್ಲವಂತೆ.
2016ರಲ್ಲಿ ಅಯ್ಯರ್ಗೆ ದ್ರಾವಿಡ್ರಿಂದ ಸಿಕ್ಕಿತ್ತು ಮಾರ್ಗದರ್ಶನ..!
ಶ್ರೇಯಸ್ ಐಪಿಎಲ್ಗೆ ಎಂಟ್ರಿ ಕೊಟ್ಟಿದ್ದು 2015ರಲ್ಲಿ. ಮೊದಲ ಆವೃತ್ತಿಯಲ್ಲೇ ಗಮನಾರ್ಹ ಪ್ರದರ್ಶನ ನೀಡಿದ ಅಯ್ಯರ್, 2016ರ IPLನಲ್ಲಿ ತೀವ್ರ ಕಳಪೆ ಫಾರ್ಮ್ಗೆ ಒಳಗಾದ್ರು. ಹೀಗಾಗಿ ಡೆಲ್ಲಿ ಡೇರ್ಡೆವಿಲ್ಸ್ ತಂಡದ ಮೆಂಟರ್ ಆಗಿದ್ದ ರಾಹುಲ್ ದ್ರಾವಿಡ್ರಿಂದ ಅಯ್ಯರ್, ಬ್ಯಾಟಿಂಗ್ ಬಗ್ಗೆ ವಿಶೇಷ ಸಲಹೆ ಪಡೆದುಕೊಂಡಿದ್ರು. ಅಂದು ದ್ರಾವಿಡ್ ನೀಡಿದ ಸಲಹೆಗಳು, ತಂಡದಲ್ಲಿ ಸೆಟ್ಬ್ಯಾಕ್ ಆಗುವಂತೆ ಮಾಡಿದ್ವು.!
ಇದನ್ನೂ ಓದಿ:4 ವರ್ಷಗಳಿಂದ ಡಿಪಿ ಬದಲಿಸದ ಅಯ್ಯರ್ ತಂದೆ -ಏನಿದು ಫೋಟೋ ಹಿಂದಿನ ಸ್ಟೋರಿ?
ಇಂಜುರಿ ಕಸಿಯಿತು ನಾಯಕನ ಪಟ್ಟ ಹಾಗೂ ತಂಡದಲ್ಲಿ ಸ್ಥಾನ..!
ಹೌದು..! ಈ ವರ್ಷದ ಮಾರ್ಚ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭುಜದ ಗಾಯದ ಸಮಸ್ಯೆಗೆ ಒಳಗಾದ್ರು ಅಯ್ಯರ್.! ಆದರೆ ಈ ಒಂದು ಇಂಜುರಿ ಅಯ್ಯರ್ರನ್ನ ಮೊದಲ IPLಗೆ ದೂರ ಮಾಡಿತು. ಅಲ್ಲದೆ ನಾಯಕತ್ವವನ್ನೂ ಕಸಿದುಕೊಳ್ತು. ಫಿಟ್ ಆಗದ ಕಾರಣ ಶ್ರೀಲಂಕಾ ಸರಣಿಯನ್ನೂ ತಪ್ಪಿಸಿಕೊಂಡರು. ಒಂದ್ವೇಳೆ ಫಿಟ್ ಆಗಿದ್ರೆ ಈ ಪ್ರವಾಸಕ್ಕೆ ನಾಯಕನಾಗುವ ಸಾಧ್ಯತೆ ಇತ್ತು. ಜೊತೆಗೆ ಟಿ20 ವಿಶ್ವಕಪ್ಗೂ ತಂಡದಲ್ಲೂ ಸ್ಥಾನ ಸಿಗಲಿಲ್ಲ.
ಮಾನಸಿಕ ಒತ್ತಡ, ಇಂಜುರಿ, IPLನಲ್ಲೂ ನೀರಸ ಪ್ರದರ್ಶನ, ಜೊತೆಗೆ ಟೀಕಾ ಪ್ರಹಾರ ಇವೆಲ್ಲವನ್ನೂ ಮೆಟ್ಟಿನಿಂತ ಅಯ್ಯರ್, ಇದೀಗ ಕಾನ್ಪುರ ಟೆಸ್ಟ್ನ ಹೀರೋ.! ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಹೀಗಾಗಿ ಸಾಕಷ್ಟು ಪರಿಶ್ರಮದೊಂದಿಗೆ ಬೆಳೆದ ಶ್ರೇಯಸ್ಗೆ ಯಶಸ್ಸಿನ ಶ್ರೇಯಸ್ಸು ನಿರಂತರ ಸಿಗಲಿ ಅನ್ನೋದೇ ನಮ್ಮೆಲ್ಲರ ಆಶಯ.!
From receiving my Test cap from Sunil Gavaskar Sir to going out there and representing my country in red ball cricket, I’ll carry these two days with me for the rest of my life ❤️🇮🇳 Thank you everyone for your wishes, love and amazing support 🙏 pic.twitter.com/vf4jPIVwqt
— Shreyas Iyer (@ShreyasIyer15) November 26, 2021