ಕಳಸಾ ಬಂಡೂರಿ ಹೋರಾಟ ನಿರತ ರೈತರಿಗೆ ಸಮನ್ಸ್​ ಜಾರಿ ಮಾಡಿದ ಕೋರ್ಟ್​


ಧಾರವಾಡ: ಕಳಸಾ ಬಂಡೂರಿ ನಾಲಾ ಯೋಜನೆಯ ಹೋರಾಟದಲ್ಲಿ ಭಾಗಿಯಾಗಿದ್ದ ರೈತರೋರ್ವರಿಗೆ ನವಲಗುಂದದ ಹಿರಿಯ ದಿವಾಣಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ.

ನವಲಗುಂದ ತಾಲೂಕಿನ ಪಡೆಸೂರು ಗ್ರಾಮದ ರಮೇಶ್ ವೆಂಕರೆಡ್ಡಿ ಎನ್ನುವ ರೈತನಿಗೆ ಸಮನ್ಸ್ ನೀಡಲಾಗಿದೆ. ಡಿಸೆಂಬರ್​ 7 ರಂದು ಕೋರ್ಟ್ ಗೆ ಹಾಜರಾಗಬೇಕೆಂದು ತಿಳಿಸಲಾಗಿದೆ. ಈ ಹಿಂದೆ ಸರ್ಕಾರದಿಂದಲೇ ರೈತರ ಮೇಲಿನ ಎಲ್ಲ ಪ್ರಕರಣ ಹಿಂಪಡೆಯಲಾಗಿದೆ ಎಂದು ಹೇಳಲಾಗಿತ್ತು. ಇದೀಗ ಮತ್ತೆ ಸಮನ್ಸ್ ಜಾರಿಯಾಗಿದ್ದು ರೈತ ಹೋರಾಟಗಾರಲ್ಲಿ ಅಚ್ಚರಿ ಹುಟ್ಟಿಸಿದೆ.

ಕೋರ್ಟ್ ನಲ್ಲಿ ಕೇಸ್ ಮುಕ್ತಾಯ ಎಂದು ಕಂಪ್ಯೂಟರ್ ನಲ್ಲಿ ದಾಖಲಾದ್ರೂ ಸಮನ್ಸ್ ನೀಡಲಾಗಿದೆ ಎಂದು ರೈತರು ಆಕ್ಷೇಪ ವ್ಯಕ್ತಪಡಿಸಿದ್ದು ಇನ್ನು ಕೆಲ ರೈತರಿಗೆ ಸಮನ್ಸ್ ಜಾರಿಯಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಇನ್ನು ವಿಚಾರ ಕುರಿತು ಮಾಜಿ ಶಾಸಕ ಎನ್.ಎಚ್. ಕೋನರೆಡ್ಡಿ ಮಾತನಾಡಿದ್ದು ವಾಪಸ್​ ಪಡೆದ ಕೇಸ್​ಗಳಿಗೆ ಸಮನ್ಸ್​ ಬಂದಿದ್ದು ಹೇಗೆ ಎಂದಿದ್ದಾರೆ. ಮಹದಾಯಿಗಾಗಿ ರೈತರು ಹೋರಾಟ ಮಾಡಿದ್ದರು ಆಗ ಹೋರಾಟಗಾರರ ಮೇಲೆ ಕೇಸು ದಾಖಲಾಗಿದ್ದವು. ಬಳಿಕ ರಾಜ್ಯ ಸರಕಾರ ಕೇಸ್ ವಾಪಸ್ ಪಡೆದಿತ್ತು ಆದ್ರೆ ಇದೀಗ ಅನೇಕ ರೈತರಿಗೆ ಸಮನ್ಸ್ ಬಂದಿವೆ. ಒಮ್ಮೆ ಕೇಸ್ ಮರಳಿ ಪಡೆದ ಮೇಲೆ ಸಮನ್ಸ್ ಬಂದಿದ್ದು ಹೇಗೆ?ಸರಕಾರ ಯಾವುದೇ ಇರಲಿ ಕೇಸ್ ರೀ ಓಪೆನ್ ಮಾಡೋದು ಬೇಡ.

ಕೇಸ್ ವಾಪಸ್ ತೀರ್ಮಾನ ಮಾಡಿಸಿದ್ದು ಸಹ ನಾನೇ ಆದರೆ ಇದೀಗ ಸಮನ್ಸ್ ಬರುತ್ತಿವೆ ಅಂದರೆ ಹೇಗೆ?ಸಿಎಂ ಬೊಮ್ಮಾಯಿ‌ ಕೂಡ ಮಹದಾಯಿಗಾಗಿ ಹೋರಾಟ ಮಾಡಿದವರು ಕೂಡಲೇ ಈ ಬಗ್ಗೆ ಅವರು ಪರಿಶೀಲನೆ ಮಾಡಲಿತಾಂತ್ರಿಕ ಸಮಸ್ಯೆಯಿದ್ದರೆ ಕೂಡಲೇ ಪರಿಹರಿಸಲಿ ಎಂದು ಕೋನರೆಡ್ಡಿ ಹೇಳಿದ್ದಾರೆ.

News First Live Kannada


Leave a Reply

Your email address will not be published. Required fields are marked *